ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಾ ಅಮೃತಾ ಮೇಲೆ ಹಲ್ಲೆಗೈದವ ನಿಗೂಢ ಸಾವು

By Mahesh
|
Google Oneindia Kannada News

Youth Satnam Singh Death Mystery
ಕೊಲ್ಲಂ, ಆ.5: ಮಾತಾ ಅಮೃತಾನಂದಾಮಯಿ ಮೇಲೆ ಹಲ್ಲೆಗೈದ ಯುವಕ ಶನಿವಾರ (ಆ.5) ಸಂಜೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. 25 ವರ್ಷದ ಸತ್ನಂ ಸಿಂಗ್ ನನ್ನು ಮಾತಾ ಅಮೃತಾ ಅವರ ಮೇಲೆ ಹಲ್ಲೆಗೈಯಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.

ಕೊಲ್ಲಂನ ವಲ್ಲಿಕ್ಕವು ಆಶ್ರಮದಲ್ಲಿ ಕಳೆದ ವಾರ ಈ ಘಟನೆ ನಡೆದಿತ್ತು. ಅಂದು ಹಲ್ಲೆ ನಡೆಸಲು ಯತ್ನಿಸಿದ ಸತ್ನಂ ಸಿಂಗ್ ಇಂದು ತಿರುವನಂತಪುರದ ಪೆರೂರ್ ಕಡದ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದ್ದಾನೆ.

ಆಸ್ಪತ್ರೆ ವೈದ್ಯರ ಪ್ರಕಾರ, ಸತ್ನಂ ಸಿಂಗ್ ಅವರನ್ನು ಆ.2ರಂದು ಮಾನಸಿಕ ರೋಗಿಗಳ ವಿಭಾಗದಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಆತ ತುಂಬಾ ಕೋಪಗೊಂಡಿದ್ದ. ಆತನಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ವಿಫಲರಾಗಿದ್ದರು.

ಆಸ್ಪತ್ರೆ ಸಿಬ್ಬಂದಿಗಳಿರುವ ಕಡೆ ಪ್ರತ್ಯೇಕ ಕೊಠಡಿಯಲ್ಲಿ ಆತನನ್ನು ಇರಿಸಲಾಗಿತ್ತು. ಆದರೆ, ಒಂಟಿ ಕೋಣೆ ಸೇರಿದ ಮೇಲೆ ಆತ ಮಂಕಾಗಿಬಿಟ್ಟ. ಶನಿವಾರ ರಾತ್ರಿ ಊಟದ ಸಮಯದಲ್ಲಿ ಎಂದಿನಂತೆ ಆಸ್ಪತ್ರೆ ಸಿಬ್ಬಂದಿ ಊಟ ನೀಡಲು ಹೋಗಿದ್ದಾರೆ. ಆದರೆ, ಕೊಠಡಿಯ ಮೂಲೆಯೊಂದರಲ್ಲಿ ಆತ ಪ್ರಜ್ಞಾಶೂನ್ಯನಾಗಿ ಬಿದ್ದಿರುವುದು ಕಂಡು ಬಂದಿದೆ.

ನಂತರ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಸಿಂಗ್ ಸಾವನ್ನಪ್ಪಿದ ಎಂದು ವೈದ್ಯರು ಹೇಳಿದ್ದಾರೆ. ಆತನನ್ನು ಆಸ್ಪತ್ರೆ ಸೇರಲು ಒಂದಿಬ್ಬರು ಬಂದಿದ್ದರು. ಆದರೆ, ಆತನ ಯೋಗಕ್ಷೇಮ ವಿಚಾರಿಸಲು ಯಾರೂ ಬಂದಿರಲಿಲ್ಲ.

ಯಾರಿತ ಸತ್ನಂ ಸಿಂಗ್ ?: ಬಿಹಾರದ ಗಯಾ ಮೂಲದ ಸತ್ನಂ ಸಿಂಗ್, ಮಾತಾ ಅಮೃತಾನಂದಮಯಿ ಆಶ್ರಮಕ್ಕೆ ಕಳೆದ ಗುರುವಾರ ಭೇಟಿ ನೀಡಿದ್ದ. ಇದ್ದಕ್ಕಿದ್ದಂತೆ, ಮಾತಾ ಅಮೃತಾ ಅವರಿದ್ದ ಡಯಸ್ ಕಡೆಗೆ ಆಕ್ರೋಶ ಭರಿತ ನಾಗಿ ಓಡತೊಡಗಿದ. ಆಶ್ರಮದ ಸಿಬ್ಬಂದಿ ಆತನನ್ನು ತಡೆಯಲು ಯತ್ನಿಸಿ ವಿಫಲರಾಗಿದ್ದರು.ಆದರೆ, ಮಾತಾ ಅಮೃತಾ ಅವರು ಹಲ್ಲೆಗೊಳಗಾಗುವುದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದರು.

