ಸಚಿವರೆ, ಬಿಟ್ಟ ಶಿಕ್ಷಕರ ಜಾಗವನ್ನು ಭರ್ತಿ ಮಾಡಿರಿ

Education minister, fill the blank space
ಯಾದಗಿರಿ, ಆ. 7 : ಎಸ್.ಎಸ್.ಎಲ್.ಸಿ, ಪಿಯುಸಿ ಫಲಿತಾಂಶ 'ಎಂದಿನಂತೆ ಯಾದಗಿರಿ ಕಡೆಯ ಸ್ಥಾನದಲ್ಲಿ' ಎಂಬ ಸುದ್ದಿ ಪ್ರತಿಬಾರಿ ಪ್ರಕಟವಾಗುತ್ತದೆ. ಆದರೆ, ಯಾಕೆ ಹೀಗೆ? ಫಲಿತಾಂಶ ಕಳಪೆಯಾಗುವುದಕ್ಕೆ ಕಾರಣವೇನು? ಜಿಲ್ಲೆಯಲ್ಲಿ ಶಿಕ್ಷಣದ ಸ್ಥಿತಿಗತಿ ಹೇಗಿದೆ? ಶಾಲಾ ಕಾಲೇಜುಗಳ ಕಟ್ಟಡಗಳು ಯಾವ ಸ್ಥಿತಿಯಲ್ಲಿವೆ? ಮುಂತಾದ ವಿಷಯಗಳ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಚಿಂತಿಸುತ್ತಾರಾ?

ಫಲಿತಾಂಶ ಮಾತ್ರ ಶೂನ್ಯ!

ರಾಜ್ಯದಲ್ಲಿಯೇ ಹೈದ್ರಾಬಾದ್ ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಹಿಂದುಳಿದ ಪ್ರದೇಶ. ಈ ಭಾಗವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡೆಸಬೇಕಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಲು ಶಿಕ್ಷಕರು ಬೇಕು. ಆದರೆ, ಯಾದಗಿರಿ ಜಿಲ್ಲೆ ಇಡೀ ರಾಜ್ಯದದಲ್ಲಿಯೇ ಅತೀ ಹೆಚ್ಚು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ. ಜಿಲ್ಲೆಯಾಗಿ ಮೂರು ವರ್ಷಗಳು ಆಗುತ್ತಾ ಬಂದರೂ, ಶಿಕ್ಷಕರನ್ನು ಭರ್ತಿ ಮಾಡಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ. ಇನ್ನು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನಿಷ್ಠ ಫಲಿತಾಂಶ ಬರದೆ ಇನ್ನೇನು ಆದೀತು?

ಖಾಲಿ ಹುದ್ದೆಗಳ ಅಂಕಿಸಂಖ್ಯೆ : ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 4543 ಶಿಕ್ಷಕರು ಮಂಜೂರಾಗಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು 3488. ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 1055. ಸರಕಾರಿ ಪ್ರೌಢ ಶಾಲೆಗಳಲ್ಲಿ ಮಂಜೂರಾದ ಒಟ್ಟು ಶಿಕ್ಷಕರು 1211, ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು 994, ಇನ್ನೂ ಖಾಲಿ ಇರುವ ಹುದ್ದೆಗಳು 217. ಪದವಿ ಪೂರ್ವಿ ಕಾಲೇಜುಗಳಲ್ಲಿ ಒಟ್ಟು 23 ಸರಕಾರ ಪದವಿ ಪೂರ್ವ ಕಾಲೇಜುಗಳಿದ್ದು, ಅವುಗಳಲ್ಲಿ 61 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ.

ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಜಿಲ್ಲೆಯಲ್ಲಿ 28 ಶಾಲೆಗಳಲ್ಲಿ ಏಕೋಪಾಧ್ಯಾಯ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆ ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿಯವರೆಗೂ ಒಬ್ಬರೆ ಶಿಕ್ಷಕರು ಕಾರ್ಯನಿರ್ವಹಿಸಬೇಕಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರ ಕೊರತೆಯನ್ನು ಯಾದಗಿರಿ ಹೊರತುಪಡಿಸಿದರೆ ಬೇರೆ ಯಾವ ಜಿಲ್ಲೆಯೂ ಎದುರಿಸುತ್ತಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕೇಳಿದ್ರೆ ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಅಂತಾರೆ.

ಶೈಕ್ಷಣಿಕ ಪ್ರಗತಿ ದೇಶದ ಉನ್ನತಿಯ ಸಂಕೇತ. ಇಂದಿನ ವಿದ್ಯಾರ್ಥಿಗಳು ನಾಳಿನ ನಾಯಕರುಗಳು ಅಂತಾ ಬರೀ ಪೋಸು ಕೊಡುವ ಸರ್ಕಾರಗಳು, ಈ ಜಿಲ್ಲೆಯ ಶಾಲೆಯಗಳ ಸ್ಥಿತಿಗತಿಯ ಬಗ್ಗೆ ಗಮನ ಹರಿಸಿಲ್ಲ. ಶಿಕ್ಷಕರು ಇಲ್ಲದೆ ಹೇಗೆ ತಾನೆ ವಿದ್ಯಾರ್ಥಿಗಳು ಪಾಠ ಕಲಿಯಬೇಕು? ಯಾದಗಿರಿ ಜಿಲ್ಲೆಗೆ ಶಿಕ್ಷಕರು ಬಂದು ಕಾರ್ಯನಿರ್ವಹಿಸುತ್ತಿಲ್ಲ. ಬೇರೆ ಕಡೇ ವರ್ಗಾವಣೆ ಮಾಡಿಕೊಂಡು ಹೋಗುತ್ತಾರೆ. ಇದರಿಂದ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ವರ್ಷದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಿದೆ. ಇನ್ನಾದ್ರೂ ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+