ಭದ್ರಾವತಿ: ಬಿಎಸ್ ವೈ ಮೇಲೆ FIR ಗೆ ಕೋರ್ಟ್ ಅನುಮತಿ

BS Yeddyurappa
ಬೆಂಗಳೂರು, ಆ.10: ಭದ್ರಾವತಿಯಲ್ಲಿ ಅಕ್ರಮವಾಗಿ ಜಮೀನು ಡಿನೋಟಿಫಿಕೇಷನ್ ಗೆ ಮಾಡಿರುವ ಆರೋಪದ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ಧ ಲೋಕಾಯುಕ್ತ ತನಿಖೆಗೆ ನ್ಯಾ. ಸುಧೀಂದ್ರರಾವ್ ಅವರು ಶುಕ್ರವಾರ (ಆ.10) ಆದೇಶಿಸಿದ್ದಾರೆ.

ಶಿವಮೊಗ್ಗದ ವಕೀಲ ಸಲ್ಲಿಸಲಾದ ವಿನೋದ್ ಅವರು ಸಲ್ಲಿಸಿದ ದೂರಿನ ಬಗ್ಗೆ ನಡೆಸುವಂತೆ ಎನ್. ಕೆ. ಸುಧೀಂದ್ರ ರಾವ್ ಅವರು ಲೋಕಾಯುಕ್ತ ಎಸ್ ಪಿ ಅವರಿಗೆ ಆದೇಶ ನೀಡಿದ್ದಾರೆ.

ಬೆಂಗಳೂರು ನಗರ ನಾಲ್ಕನೇ ಲೋಕಾಯುಕ್ತ ಡಿವೈಎಸ್ಪಿ ನಹದ್ ಅವರು ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಲಾಗಿದೆ. ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದರು.

ಇದಕ್ಕೂ ಮುನ್ನ ಡಿವೈಎಸ್ಪಿ ನಹದ್ ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಕೆಲವು ದಾಖಲೆಗಳ ದೃಢೀಕೃತ ಪ್ರತಿಗಳನ್ನು ಕೋರ್ಟಿಗೆ ಸಲ್ಲಿಸಿದರು. ಯಡಿಯೂರಪ್ಪ, ಅವರ ಪುತ್ರ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮತ್ತು ಇತರ ಐವರನ್ನು ಪ್ರತಿವಾದಿಗಳನ್ನಾಗಿ ದೂರಿನಲ್ಲಿ ಹೆಸರಿಸಲಾಗಿದೆ.

ಆರೋಪಿತ ಐದು ಜನರು ಬೇನಾಮಿ ಹೆಸರಿನಲ್ಲಿ ಯಡಿಯೂರಪ್ಪ ಅವರ ಪುತ್ರರ ಮಾಲೀಕತ್ವದ ಧವಳಗಿರಿ ಪ್ರಾಪರ್ಟೀಸ್ ಪರವಾಗಿ ಕ್ರಯಪತ್ರಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಯಡಿಯೂರಪ್ಪ ಅವರು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು 2010ರಲ್ಲಿ ಭದ್ರಾವತಿಯಲ್ಲಿ 69 ಎಕರೆ ಜಮೀನನ್ನು ಡಿನೋಟಿಫೈ ಮಾಡಿಸಿದ್ದರು ಎಂದು ದೂರುದಾರ ವಿನೋದ್ ಬಿ. ಆಪಾದಿಸಿದ್ದರು.

ಜಮೀನು ಡಿನೋಟಿಫಿಕೇಷನ್ ನ ಆದ ಎರಡು ತಿಂಗಳುಗಳ ಬಳಿಕ ಮಾಜಿ ಮುಖ್ಯಮಂತ್ರಿ ಮತ್ತು ಬೇನಾಮಿದಾರರು ಈ ಆಸ್ತಿಯನ್ನು ಧವಳಗಿರಿ ಪ್ರಾಪರ್ಟೀಸ್ ಹೆಸರಿಗೆ ವರ್ಗಾಯಿಸಿದ್ದಾರೆ. ಭದ್ರಾವತಿಯ ರಕ್ಷಿತಾ ಅರಣ್ಯ ಪ್ರದೇಶಕ್ಕೆ ಸೇರಿದ 250ಕ್ಕೂ ಅಧಿಕ ಭೂ ಪ್ರದೇಶವನ್ನು 2010-11ರ ಅವಧಿಯಲ್ಲಿ ಡಿನೋಟಿಫೈ ಮಾಡಲಾಗಿದೆ.

ಎಫ್ ಐಆರ್ ಗೊಂದಲ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.25 ರಂದು ಮೊದಲಿಗೆ ಲೋಕಾಯುಕ್ತ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿತ್ತು. ಬೆಂಗಳೂರು ನಗರ ಲೋಕಾಯುಕ್ತ ಡಿಎಸ್ ಪಿ ನಹದ್ ಅವರು ಈ ಪ್ರಕರಣದ ತನಿಖೆ ಕೈಗೊಳ್ಳುವ ಅಧಿಕಾರಿಯಾಗಿ ನೇಮಿಸಲಾಗಿತ್ತು.

ದೂರುದಾರ ವಿನೋದ್ ಅವರು ಕೋರ್ಟಿಗೆ ಸಲ್ಲಿಸಿರುವ ದೂರು ಅರ್ಜಿ ಹಾಗೂ ಇತರೆ ದಾಖಲಾತಿಯ ಒಂದು ಪ್ರತಿಯನ್ನು ತನಿಖಾಧಿಕಾರಿಗಳಿಗೆ ನೀಡಿದ್ದರು. ಸಿಆರ್ ಪಿಸಿ 202 ಅಡಿಯಲ್ಲಿ ದೂರು ದಾಖಲಾಗಿರುವುದರಿಂದ ಸದ್ಯಕ್ಕೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಕೋರ್ಟಿಗೆ ಹೇಳಲಾಗಿತ್ತು.

ಆದರೆ, ತನಿಖೆ ಸಂದರ್ಭದಲ್ಲಿ ಅಕ್ರಮ ಒತ್ತುವರಿ ಆರೋಪಗಳು ಸಾಬೀತುಪಡಿಸುವ ಅಂಶಗಳು ಕಂಡು ಬಂದರೆ ಎಫ್ ಐಆರ್ ದಾಖಲಿಸಲು ಲೋಕಾಯುಕ್ತ ಕೋರ್ಟ್ ಅನುಮತಿ ಕೋರಬಹುದಾಗಿದೆ. ಕೋರ್ಟ್ ಅನುಮತಿ ನೀಡಿದ ಬಳಿಕ ಮುಂದಿನ ಕ್ರಮ ಜರುಗಿಸಬಹುದು. ಅಥವಾ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿದ್ದರೆ ದೂರು ರದ್ದಾಗುತ್ತದೆ.

ಈಗ ಶುಕ್ರವಾರ(ಆ.10) ನ್ಯಾ. ಸುಧೀಂದ್ರರಾವ್ ಅವರು ತನಿಖೆಗೆ ಆದೇಶ ನೀಡಿರುವುದರಿಂದ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿ ಪ್ರಕರಣದ ತನಿಖೆ ಮುಂದುವರೆಸಬಹುದಾಗಿದೆ. (pti)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+