ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಯ್ದೆ ಕೃಪೆ: ಬ್ಯಾಂಕ್ ಜವಾನ ಕೆಲ್ಸ ಸಿಗೋದು ಕಷ್ಟ

By Mahesh
|
Google Oneindia Kannada News

Bank strike
ಬೆಂಗಳೂರು, ಆ.22: ಬ್ಯಾಂಕ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಆ.22ರಿಂದ ದೇಶವ್ಯಾಪ್ತಿ ಬ್ಯಾಂಕ್ ಗಳು ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಮುಷ್ಕರ ಆರಂಭವಾಗಿದೆ. ಬ್ಯಾಂಕ್ ಯೂನಿಯನ್ ಗಳ ಮುಷ್ಕರಕ್ಕೆ ಪ್ರಮುಖ ಕಾರಣ ಮಾನವ ಸಂಪನ್ಮೂಲ ನೇಮಕಾತಿಯಲ್ಲಿ ಖಂಡೇಲ್ ವಾಲ್ ಸಮಿತಿ ನೀಡಿರುವ ಅವೈಜ್ಞಾನಿಕ ಶಿಫಾರಸು. ಈ ಶಿಫಾರಸ್ಸಿನ ಪ್ರಕಾರ ಬ್ಯಾಂಕ್ ಜವಾನನ ಹುದ್ದೆಗೆ ಸೇರಬೇಕಾದ ಅಭ್ಯರ್ಥಿ ಕನಿಷ್ಠ ಪಿಯುಸಿ ಪಾಸಾಗಿರಲೇಬೇಕು ಎಂದಿದೆ.

ಇವೇ ಮುಂತಾದ ಅನೇಕ ಸುಧಾರಣೆಗಳು ಬ್ಯಾಂಕ್ ಕೆಲ್ಸ ಆಸೆ ಇಟ್ಟುಕೊಂಡಿರುವ ಅನೇಕ ಅಭ್ಯರ್ಥಿಗಳಿಗೆ ಮುಳುವಾಗಲಿದೆ. ಅಲ್ಲದೆ, ಹಾಲಿ ನೌಕರರ ಸ್ವಾತಂತ್ರ್ಯಕ್ಕೂ ಕತ್ತರಿ ಬೀಳಲಿದೆ.
ಸುಮಾರು 27 ಸರ್ಕಾರಿ ಸ್ವಾಮ್ಯದ ಬ್ಯಾಂಕ್, 12 ಹಳೆ ಕಾಲದ ಖಾಸಗಿ ಬ್ಯಾಂಕ್ ಹಾಗೂ 8 ವಿದೇಶಿ ಬ್ಯಾಂಕ್ ಗಳು, ಸುಮಾರು 10 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಅಧಿಕಾರಿಗಳು ಸುಮಾರು 87,000 ಬ್ರಾಂಚ್ ಗಳು, 63,000 ಎಟಿಎಂಗಳು ಕೆಲಸ ನಿಲ್ಲಿಸಿದೆ.

ಮುಖ್ಯ ಸಮಸ್ಯೆ: ಬ್ಯಾಂಕಿಂಗ್ ಕಾಯ್ದೆ 1949 ರ ತಿದ್ದುಪಡಿ ಮಾಡಿ ಬ್ಯಾಂಕ್ ಗಳ ವಿಲೀನ, ಖಾಸಗಿ ಮತ್ತು ವಿದೇಶಿ ಬಂಡವಾಳ ಹೂಡಿಕೆ, ನಿರ್ಬಂಧವಿಲ್ಲದ ಮತದಾನದ ಹಕ್ಕು ಹಾಗೂ ಕಾರ್ಪೊರೆಟ್ ಬಿಸಿನೆಸ್ ಹೌಸ್ ಗಳಿಗೆ ಬ್ಯಾಂಕ್ ಸ್ಥಾಪನೆಗೆ ಲೈಸನ್, ಖಾಸಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿವಿಧ ರಾಷ್ಟ್ರಗಳ ಬ್ಯಾಂಕ್ ಗಳ ಸಂಪರ್ಕ, ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಎಫ್ ಡಿಐಗೆ ಅವಕಾಶ ಮುಂತಾದ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿರುವುದನ್ನು ಬ್ಯಾಂಕ್ ಕಾರ್ಮಿಕರ, ಅಧಿಕಾರಿಗಳ ಸಂಘಟನೆ ವಿರೋಧಿಸುತ್ತಿದೆ.

