ಇನ್ಫಿ ನೀಲಿಮಾ ಸಾವು : ಮೂವರು ಟೆಕ್ಕಿಗಳ ಬಂಧನ

ನೀಲಿಮಾ ಸಾವಿನ ಪ್ರಕರಣವನ್ನು ಆತ್ಮಹತ್ಯೆ ಎಂದೇ ಪೊಲೀಸರು ಆರಂಭದಲ್ಲಿ ಪರಿಗಣಿಸಿದ್ದರು. ಆದರೆ, ಕ್ಯಾಂಪಸ್ಸಿನಲ್ಲಿ ದಕ್ಕಿದ್ದ ಕೆಲಸ ಕುರುಹುಗಳು ಬೇರೆ ಕಥೆಯನ್ನು ಹೇಳುತ್ತಿದ್ದವು. ಮಲ್ಟಿ ಪಾರ್ಕಿಂಗ್ ಲಾಟ್‌ನ ಹತ್ತನೇ ಮಹಡಿಯಲ್ಲಿ ನೀಲಿಮಾಳ ಪರ್ಸ್ ಸಿಕ್ಕಿದ್ದರೆ, ಏಳನೇ ಮಹಡಿಯಲ್ಲಿ ಆಕೆಯ ಚಪ್ಪಲಿ ಸಿಕ್ಕಿತ್ತು. ಅಲ್ಲದೆ, ಆಕೆಯ ದೇಹದ ಮೇಲೆ ಕೆಲ ಗಾಯದ ಗುರುತುಗಳಾಗಿದ್ದವು.
ಇದು ಆತ್ಮಹತ್ಯೆ ಎಂದು ನೀಲಿಮಾಳ ಕುಟುಂಬದವರು ನಂಬಲು ಸಿದ್ಧರಿರಲಿಲ್ಲ. ಆಕೆಯದು ಆತ್ಮಹತ್ಯೆಯಲ್ಲ ಕೊಲೆ ಎಂದು ಅವರು ದೂರು ನೀಡಿದ್ದರು. ಆದರೆ, ಇದು ಕೊಲೆ ಎಂಬುದಕ್ಕೆ ನೀಲಿಮಾ ಕುಟುಂಬದವರು ಯಾವುದೇ ಸಮರ್ಥನೆ ನೀಡಿರಲಿಲ್ಲ. ತನಿಖೆಯನ್ನು ಆರಂಭಿಸಿದ್ದ ಪೊಲೀಸರು ಸೆಕ್ಯೂರಿಟಿ ಗಾರ್ಡ್ ಮತ್ತು ಆಕೆಯ ಸಹೋದ್ಯೋಗಿಗಳ ವಿಚಾರಣೆ ನಡೆಸಿದ ನಂತರ ಇದು ಕೇವಲ ಆತ್ಮಹತ್ಯೆಯಲ್ಲ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ.
ಪ್ರಾಜೆಕ್ಟ್ ಕೆಲಸದ ಮೇಲೆ ಅಮೆರಿಕಾದ ನ್ಯೂ ಜೆರ್ಸಿಗೆ ಹೋಗಿದ್ದ ನೀಲಿಮಾ 2011ರಿಂದ ಅಲ್ಲೇ ವಾಸವಿದ್ದರು. ಅವರ ಪತಿ ಕೂಡ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ದುರ್ಘಟನೆ ನಡೆಯುವ ಕೆಲವೇ ದಿನಗಳ ಹಿಂದೆ ಅವರು ಭಾರತಕ್ಕೆ ಆಗಮಿಸಿದ್ದರು ಮತ್ತು ಆಗಸ್ಟ್ 17ರಂದು ಅಮೆರಿಕಕ್ಕೆ ಮರಳುವವರಿದ್ದರು. ದುರ್ಘಟನೆ ನಡೆದ ದಿನದಂದು ರಾತ್ರಿ 9.30ರವರೆಗೆ ಮಾತ್ರ ಅವರು ಕೆಲಸದ ಸ್ಥಳದಲ್ಲಿದ್ದರು. ಅವರ ಸಾವು ಸಂಭವಿಸಿರುವುದು 10.50 ಸುಮಾರಿಗೆ ಸೆಕ್ಯೂರಿಟಿ ಗಾರ್ಡ್ ಗಮನಕ್ಕೆ ಬಂದಿತ್ತು.
ತನಿಖೆ ಕೈಗೆತ್ತಿಕೊಂಡಿರುವ ಪೊಲೀಸ್ ಅಧಿಕಾರಿಗಳು ಹೇಳುವುದೇನೆಂದರೆ, "ನಾವು ಕಂಪನಿಯ ಅನೇಕ ಸಿಬ್ಬಂದಿಯನ್ನು ವಿಚಾರಿಸಿದ್ದೇವೆ. ನೀಲಿಮಾಳನ್ನು ಆಕೆಗೆ ಪರಿಚಯವಿದ್ದ ಸಹೋದ್ಯೋಗಿಯೊಬ್ಬರು ಡ್ರಾಪ್ ಕೊಡಲೆಂದು ಪಾರ್ಕಿಂಗ್ ಸ್ಥಳಕ್ಕೆ ಕರೆದುಕೊಂಡು ಬಂದಿರಬಹುದು. ಆಗ, ಮಾತಿನ ಚಕಮಕಿ ನಡೆದು ನೀಲಿಮಾ ಓಡಲು ಪ್ರಾರಂಭಿಸಿರಬಹುದು. ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆ ತಾನೇ ಕಟ್ಟಡದಿಂದ ಜಿಗಿದಿದ್ದಾಳೋ, ಆಕೆಯನ್ನು ತಳ್ಳಲಾಗಿದೆಯೋ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ."
ಸಿಸಿಟಿವಿ ದಾಖಲಿಸಿರುವ ಚಲನವಲನಗಳನ್ನು ಪೊಲೀಸರು ಅಭ್ಯಸಿಸುತ್ತಿದ್ದಾರೆ. ನೀಲಿಮಾ ಕುಟುಂಬದವರು ಹೇಳುವಂತೆ ಇದು ಕೊಲೆ ಎಂಬ ಖಚಿತ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಶಕ್ಕೆ ತೆಗೆದುಕೊಂಡಿರುವ ಮೂವರು ಟೆಕ್ಕಿಗಳ ವಿಚಾರಣೆಯ ನಂತರ ನೀಲಿಮಾ ಸಾವಿನ ಹಿಂದಿನ ನಿಖರವಾದ ಕಾರಣ ತಿಳಿದುಬರಬೇಕಿದೆ. ತನಿಖೆಗೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಇನ್ಫೋಸಿಸ್ ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications