ಸಾಫ್ಟ್ ವೇರ್ ಟೆಕ್ಕಿ ಕಿರುಕುಳಕ್ಕೆ ನವವಿವಾಹಿತೆ ಬಲಿ

Software techie wife suicide Bangalore
ಬೆಂಗಳೂರು, ಜು.31: ಸಾಫ್ಟ್ ವೇರ್ ಉದ್ಯೋಗಿ ನಂಬಿಕೊಂಡು ಮಗಳನ್ನು ಮದುವೆ ಮಾಡಿಕೊಟ್ಟ ಹೆತ್ತವರು ತಲೆ ಮೇಲೆ ಕೈ ಹೊತ್ತಿಕೊಂಡು ಕೂತಿದ್ದಾರೆ. ಟೆಕ್ಕಿ ಆಶೋಕ್ ಕುಮಾರ್ ಹಾಗೂ ಅವರ ಮನೆಯವರ ಕಿರುಕುಳ ತಾಳಲಾರದೆ ನವವಿವಾಹಿತೆ ಮಮತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರ್ ಎಂವಿ ನಗರದ 5ನೇ ಕ್ರಾಸ್ ನಲ್ಲಿರುವ ಗಂಡನ ಮನೆಯಲ್ಲಿ ಮಮತಾ(23) ಆತ್ಮಹತ್ಯೆ ಮಾಡಿಕೊಂಡಿದ್ದು, ಮಗಳ ಸಾವಿಗೆ ಆಕೆ ಗಂಡನ ಮನೆಯವರೇ ಕಾರಣ ಎಂದು ಮಮತಾ ಪೋಷಕರು ಆರೋಪಿಸಿದ್ದಾರೆ.

ಅಲ್ಲದೆ ಮಮತಾ ಬರೆದಿಟ್ಟಿರುವ ಡೆತ್ ನೊಟ್ ನಲ್ಲೂ ಗಂಡ ಅಶೋಕ್ ನೀಡಿದ ಕಿರುಕುಳದ ಸವಿವರಗಳು ಇದೆ. ಸೋಮವಾರ ತಡರಾತ್ರಿ ಮನೆಗೆ ಬಂದ ಅಶೋಕ್ ಗೆ ಪತ್ನಿ ವೇಲ್ ನಿಂದ ಬೆಡ್ ರೂಂನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ರಾಮಮೂರ್ತಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಂಗಳವಾರ(ಜು.31) ದಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ತನಿಖೆಯ ಮೊದಲ ಹಂತದಲ್ಲಿ ಮಮತಾ ಪತಿ ಅಶೋಕ್ ಹಾಗೂ ಅವರ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ನಾವು ಮುನ್ನೆಕೊಳಲು ನಿವಾಸಿಗಳು ಒಂದೂವರೆ ವರ್ಷದ ಕೆಳಗೆ ಅಶೋಕ್ ಜೊತೆ ಮಮತಾ ಮದುವೆ ನೆರವೇರಿಸಲಾಗಿತ್ತು. ಅಶೋಕ್ ವರದಕ್ಷಿಣೆಗಾಗಿ ಕಿರುಕುಳ ನೀಡುವ ಸಾಧ್ಯತೆ ಇರಲಿಲ್ಲ. ಮಗಳು ಅಳಿಯನಿಗೆ ಎಲ್ಲವನ್ನೂ ನೀಡಿದ್ದೆವು.

ಅಶೋಕ್ ಗೂ ಒಳ್ಳೆ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಉದ್ಯೋಗವಿತ್ತು. ಆದರೆ, ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಅಶೋಕ್ ಪದೇ ಪದೇ ನಮ್ಮ ಮಗಳಿಗೆ ಹಿಂಸೆ ನೀಡುತ್ತಿದ್ದ. ಒಂದೆರಡು ಬಾರಿ ಈ ಬಗ್ಗೆ ನಮ್ಮಲ್ಲಿ ದುಃಖ ತೋಡಿಕೊಂಡಿದ್ದಳು ಆದರೆ, ಈಗ ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಮಮತಾ ಅವರ ತಂದೆ ಗೋಳಾಡಿದ್ದಾರೆ.

ಮಮತಾ ಸಾವಿಗೆ ಅಶೋಕ್ ಕಿರುಕುಳ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಕಿರುಕುಳ ನೀಡಿದ್ದಾದರೂ ಏಕೆ? ಅಶೋಕ್ ಅವರಿಗೆ ಕೆಲಸದ ಒತ್ತಡ, ಮಾನಸಿಕ ಒತ್ತಡವೇ ಕಿರುಕುಳ ನೀಡಲು ಕಾರಣವಾಯಿತೇ? ಎಂಬ ಮುಂತಾದ ಪ್ರಶ್ನೆಗಳೊಂದಿಗೆ ರಾಮಮೂರ್ತಿ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+