ನಂತರ ಸತ್ನಂ ಸಿಂಗ್ ನನ್ನು ಬಂಧಿಸಿ ಐಪಿಸಿ ಸೆಕ್ಷನ್ 307 (attempt to murder), 332 ((voluntarily causing hurt to deter public servant from his duty) ಹಾಗೂ 453 (trespassing) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಕರುನಗಪ್ಪಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಡಿ ರಾಧಕೃಷ್ಣ ಪಿಳ್ಳೈ ಅವರು ಆತನ ಮಾನಸಿಕ ಸ್ಥಿತಿ ಕಂಡು, ಚಿಕಿತ್ಸೆಗಾಗಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಸತ್ನಂ ಸಿಂಗ್ ಅವರ ಕಸಿನ್ ರಾಷ್ಟ್ರೀಯ ಸುದ್ದಿವಾಹಿನಿಯ ಸಿಬ್ಬಂದಿಯಾಗಿರುವ ಬಿಮಾಲ್ ಕಿಶೋರ್ ಅವರು ಸತ್ನಂ ನೋಡಲು ನವದೆಹಲಿಯಿಂದ ಕೊಲ್ಲಂಗೆ ಬಂದಿದ್ದು ಬಿಟ್ಟರೆ ಮತ್ತೆ ಯಾರು ಸತ್ನಂ ನೋಡಲು ಬಂದಿರಲಿಲ್ಲ.

ಕಾನೂನು ವ್ಯಾಸಂಗ ಮಾಡುತ್ತಿದ್ದ ಸತ್ನಂ, ಅಧ್ಯಯನ ಕೈ ಬಿಟ್ಟು ಆಶ್ರಮ, ಮಠಗಳ ಹಿಂದೆ ಬಿದ್ದಿದ್ದ. ಸಂಪ್ರದಾಯಸ್ಥ ಹಿಂದೂ ಕುಟುಂಬಕ್ಕೆ ಸೇರಿರುವ ಸತ್ನಂ ಅವರ ತಂದೆ ಹರೀಂದ್ರ ಕುಮಾರ್ ಸಿಂಗ್ ಅವರಿಗೆ ಗಯಾದಲ್ಲಿ ಭಾರಿ ಗೌರವವಿದೆ. ಪುತ್ರ ಸತ್ನಂ ನಾಪತ್ತೆಯಾಗಿದ್ದಾನೆ ಎಂದು ಗಯಾದ ಶೆರ್ ಘತಿ ಠಾಣೆಯಲ್ಲಿ ಹರೀಂದ್ರ ಅವರು ದೂರು ನೀಡಿದ್ದಾರೆ.

ಮಾತಾ ಅಮೃತಾನಂದಮಯಿ (ಅಮ್ಮ) ಅವರು ರಾಯಚೂರು ಜಿಲ್ಲೆಯ ಮಠದೊಂಗರಾಮಪುರ ಹಾಗೂ ಅತ್ತ್ಕೂರು ಗ್ರಾಮಗಳ ಪುನರ್ವಸತಿಗಾಗಿ ನೂರಾರು ಮನೆಗಳನ್ನು ನಿರ್ಮಿಸಿದ್ದಾರೆ. ಸುನಾಮಿ ಹಾಗೂ ಇನ್ನಿತರ ನೈಸರ್ಗಿಕ ವಿಕೋಪದ ಸಂತ್ರಸರಿಗೆ ಇದೇ ರೀತಿ ದಾಖಲೆ ಅವಧಿಯಲ್ಲಿ ನೂರಾರು ಮನೆಗಳನ್ನು ನಿರ್ಮಿಸಿ ಅವರ ಬದುಕು ಸಾಮಾನ್ಯ ಸ್ಥಿತಿಗೆ ಮುರುಕಳಿಸುವಂತೆ ಅಮ್ಮ ಶ್ರಮಿಸಿದ್ದಾರೆ.

English summary
Satnam Singh, who attempted to assault Mata Amritanandamayi at her Ashram at Vallikkavu, Kollam had mysterious death at the Mental Health Centre, Peroorkada, here on Saturday(Aug.4) evening. A 25-year-old youth Satnam tried to attack Mata Mata Amritanandamayi last week and he was arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X