ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ವಂಚನೆ: ಇನ್ಫಿ ಮೇಲೆ ಮತ್ತೊಂದು ಕೇಸ್

By Mahesh
|
Google Oneindia Kannada News

Fresh B1 visa row for Infosys
ಬೆಂಗಳೂರು/ಕ್ಯಾಲಿಫೋರ್ನಿಯಾ, ಆ.9: ಅಮೆರಿಕದ ವೀಸಾ ನೀತಿ, ಬಿಸಿನೆಸ್ ವೀಸಾ ನಿಯಮಗಳನ್ನು ಮೀರಿ ಭಾರತದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುವ ಮೂಲಕ ದೊಡ್ಡ ವಂಚನೆ ಜಾಲದಲ್ಲಿ ಇನ್ಫೋಸಿಸ್ ಮುಳುಗಿದೆ ಎಂಬ ಆರೋಪ ಹೊತ್ತಿರುವ ಸಾಫ್ಟ್ ವೇರ್ ಸಂಸ್ಥೆ ಮತ್ತೆ ಕೋರ್ಟ್ ಮೆಟ್ಟಿಲೇರಬೇಕಿದೆ.

ಇನ್ಫೋಸಿಸ್ ನ ಮಾಜಿ ಉದ್ಯೋಗಿಯೊಬ್ಬರು ಕ್ಯಾಲಿಫೋರ್ನಿಯಾದ ಕೋರ್ಟ್ ನಲ್ಲಿ ಇನ್ಫೋಸಿಸ್ ವಿರುದ್ಧ ದಾವೆ ಹೂಡಿದ್ದಾರೆ.

ಸತ್ಯ ದೇವ್ ತ್ರಿಪುರನೇನಿ ಎಂಬ ಹೆಸರಿನ ವ್ಯಕ್ತಿ ಇನ್ಫೋಸಿಸ್ ಸಂಸ್ಥೆ B1 ವೀಸಾ ವಂಚನೆ ಜಾಲದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಇನ್ಫೋಸಿಸ್ ನ ಯುಎಸ್ ವಿಭಾಗದಲ್ಲಿ ಅಕೌಂಟ್ ಮ್ಯಾನೇಜರ್ ಆಗಿದ್ದ ಸತ್ಯದೇವ್ ಸುಮಾರು 5 ವರ್ಷ ಕಾಲ ಇನ್ಫೋಸಿಸ್ ನ ಉದ್ಯೋಗಿಯಾಗಿದ್ದರು.

ವೀಸಾ ವಂಚನೆ ಪ್ರಕರಣದ ತನಿಖೆ ನಡೆಯುತ್ತಿರುವುದನ್ನು ಇನ್ಫೋಸಿಸ್ ಸಂಸ್ಥೆ ಕೂಡಾ ಖಚಿತಪಡಿಸಿದ್ದು, ವಿಚಾರಣೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ.

ಜಾಕ್ ಪಾಮರ್ ಕೇಸ್ ಕೋರ್ಟಿನಲ್ಲಿ ವಿಚಾರಣೆಗೆ ಬರುವ ಸಂದರ್ಭದಲ್ಲಿ ಹೊಸದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಇನ್ಫೋಸಿಸ್ ಗೆ ತಲೆ ನೋವಾಗಿ ಪರಿಣಮಿಸಿದೆ. ಅಮೆರಿಕದ ಅತಿದೊಡ್ಡ ವೀಸಾ ವಂಚನೆ ಜಾಲ ಇದಾಗಿದ್ದು ಉತ್ತರ ಅಮೆರಿಕ ಮಾರುಕಟ್ಟೆಯಿಂದ ಶೇ 60 ರಷ್ಟು ಆದಾಯವನ್ನು ಇನ್ಫೋಸಿಸ್ ಗಳಿಸುತ್ತಿದೆ.

ಹೊರಗುತ್ತಿಗೆ ಬಗ್ಗೆ ಅಮೆರಿಕದಲ್ಲಿ ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಇನ್ಫೋಸಿಸ್ ಸಂಸ್ಥೆ H-1B ವೀಸಾ ನಿಯಮಗಳನ್ನು ಗಾಳಿಗೆ ತೂರಿ ಅಲ್ಪ ಜ್ಞಾನ ಇರುವ ಸಿಬ್ಬಂದಿಗಳನ್ನು ಬಿ1 ವೀಸಾ ಮೂಲಕ ಅಮೆರಿಕಕ್ಕೆ ಕರೆಸಿಕೊಳ್ಳುತ್ತಿದೆ ಎಂದು ಪಾಮರ್ ಆರೋಪಿಸಿದ್ದಾರೆ.

ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಬರೆದಿರುವ ಇಮೇಲ್ ಪತ್ರಗಳ ಪ್ರತಿಯನ್ನು ಕೋರ್ಟಿಗೆ ಪಾಮರ್ ಸಲ್ಲಿಸಿದ್ದಾರೆ. ಆದರೆ, ಇಮೇಲ್ ಗಳನ್ನು ತಿದ್ದಲಾಗಿದೆ. ಮೂಲ ಪ್ರತಿಯ ಬದಲಿಗೆ ಬೇರೆ ವಾಕ್ಯಗಳನ್ನು ಸೇರಿಸಲಾಗಿದೆ ಎಂದು ಇನ್ಫೋಸಿಸ್ ಸಂಸ್ಥೆ ಪ್ರತಿವಾದ ಮಾಡಿದೆ. ವಿಚಾರಣೆ ಸದ್ಯಕ್ಕೆ ಕುತೂಹಲ ಘಟ್ಟದಲ್ಲಿದೆ.

ಅಮೆರಿಕದ ವೀಸಾ ನೀತಿ ಇಕ್ಕಳದಲ್ಲಿ ಈಗಾಗಲೇ ಇನ್ಫಿ ಸಿಕ್ಕಿಕೊಂಡಿದೆ. ಭಾರತದಿಂದ ಕರೆಸಿಕೊಳ್ಳುವ ಉದ್ಯೋಗಿಗಳಿಗೆ ಕಡಿಮೆ ಸಂಬಳ ನೀಡಿ, ಅಮೆರಿಕದ ಉದ್ಯೋಗಾರ್ಥಿಗಳಿಗೆ ವಂಚಿಸುತ್ತಿರುವ ಆರೋಪವೂ ಇನ್ಫೋಸಿಸ್ ಮೇಲೆ ಹೊರೆಸಲಾಗಿದೆ.

ಎಚ್-1ಬಿ ವೀಸಾ ಮೇಲೆ ಯುಎಸ್ ಎ ಕಡಿವಾಣ ಹಾಕಿದ ಮೇಲೆ ಬಿ-1 ವೀಸಾ ಬಳಸಿ ತನ್ನ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ ಎಂದು ಜಾಬ್ ಕನ್ಸಲ್ಟೆಂಟ್ ಪಾಮರ್ ಆರೋಪಿಸಿದ್ದರು. ಆದರೆ, ಆರೋಪಗಳನ್ನು ಇನ್ಫೋಸಿಸ್ ತಳ್ಳಿಹಾಕಿದೆ. US Department of Homeland Security ತನಿಖೆ ಮುಂದುವರೆದಿದೆ.

English summary
A former employee of IT Major Infosys has filed a suit against the company over alleged misuse of B1 visas. Satya Dev Tripuraneni filed the suit in a California court. who was an account manager with the US branch of Infosys. Meanwhile, Jack Palmer case is set to go on trial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X