• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಭದತ್ತ ಮುಖ ಮಾಡಿದ ಬಜ್ಪೆ ವಿಮಾನ ನಿಲ್ದಾಣ

By Mahesh
|
ಮಂಗಳೂರು, ಆ.21: ಕಳೆದ ವರ್ಷ ಮಂಗಳುರು ವಿಮಾನ ನಿಲ್ದಾಣ ಭರ್ಜರಿ ;ಲಾಭ ಗಳಿಸಿದೆ. ವಜ್ರಮಹೋತ್ಸವದ ಸಂದರ್ಭದಲ್ಲಿ ಈ ವಿಷಯ ಘೋಷಿಸಲು ಎಂದು ಹರ್ಷವಾಗುತ್ತಿದೆ ಎಂದು ಮಂಗಳುರು ವಿಮಾನ ನಿಲ್ದಾಣದ ನಿರ್ದೇಶಕ ಎಂಆರ್ ವಾಸುದೇವ ಅವರು ಹೇಳಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರದ ಮಾಹಿತಿಯಂತೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ಉತ್ತಮ ಪ್ರಗತಿ ಸಾಧಿಸಿದೆ. 2011-12ರಲ್ಲಿ ಆದಾಯ 42ಕೋಟಿ ರು ಗಳಿಕೆ ದಾಖಲಿಸಿದೆ. ಒಟ್ಟಾರೆ ಖರ್ಚುವೆಚ್ಚದ ಮೊತ್ತ 32.5 ಕೋಟಿ ರು ಆಗಿದೆ. ಇದೇ ಅವಧಿಯಲ್ಲಿ 9.5 ಕೋಟಿ ರು ವ್ಯವಹಾರಿಕೆ ಲಾಭ ಗಳಿಸಲಾಗಿದೆ ಎಂದು ವಾಸುದೇವ ಅವರು ಹೇಳಿದರು.

2002-03ರ ಅವಧಿಯಲ್ಲಿ ಸುಮಾರು 2.5 ಕೋಟಿ ರು ನಷ್ಟ ಅನುಭವಿಸಿದ್ದ ವಿಮಾನ ನಿಲ್ದಾಣದಲ್ಲಿ ಈಗ ಟ್ರಾಫಿಕ್ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳು ನೇರ ವಿಮಾನ ಸಂಪರ್ಕ ಒದಗಿಸುವತ್ತ ಚಿಂತನೆ ನಡೆಸಿರುವುದು ಶುಭ ಸೂಚನೆಯಾಗಿದೆ ಎಂದು ವಾಸುದೇವ ಹೇಳಿದರು.

2002-03ರ ಅವಧಿಯಲ್ಲಿ ವಿಮಾನ ನಿಲ್ದಾಣದ ಆದಾಯ 4 ಕೋಟಿ ರು ಇತ್ತು. ಖರ್ಚು ವೆಚ್ಚ 6.5 ಕೋಟಿ ರು ಇತ್ತು. ಮಂಗಳೂರಿನ ವಿಮಾನ ನಿಲ್ದಾಣದ ಏರ್ ಕಾರ್ಗೋ ವಿಭಾಗದ ಕಾಂಪ್ಲೆಕ್ಸ್ ನಲ್ಲಿ ಸಿವಿಲ್ ಹಾಗೂ ಎಲೆಕ್ಟ್ರಿಕಲ್ ವರ್ಕ್ಸ್ ಕಾಮಗಾರಿಯನ್ನು 45 ಲಕ್ಷ ವೆಚ್ಚದಲ್ಲಿ ಸಂಪೂರ್ಣಗೊಳಿಸಲಾಗಿದೆ.

ಇತ್ತೀಚೆಗೆ ನಡೆದ ರಫ್ತುದಾರರ ಸಮಾವೇಶದಲ್ಲಿ ಏರ್ ಕಾರ್ಗೋ ಕಾಂಪ್ಲೆಕ್ಸ್ ಹಾಗೂ ಕೋಲ್ಡ್ ಸ್ಟೊರೇಜ್ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಕೇಂದ್ರ ಇಂಧನ ಮತ್ತು ಸಂಸದೀಯ ವ್ಯವಹಾರ ಸಚಿವ ವೀರಪ್ಪ ಮೊಯ್ಲಿ ಅವರು ಪ್ರಸ್ತಾಪಿಸಿದ್ದರು. ಅದರಂತೆ ಕಾಮಗಾರಿ ಪ್ರಗತಿಯಲ್ಲಿದೆ .ಜನವರಿ ಹೊತ್ತಿಗೆ ಏರ್ ಟ್ರಾಫಿಕ್ ಬ್ಲಾಕ್ ಕೂಡಾ ಆರಂಭಿಸುವ ಸಾಧ್ಯತೆಯಿದೆ ಎಂದು ವಾಸುದೇವ ಹೇಳಿದರು.