* 1950ರಿಂದ ಬ್ಯಾಂಕ್ ನೌಕರರು ಸಾಮಾನ್ಯ ವೇತನ ಹಾಗೂ ಸೇವಾ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಆದರೆ, ಈಗ ಹೊಸ ಶಿಫಾರಸ್ಸಿನಂತೆ ಬ್ಯಾಂಕ್ ಲಾಭ ಹಾಗೂ ಉತ್ಪನ್ನದ ಕಾರ್ಯಕ್ಷಮತೆ ಆಧಾರಿಸಿ ವಿಶಿಷ್ಟ ವೇತನ ವ್ಯವಸ್ಥೆ ಜಾರಿಗೊಳಿಸಲು ಸೂಚಿಸಲಾಗಿದೆ.
* ಖಂಡೇಲ್ ವಾಲ್ ಸಮಿತಿ ಶಿಫಾರಸ್ಸಿನಂತೆ ಐಟಿ ಕಂಪನಿಗಳಲ್ಲಿ ಜನಪ್ರಿಯಗೊಂಡಿರುವ fixed ಹಾಗೂ variable ವೇತನ ವ್ಯವಸ್ಥೆಯನ್ನು ಬ್ಯಾಂಕ್ ನಲ್ಲೂ ಜಾರಿಗೊಳಿಸಲು ಮುಂದಾಗಿದೆ. ಉದ್ಯೊಗಿಯ ಕಾರ್ಯಕ್ಷಮತೆ ಆಧಾರಿಸಿ ವೇತನ, ಬೋನಸ್ ಏರಿಳಿಕೆಯಾಗಲಿದೆ. ಇದರಿಂದ ನೌಕರರ ನಡುವೆ ಮೇಲು ಕೀಳಿನ ತಾರತಮ್ಯತೆ ಹೆಚ್ಚಾಗಲಿದೆ ಎಂದು UFBU ಆತಂಕ ವ್ಯಕ್ತಪಡಿಸಿದೆ.
* ಬ್ಯಾಂಕ್ ನೌಕರರ, ಅಧಿಕಾರಿಗಳ ವರ್ಗಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಮ್ಯಾನೇಜ್ಮೆಂಟ್ ಗೆ ವಹಿಸಲಾಗುವುದು. ವರ್ಗಾವಣೆಗೆ ಸಂಬಂಧಿಸಿದಂತೆ ಯೂನಿಯನ್ ಹಾಗೂ ಉದ್ಯೋಗಿಗಳ ನಡುವಿನ ಯಾವುದೇ ತಕರಾರುಗಳನ್ನು ಮ್ಯಾನೇಜ್ಮೆಂಟ್ ಸಮಕ್ಷಮದಲ್ಲೇ ಇತ್ಯರ್ಥಗೊಳಿಸಬೇಕು
* ಕ್ಲರ್ಕ್ ಗಳನ್ನು ಅಧಿಕಾರಿಗಳ ಹಂತಕ್ಕೇರಿಸಿ ಬಡ್ತಿ ನೀಡುವುದಕ್ಕೆ ಕೊಕ್ಕೆ ಹಾಕಲಾಗಿದೆ. ಶೇ 50 ರಷ್ಟು ಆಫೀಸರ್ ಹುದ್ದೆಗಳ ನೇಮಕಾತಿ ನೇರವಾಗಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
* ಕ್ಲರ್ಕ್ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಪದವಿ ಹೊಂದಿರಬೇಕು. ಆದರೆ, ಇಲ್ಲಿ ತನಕ ಮೆಟ್ರಿಕ್ಯುಲೇಷನ್ ಹೊಂದಿದ್ದ ನಿರುದ್ಯೋಗಿಗಳಿಗೆ ಬ್ಯಾಂಕ್ ಕ್ಲರ್ಕ್ ಹುದ್ದೆ ಆಸರೆಯಾಗಿತ್ತು. ಈಗ ಈ ಹೊಸ ನಿಯಮದಿಂದ ಲಕ್ಷಾಂತರ ನಿರುದ್ಯೋಗಿಗಳ ಭವಿಷ್ಯ ಕತ್ತಲಾಗಲಿದೆ.
* ಇದೇ ರೀತಿ ಬ್ಯಾಂಕ್ ಜವಾನ/ ಕ್ಲಾಸ್ IV ನೌಕರರ ಹುದ್ದೆ ನೇಮಕಾತಿಗೆ ವಿದ್ಯಾರ್ಹತೆ 8 ನೇ ತರಗತಿ ಪಾಸಾಗಿದ್ದರೆ ಸಾಕಿತ್ತು. ಆದರೆ, ಈಗ ಮೆಟ್ರಿಕ್ಯುಲೇಷನ್ ಪಾಸ್ ಆಗಲೇಬೇಕು ಎಂದು ನಿಯಮ ರೂಪಿಸಲಾಗಿದೆ.
* ನಗರ ಪ್ರದೇಶದಲ್ಲಿ ನೇಮಕಾತಿಗೆ ಬ್ರೇಕ್ ಹಾಕಲಾಗಿದೆ. ಆದರೆ, ತಾತ್ಕಾಲಿಕ ನೇಮಕಾತಿ, ಪದವೀಧರರನ್ನು ಬೇರೆ ಕಡೆಯಿಂದ ಕರೆತರಲು ಬ್ಯಾಂಕ್ ಮ್ಯಾನೇಜ್ಮೆಂಟ್ ಗಳು ಈವರೆಗೂ ಸಫಲವಾಗಿಲ್ಲ.
* ಬ್ಯಾಂಕ್ ಕಾರ್ಯಗಳನ್ನು ಸಂಪೂರ್ಣವಾಗಿ ಹೊರಗುತ್ತಿಗೆ ಆಧಾರದ ಮೇಲೆ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ.

ನೌಕರರ ಹಿತದೃಷ್ಟಿಗೆ ಮಾರಕವಾಗಿರುವ ಶಿಫಾರಸುಗಳನ್ನು ಅಂಗೀಕರಿಸಿ ಕಾಯಿದೆ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ UFBUನ ಎಲ್ಲಾ ಸಂಘಟನೆಗಳು ಪ್ರತಿಭಟನೆ ನಡೆಸಿ, ಮುಷ್ಕರ ಹೂಡಿದೆ.

English summary
Over a million employees and officers of 27 public sector banks, 12 old generation private banks and eight foreign banks are on two day strike from Aug.22. UFBU demanded government not to accept Khandelwal report said All India Bank Employees Association secretary Vishwas Utagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X