• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿಂಪಿಕ್ಸ್ ಸೆಮಿಸ್ ಗೆ ಸೂಪರ್ ಸೈನಾ ಎಂಟ್ರಿ

By Mahesh
|

ಲಂಡನ್, ಆ.2: ಲಂಡನ್ ಒಲಿಂಪಿಕ್ಸ್ 2012ರಲ್ಲಿ ಸೈನಾ ನೆಹ್ವಾಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗುರುವಾರ(ಆಗಸ್ಟ್.2, 2012) ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಟೀಮ್ ಬುನ್ ರನ್ನು ಭರ್ಜರಿಯಾಗಿ ಸೋಲಿಸಿ ಪ್ರಪ್ರಥಮ ಬಾರಿಗೆ ಸೆಮಿಫೈನಲ್ ಹಂತ ತಲುಪಿದ್ದಾರೆ.

ಹೈದರಾಬಾದಿನ ಹೆಮ್ಮೆ ಎನಿಸಿರುವ ಸೈನಾ ನೆಹ್ವಾಲ್ ಅವರು ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕಿನ ಬಾನ್ (ವಿಶ್ವದ 7ನೇ ಶ್ರೇಯಾಂಕಿತ) ಅವರನ್ನು 21-15, 22-20 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಹಂತಕ್ಕೇರಿದ ಮೊದಲ ಭಾರತೀಯ ಬಾಡ್ಮಿಂಟನ್ ಆಟಗಾರ್ತಿ ಎನಿಸಿದರು.

22 ವರ್ಷದ ವಿಶ್ವದ 5ನೇ ಶ್ರೇಯಾಂಕಿತ ಸೈನಾ ಅವರು ವೆಂಬ್ಲಿ ಅರೀನಾದ ಕೋರ್ಟ್ 2ರಲ್ಲಿ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ಗೇಮ್ ಆನ್ನು ಕೇವಲ 16 ನಿಮಿಷದಲ್ಲಿ 21-16 ಅಂತರದಲ್ಲಿ ಗೆದ್ದ ಸೈನಾ ಮತ್ತೆ ಹಿಂತಿರುಗಿ ನೋಡಲಿಲ್ಲ.

ಎರಡನೇ ಗೇಮ್ ನಲ್ಲಿ ಹಿಡಿತ ಸಾಧಿಸಿದ ಬಾನ್ 20-17 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಆತಂಕ ಮೂಡಿಸಿದ್ದರು. ಆದರೆ, ಸರ್ವೀಸ್ ಬದಲಾವಣೆ ಆಗುತ್ತಿದ್ದಂತೆ ಅಂಕದ ಮೇಲೆ ಅಂಕ ಗಳಿಸಿದ ಸೈನಾ ಕಡೆಗೆ ಎರಡನೇ ಗೇಮ್ ಹಾಗೂ ಪಂದ್ಯವನ್ನು ಗೆದ್ದರು.

ಬೀಜಿಂಗ್ 2008 ಒಲಿಂಪಿಕ್ಸ್ ನಲ್ಲಿ ಕ್ವಾಟರ್ ಫೈನಲ್ ಹಂತ ತಲುಪಿದ್ದ ಸೈನಾ ನೆಹ್ವಾಲ್ ನಂತರ ಮುಂದಿನ ಹಂತಕ್ಕೇರಲಾಗದೆ ಕುಸಿದಿದ್ದರು. ಆದರೆ, ಈ ಬಾರಿ ಆತ್ಮವಿಶ್ವಾಸದಿಂದ ಎದುರಾಳಿಯನ್ನು ಎದುರಿಸಿದರು.

ಕಶ್ಯಪ್ ಸವಾಲು ಅಂತ್ಯ:ಕ್ವಾರ್ಟರ್ ಫೈನಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಉದಯೋನ್ಮುಖ ಆಟಗಾರ ಪಾರುಪಲ್ಲಿ ಕಶ್ಯಪ್ ಅವರು ಮಲೇಶಿಯಾದ ಬಲಿಷ್ಠ ಎದುರಾಳಿ ಲೀ ಚಾಂಗ್ ವೈ ಅವರ ವಿರುದ್ಧ 15-21, 10-21 ಅಂತರದಲ್ಲಿ ಸೋಲುಂಡಿದ್ದಾರೆ.

