ಮೇರಿಗೆ ಕಂಚು, ನುಡಿದಂತೆ ಬಟ್ಟೆ ಕಳಚಿದ ಗೆಹ್ನಾ
ಮುಂಬೈ, ಆ.9: ಒಲಿಂಪಿಕ್ಸ್ ನಲ್ಲಿ ಯಾರಾದರೂ ಅಥ್ಲೀಟ್ ಗಳು ಚಿನ್ನದ ಪದಕ ಗೆದ್ದರೆ ನಾನು ನನ್ನ ಬಟ್ಟೆ ಕಳಚಿ ಬೆತ್ತಲಾಗಿ ನಿಲ್ಲುತ್ತೇನೆ ಎಂದು ಘೋಷಿಸಿದ್ದ ಗೆಹ್ನಾ ಬೆತ್ತಲಾಗಿದ್ದಾಳೆ. ಆದರೆ, ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದಕ್ಕೂ ಮುಂಚಿತವಾಗಿಯೇ ಗೆಹ್ನಾ ಬಟ್ಟೆ ಕಳಚಿದ್ದಾಳೆ.
ಬಿಕಿನಿ ಜೊತೆ ರಾಷ್ಟ್ರಧ್ವಜ ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಗೂಸಾ ತಿಂದಿದ್ದ ಕಿರುತೆರೆ ನಟಿ ಗೆಹ್ನಾ ವಶಿಷ್ಟ್ ಅವರ ಈ ಬಟ್ಟೆ ಕಳಚುವ ಪೋಗ್ರಾಂನಿಂದ ಕ್ರೀಡಾಪಟುಗಳಿಗೆ ಉತ್ಸಾಹ ಹೆಚ್ಚುತ್ತದೆಯಂತೆ. ಚಿನ್ನ ಗೆಲ್ಲುವುದಕ್ಕೂ ಮುನ್ನ ಬೆತ್ತಲಾಗಿದ್ದು ಹೇಗೆ ಎಂದರೆ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರ ಅದ್ಭುತ ಸಾಧಿಸಿ ನೋಡಿ ನನಗೆ ಹುಮ್ಮಸ್ಸು ಉಕ್ಕಿ ಬಂತು ಎಂದು ಬೆತ್ತಲೆ ಫೋಟೋ ಶೂಟ್ ಗೆ ರೆಡಿಯಾಗುತ್ತಿದ್ದ ಗೆಹ್ನಾ ಹೇಳಿದ್ದಾಳೆ..

ಕ್ರಿಕೆಟ್ ಆಟಗಾರರ ಹಿಂದೆ ಬಿದ್ದು ಸದಾಕಾಲ ಬೆತ್ತಲಾಗುವುದಕ್ಕೆ ಹಾತೊರೆಯುವ ಪೂನಮ್ ಮಾದರಿಯನ್ನು ಗೆಹ್ನಾ ಕೂಡಾ ಅನುಸರಿಸುತ್ತಿದ್ದಾಳೆ. ಗೆಹ್ನಾ ಆಸೆ ಕೈಗೂಡುವ ಲಕ್ಷಣಗಳು ಕ್ಷೀಣಿಸುತ್ತಿದೆ, ಒಲಿಂಪಿಕ್ಸ್ನಲ್ಲಿ ಚಿನ್ನ ಯಾರೂ ಗೆಲ್ಲಲು ಸಾಧ್ಯವಿಲ್ಲ ಛೇ ಎಂದು ಅಭಿಮಾನಿಗಳು ಕೊರಗುವ ಮುನ್ನವೇ ಗೆಹ್ನಾ ಬೆತ್ತಲಾಗಿದ್ದಾಳೆ.
ಆರಂಭದಲ್ಲೇ ಗೆಹ್ನಾ ಈ ರೀತಿ ಘೋಷಿಸಿದ್ದರೆ ಆಟಗಾರರಿಗೆ ಹೆಚ್ಚಿನ ಹುರುಪು ಸಿಗುತ್ತಿತ್ತೋ ಏನೋ. ಮೇರಿ ಕೋಮ್, ಸೈನಾ ಕಂಚಿಗೆ ತೃಪ್ತಿ ಪಟ್ಟರೆ, ವಿಜಯ್ ಕುಮಾರ್ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಗಗನ್ ನಾರಂಗ್ ಕೂಡಾ ಕಂಚಿಗೆ ತೃಪ್ತಿ ಹೊಂದಿದ್ದಾರೆ. ಹೀಗಾಗಿ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಹಾಗೂ ಗೀತಾ ಮೇಲೆ ಪದಕ ನಿರೀಕ್ಷೆ ಇಟ್ಟುಕೊಳ್ಳಬಹುದು.
ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಬುಧವಾರ (ಆ.8)ರಂದು ನಡೆದ ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಗ್ರೇಟ್ ಬಿಟನ್ ನ ಯುರೋಪ್ ಚಾಂಪಿಯನ್ ನಿಕೋಲ್ ಆಡಮ್ ಅವರ ವಿರುದ್ಧ 11-6 ಅಂಕಗಳ ಅಂತರದಿಂದ ಸೋಲುಂಡರೂ ಕಂಚಿನ ಪದಕ ಗಳಿಸಿದ್ದರು.
ನಮ್ಮ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಹೊತ್ತಿದ್ದ ಗೆಹ್ನಾ ಮೇಲೆ ಸರಿ ಸುಮಾರು 20 ರಿಂದ 25 ಮಂದಿ ಏಕಾಏಕಿ ದಾಳಿ ನಡೆಸಿದ್ದರು. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಈಕೆ ಈಗ ಚಿಕಿತ್ಸೆ ಪಡೆದು ಹೊರ ಬಿದ್ದ ಕೆಲ ದಿನಗಳಲ್ಲೇ ಈ ರೀತಿ ಹೇಳಿಕೆ ನೀಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications