ಜಗನ್ ಪ್ರಕರಣ: ಆಂಧ್ರ ಮತ್ತೊಬ್ಬ ಸಚಿವನಿಗೆ ಉರುಳು

Jagan case: Another Andhra Pradesh minister lands in trouble
ಹೈದರಾಬಾದ್, ಆ. 13: ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ, ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ಸಿಬಿಐ ತಂಡ ಸೋಮವಾರ(ಆ.13) ನಾಲ್ಕನೇ ಚಾರ್ಛ್ ಶೀಟ್ ಸಲ್ಲಿಸಿದೆ.

ಆಂಧ್ರ ಪ್ರದೇಶದ ಪ್ರಮುಖ ಸಚಿವ ಧರ್ಮಣ್ಣ ಪ್ರಸಾದ್ ರಾವ್ ಅವರ ಹೆಸರು ಈ ಹೊಸ ದೋಷಾರೋಪಣ ಪಟ್ಟಿಯಲ್ಲಿ ಸೇರಿಸಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಹಿಂಪಡೆದು, ಬಂಧನ ವಿರೋಧಿಸಿ ಅರ್ಜಿ ಸಲ್ಲಿಸಿ ಸೋತಿರುವ ಜಗನ್ ದೆಸೆಯಿಂದ ಆಂಧ್ರದ ಸಚಿವರುಗಳು ಒಬ್ಬಬ್ಬರಾಗಿ ಸಿಬಿಐ ಬಲೆಗೆ ಬೀಳುತ್ತಿದ್ದಾರೆ.

ಜಗನ್ ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಸಿಬಿಐ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಜಗನ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಆ.9) ವಜಾಗೊಳಿಸಿತ್ತು.

ನಂತರ ಸೋಮವಾರ ಪ್ರಕರಣದ ಮುಂದಿನ ಭಾಗವಾಗಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಚಾರ್ಜ್ ಶೀಟ್ ಸಲ್ಲಿಸಿರುವ ಸಿಬಿಐ, ಸಚಿವ ಡಿ ಪ್ರಸಾದ್ ರಾವ್ ಅವರನ್ನು 5ನೇ ಆರೋಪಿ ಎಂದು ಹೆಸರಿಸಲಾಗಿದೆ.

ಒಟ್ಟಾರೆ ಪ್ರಸಾದ್ ರಾವ್ ಸೇರಿದಂತೆ ನಾಲ್ವರು ಸಚಿವರುಗಳ ಹೆಸರು ಚಾರ್ಜ್ ಶೀಟ್ ನಲ್ಲಿ ಕಾಣಿಸಿಕೊಂಡಿದೆ. ರಸ್ತೆ ಹಾಗೂ ಕಟ್ಟಡ ಅಭಿವೃದ್ಧಿ ಖಾತೆ ಸಚಿವರಾಗಿರುವ ಪ್ರಸಾದ್ ರಾವ್ ಅವರಿಗೆ ಸಿಬಿಐ ಕ್ರಮ ಶಾಕ್ ತಂದಿದೆ.

ಉಳಿದಂತೆ ವಿಜಯ್ ಸಾಯಿ ರೆಡ್ಡಿ, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಹಾಗೂ ಅಬಕಾರಿ ಸಚಿವ ಮೊಪಿದೇವಿ ವೆಂಕಟರಮಣ ಅವರು ಸಹ ಆರೋಪಿಗಳಾಗಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹೊಸ ಸೆಕ್ಷನ್ 9 ರ ಅಡಿಯಲ್ಲಿ ಹೊಸ ದೋಷಾರೋಪಣ ಪಟ್ಟಿ ತಯಾರಿಸಲಾಗಿದೆ. ಮೊದಲ ಚಾರ್ಜ್ ಶೀಟ್ ಗೆ ಇದು ಪೂರಕವಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಜಗನ್ ಅವರ ನ್ಯಾಯಾಂಗ ಬಂಧನದ ಅವಧಿ ಆ.14ರ ತನಕ ವಿಸ್ತರಿಸಲಾಗಿದೆ. ಕಡಪ ಸಂಸದ ಜಗನ್ ಮೋಹನ್ ರೆಡ್ಡಿ ಅವರು ಚಂಚಲಗುಡ ಜೈಲಿನಲ್ಲೇ ಸ್ವತಂತ್ರ ದಿನ ಆಚರಿಸುವ ಸಾಧ್ಯತೆ ನಿಚ್ಚಳವಾಗಿದೆ.

ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆವಿಗೂ ನಾಲ್ಕು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.

ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+