ಮಂಗಳೂರಿನಲ್ಲಿ ವೇಶ್ಯಾವಾಟಿಕೆ: ಬಿಜೆಪಿ ನಾಯಕರ ಬಂಧನ

mangalore-subhashnagar-prostitution-bjp-leaders-held
ಮಂಗಳೂರು, ಆ.7: ಮಂಗಳೂರು ಮತ್ತೊಂದು ಕುಖ್ಯಾತಿಯನ್ನು ಬೆನ್ನಿಗೇರಿಸಿಕೊಂಡಿದೆ. ಇಲ್ಲಿನ ಸುಭಾಷ್ ನಗರದ ಆದರ್ಶ್ ಅಪಾರ್ಟ್ ಮೆಂಟಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ವೇಳೆ ಸ್ಥಳೀಯ ಪೊಲೀಸರು ನಿನ್ನೆ ದಾಳಿ ನಡೆಸಿ, ಒಟ್ಟು 7 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರೆಲ್ಲ ಬಿಜೆಪಿ ನಾಯಕರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳೀಯ ಪ್ರಭಾವಿ ನಾಯಕಿ: ಉಪ್ಪಿನಂಗಡಿಯ ಸಂದೀಪ್ ಶೆಟ್ಟಿ (35) ಮತ್ತು ದೊರಯ್ಯ (30) ಮಂಗಳೂರು ವೇಶ್ಯಾವಾಟಿಕೆಯಲ್ಲಿ ಬಂಧನಕ್ಕೊಳಗಾದ ಸ್ಥಳೀಯ ಬಿಜೆಪಿ ನಾಯಕರು ಎನ್ನಲಾಗಿದೆ. ಬಂಧಿತರ ಪೈಕಿ 30 ವರ್ಷದ ಒಬ್ಬ ಮಹಿಳೆಯೂ ಸೇರಿದ್ದು, ಆಕೆ ಬಿಜೆಪಿಯ ಸ್ಥಳೀಯ ಪ್ರಭಾವಿ ನಾಯಕಿ ಎನ್ನಲಾಗಿದೆ. ಬೆಳ್ತಂಗಡಿಯ ಸಂದೀಪ್ ಶೆಟ್ಟಿ ಎಂಬ ಬಂಧಿತನೂ ಸ್ಥಳೀಯ ಬಿಜೆಪಿ ನಾಯಕ ಎಂದು ತಿಳಿದುಬಂದಿದೆ.

ಬಂಧಿತರ ಪೈಕಿ 4 ಮಹಿಳೆಯರು ಮತ್ತು 3 ಪುರುಷರು ಇದ್ದಾರೆ. ಎಲ್ಲರೂ 30 ವರ್ಷ ದಾಟಿದವರಾಗಿದ್ದಾರೆ. ಆದರೆ ಪೊಲೀಸರು ಬಿಜೆಪಿಯ ಮಹಿಳಾ ನಾಯಕಿ ಸೇರಿದಂತೆ ಇಬ್ಬರ ಮೇಲೆ ಯಾವುದೇ ಕೇಸು ದಾಖಲಿಸದೆ ಬಿಟ್ಟುಕಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಪಾರ್ಟ್ ಮೆಂಟಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಮತ್ತು ಹಿಂದೂ ಸಂಘಟನೆಗಳು ದೂರು ನೀಡಿದ್ದವು. 10 ದಿನಗಳ ಹಿಂದಷ್ಟೇ ಹೋಂ ಸ್ಟೇ ದಾಳಿ ಪ್ರಕರಣ ನಡೆದಿರುವ ಹಿನ್ನೆಲೆಯಲ್ಲಿ ತಕ್ಷಣ ದೂರಿಗೆ ಸ್ಪಂದಿಸಿದ ಪೊಲೀಸರು ಆಗಸ್ಟ್ 6ರ ಸಂಜೆ ದಾಳಿ ನಡೆಸಿದ್ದರು. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+