ಜೆಪಿ ನಗರದಲ್ಲಿ ವೃದ್ಧ ದಂಪತಿ ಹತ್ಯೆ, ಚಿನ್ನಾಭರಣ ಲೂಟಿ

blore-jp-nagar-venkateshaiah-swarnamba-couple-murdered
ಬೆಂಗಳೂರು, ಆ.10: ರಾಜಧಾನಿಯಲ್ಲಿ ಮತ್ತೊಂದು ಡಬಲ್ ಮರ್ಡರ್ ನಡೆದಿದೆ. ಜೆಪಿ ನಗರ ಆಕ್ಸ್ ಫರ್ಡ್ ಶಾಲೆಯ ಸಮೀಪದ ಮನೆಯಲ್ಲಿ ವೃದ್ಧ ದಂಪತಿಯ ಕೊಲೆಯಾಗಿದೆ.

ಶಿಕ್ಷಣ ಇಲಾಖೆಯ ನಿವೃತ್ತ ಗುಮಾಸ್ತ ವೆಂಟೇಶಯ್ಯ (78) ಮತ್ತು ಅವರ ಪತ್ನಿ ಸ್ವರ್ಣಾಂಭ (68) ಕೊಲೆಗೀಡಾದವರು. ಕತ್ತು ಕೊಯ್ದು ಇವರ ಹತ್ಯೆ ಮಾಡಲಾಗಿದೆ. ಮಲಗಿದ ಸ್ಥಿತಿಯಲ್ಲೇ ಇವರ ಶವಗಳು ಕಂಡುಬಂದಿವೆ. ಕೊಲೆಗಡುಕರು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ.

ಎರಡು ದಿನಗಳ ಹಿಂದೆ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ದಂಪತಿಗಳಿಗೆ ಮಕ್ಕಳಿರಲಿಲ್ಲ. ಏಕಾಂಗಿಯಾಗಿ ಮನೆಯಲ್ಲಿದ್ದರು. ಹೆಣದ ವಾಸನೆ ಬಂದಾಗ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಧಾವಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪರಿಚಿತರೇ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಡಿಸಿಪಿ ಸೋನಿಯಾ ನಾರಂಗ್ ಸ್ಥಳಕ್ಕೆ ಭೇಟಿ ನೀಡಿದ್ದು, ಜೆಪಿ ನಗರ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+