ಬಜ್ಪೆ ಏರ್ ಪೋರ್ಟ್: ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲಿರುವ ವಿಶಿಷ್ಟವಾದ ವಿಮಾನ ನಿಲ್ದಾಣ ಟೇಬಲ್ 'ಟಾಪ್ ರನ್ ವೇ' ಹೊಂದಿದೆ. ಬಜ್ಪೆ ಬಿಟ್ಟರೆ ಕೋಳಿಕೊಡ್(ಕೇರಳ) ಹಾಗೂ ಲೆಂಗ್ ಪುಯಿ(ಮಿಜೋರಾಂ)ನಲ್ಲಿ ಮಾತ್ರ ಈ ರೀತಿ ರನ್ ವೇ ಕಾಣಬಹುದು.

ಮೊದಲ ರನ್ ವೇ 5,249 ಅಡಿ ಎತ್ತರದ ಪ್ರದೇಶದಲ್ಲಿದ್ದು, ಎರಡನೇ ರನ್ ವೇ 8,038 ಅಡಿ ಎತ್ತರದಲ್ಲಿದೆ. ಎರಡು ರನ್ ವೇ ಹೊಂದಿರುವ ಅದರಲ್ಲೂ ಕಾಂಕ್ರೀಟ್ ರನ್ ವೇ ಹೊಂದಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಬಜ್ಪೆಯದಾಗಿದೆ.

2007-08ರಲ್ಲಿ ಸುಮಾರು 10,019 ಏರ್ ಕ್ರಾಫ್ಟ್ ಗಳ ಹಾರಾಟ ಕಂಡಿದ್ದು , 2010ರಲ್ಲಿ 8.04 ಲಕ್ಷ ಪ್ರಯಾಣಿಕರನ್ನು ಈ ವಿಮಾನ ನಿಲ್ದಾಣ ಸಂಭಾಳಿಸಿದೆ.

2006ರಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಫ್ಲೈಟ್ 802 ದುಬೈನಿಂದ ಬಂದಿಳಿದು ಶುಭಾರಂಭ ಮಾಡಿತ್ತು. ನಂತರ ಅಬುದಾಬಿ, ಮಸ್ಕಟ್, ದೋಹಾ, ಬಹರೇನ್, ಕುವೈಟ್ ಹಾಗೂ ಶಾರ್ಜಾಗಳಿಗೆ ವಿಮಾನ ಸೌಲಭ್ಯ ಸಾಧಿಸಲಾಗಿದೆ.

10 ಟನ್ ಸಾಮರ್ಥ್ಯದ ಏರ್ ಕಾರ್ಗೋ ಬೇಸ್ ಈಗ ಮತ್ತಷ್ಟು ನವೀಕರಣಕ್ಕೆ ಒಳಪಡುತ್ತಿದೆ. ಕರ್ನಾಟಕ ಸರ್ಕಾರದಿಂದ 15 ಎಕರೆ ಜಾಗ ಪಡೆದು ಕೋಸ್ಟ್ ಗಾರ್ಡ್ ಪಡೆ ತನ್ನ ಹೆಲಿಕಾಪ್ಟರ್ ಗಳ ನಿಲ್ದಾಣ ಸ್ಥಾಪಿಸಲು ಬಜ್ಪೆ ವಿಮಾನ ನಿಲ್ದಾಣ ಬಳಸಲಾಗುತ್ತದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Mangalore airport recorded an operating profit of Rs 9.5 crore for 2011-12. M.R. Vasudeva, Mangalore Airport Director, Airports Authority of India (AAI), said that the income of the airport during 2011-12 was Rs 42 crore. It incurred an expenditure of around Rs 32.5 crore during the year. The operating profit stood at Rs 9.5 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+000
CONG+000
OTH000

Arunachal Pradesh

PartyLWT
CONG000
BJP000
OTH000

Sikkim

PartyLWT
SDF000
SKM000
OTH000

Odisha

PartyLWT
BJD000
CONG000
OTH000

Andhra Pradesh

PartyLWT
TDP000
YSRCP000
OTH000

AWAITING

Sougata Roy - AITC
Dum dum
AWAITING
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more