ವಿಶ್ವದ ನಂ.21 ಆಟಗಾರ ಪಿ ಕಶ್ಯಪ್ ಅವರನ್ನು ವಿಶ್ವದ ನಂ.2 ಆಟಗಾರ ಲೀ ಚಾಂಗ್ ವೈ ಸುಲಭವಾಗಿ ಸೋಲಿಸಿ ಭಾರತದ ಪದಕದ ಆಸೆಗೆ ತಣ್ಣೀರೆರಚಿದರು.

ಈ ಹಿಂದಿನ ಬಲಾಬಲ(3-3): ಸೈನಾ ನೆಹ್ವಾಲ್ (ವಿಶ್ವ ಶ್ರೇಯಾಂಕ ನಂ.5) ವಿರುದ್ಧ ಟೀನ್ ಬಾನ್ (ವಿಶ್ವದ ನಂ.11) ಈಗ ಸೈನಾ 4- ಬಾನ್ 3 ಬಾರಿ ಗೆಲುವು.

ಲಂಡನ್ ಒಲಿಂಪಿಕ್ಸ್ : (02.08.2012) ಸೈನಾಗೆ ಗೆಲುವು 21-15, 22-20

ಮಲೇಶಿಯಾ ಓಪನ್ : (13.1.2012) ಸೈನಾಗೆ ಗೆಲುವು 21-13, 21-23, 21-13

ಬಿಡಬ್ಲ್ಯೂ ಎಫ್ ವಿಶ್ವ ಸೂಪರ್ ಸೀರಿಸ್ : (17.12.2011) ಸೈನಾಗೆ ಗೆಲುವು 21-17, 21-18

ಹಾಂಗಾಂಗ್ ಓಪನ್ : (18.11.2011) ಬಾನ್ ಗೆ ಗೆಲುವು 21-16, 21-15

ಇಂಡೋನೇಶಿಯಾ ಓಪನ್ : (24.06.2011) ಸೈನಾಗೆ ಗೆಲುವು 21-19, 21-19

ಆಲ್ ಇಂಗ್ಲೆಂಡ್ ಸೂಪರ್ ಸೀರಿಸ್ : (13.03.2010) ಬಾನ್ ಗೆ ಗೆಲುವು 21-19, 21-17

ಹಾಂಗಾಂಗ್ ಸೂಪರ್ ಸೀರಿಸ್ : (27.11.2007) ಬಾನ್ ಗೆ ಗೆಲುವು 21-15, 12-21, 21-16

ಸೈನಾ ಕ್ವಾರ್ಟರ್ ಫೈನಲಿನಲ್ಲಿ ನೆದರ್ಲೆಂಡ್ ನ ಜಿ ಯೊ ವಿರುದ್ಧ 21-4, 21-16ರಿಂದ ಗೆಲುವು ಸಾಧಿಸಿದ್ದರು. ಶುಕ್ರವಾರ(ಆ.3) ನಡೆಯಲಿರುವ ಸೆಮಿಫೈನಲ್ ನಲ್ಲಿ ಸೈನಾ ನೆಹ್ವಾಲ್ ಅವರು ಚೀನಾದ ನಂ.1 ಶಟ್ಲರ್ ವಾಂಗ್ ಯಿಹಾನ್ ಅವರನ್ನು ಎದುರಿಸಲಿದ್ದಾರೆ.

ಸೈನಾ ಅವರ ಸೆಮಿಫೈನಲ್ ಹಾದಿ ಕಠಿಣವಾಗಿದ್ದು, ಈ ಹಿಂದೆ ವಾಂಗ್ ಯಿಹಾನ್ ಎದುರು ಐದು ಬಾರಿ ಸೈನಾ ಸೋಲು ಕಂಡಿದ್ದಾರೆ. ಆದರೆ, ಈ ಬಾರಿ ಒಲಿಂಪಿಕ್ಸ್ ನಲ್ಲಿ ಉತ್ತಮ ಲಯದಲ್ಲಿರುವ ಸೈನಾ ಭಾರತದ ಪದಕ ಗೆಲ್ಲುವ ನೆಚ್ಚಿನ ಕುದುರೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saina Nehwal made it a historic day for Indian badminton by entering the women's singles semi-finals at the London Olympics 2012 here on Thursday (Aug.2). While P Kashap bowed out to world No. 2 Lee Chong Wei of Malaysia.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more