ಮಾನಸಿಕ ಒತ್ತಡ ತಾಳಲಾರದೆ ಟೆಕ್ಕಿ ಆತ್ಮಹತ್ಯೆ

ಮೃದಲ್ ಸಹ್ನಿ ಎಂಬ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್)ನ ಮಾಜಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆರು ತಿಂಗಳ ಹಿಂದೆ ಟಿಸಿಎಸ್ ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದ ಈತ ಕೆಲ ಕಾಲ ಅಪೋಲೊ ಆಸ್ಪತ್ರೆಯ ಮಾನಸಿಕ ಒತ್ತಡ ನಿವಾರಣೆಗಾಗಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.
ಕೆಲಸ ಬಿಟ್ಟ ಮೇಲೆ ಇನ್ನಷ್ಟು ಮಾನಸಿಕ ಖಿನ್ನತೆ ಅನುಭವಿಸಿದ ಮೃದುಲ್, ತನ್ನ ಅಪಾರ್ಟ್ ಮೆಂಟ್ ನ ಅಕ್ಕ ಪಕ್ಕದ ಮನೆಯವರ ಮಾತುಗಳನ್ನು ಕೇಳಲಾಗದೆ ತೀವ್ರ ನೊಂದಿದ್ದ. ಗುರುವಾರ ತನ್ನ ಅಪಾರ್ಟ್ಮೆಂಟ್ ನ 6 ನೇ ಮಹಡಿ ಮೇಲೆ ಹತ್ತಿ ನಿಂತು ಕೆಳಗೆ ಹಾರಲು ಯೋಚನೆ ಮಾಡಿದ್ದಾನೆ.
ಆದರೆ, ಇದಕ್ಕೂ ಮುನ್ನ ಸೂಸೈಡ್ ನೋಟ್ ತಯಾರಿಸಿ ತನ್ನ ರೂಮ್ ನ ಗೋಡೆಗೆ ಅಂಟಿಸಿದ್ದಾನೆ. ಸೂಸೈಡ್ ನೋಟ್ ನಲ್ಲಿ ತನ್ನ ಅಪ್ಪನನ್ನು ಹೀಯಾಳಿಸಿದ್ದಾನೆ. ಅಣ್ಣನ ಸಾವಿಗೆ ನನ್ನ ಅಪ್ಪನೇ ಕಾರಣ ಎಂದು ದೂರಿದ್ದಾನೆ. ಗುರುವಾರ ಮೃದಲ್ ಅವರ ತಾಯಿ ಸಾವನ್ನಪ್ಪಿದ ದಿನವಾಗಿತ್ತು.
ಅಮ್ಮನನ್ನು ತುಂಬಾ ಪ್ರೀತಿಸುತ್ತಿದ್ದ ಮೃದಲ್, ಅಮ್ಮನನ್ನು ನೆನೆದು ಗೋಳಿಟ್ಟಿದ್ದಾನೆ. ನಂತರ ಕೆಳಗೆ ಹಾರುವ ಮುನ್ನ ರೂಮ್ ಗೆ ಬೆಂಕಿ ಹಚ್ಚಿದ್ದಾನೆ. ನಂತರ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾನೆ. ಪೂರ್ವ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.
ಇದೇ ರೀತಿ ಘಟನೆ: ಆಂಧ್ರಪ್ರದೇಶ ಮೂಲದ ನೀಲಿಮಾ ಯೆರುವಾ (27) ಎಂಬ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಗೆ ಸೇರಿದ ಉದ್ಯೋಗಿಯೊಬ್ಬರು ಕ್ಯಾಂಪಸ್‌ನಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದರು.
ಮಲ್ಟಿ ಪಾರ್ಕಿಂಗ್ ಸ್ಥಳದಲ್ಲಿ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು.ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಶಂಕೆ ಕೂಡಾ ವ್ಯಕ್ತವಾಗಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.












Click it and Unblock the Notifications