ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನ್ನೆಗೆ ಏಟು: ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ

By Srinath
|
Google Oneindia Kannada News

traffic-jam-causes-child-death-pakistan
ಇಸ್ಲಾಮಾಬಾದ್, ಜುಲೈ 27: ಬೃಹತ್ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿದ ಮೂರು ವರ್ಷದ ಮಗುವೊಂದು ಸಾವನ್ನಪ್ಪಿದೆ. ಸ್ವಾಟ್ ಪ್ರದೇಶದ ಜಿಟಿ ರೋಡ್ ನಲ್ಲಿ ಗುರುವಾರ ಈ ದುರಂತ ಸಂಭವಿಸಿದೆ.

ವಿದ್ಯುತ್ ಕಣ್ಣಾಮುಚ್ಚಾಲೆ ಕಾಟದ ವಿರುದ್ಧ ಜನ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ಸುಮಾರು 6 ಗಂಟೆಗಳ ಕಾಲ ದೊಡ್ಡ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯ ಎರಡೂ ದಿಕ್ಕಿಗೆ ಸಾವಿರಾರು ವಾಹನಗಳು ಜಾಮ್ ಆಗಿದ್ದವು. ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿ ಬಿಸಿಲಿನ ದಗೆಯಿಂದ ಮಗು ಹೈರಾಣಗೊಂಡಿದೆ. ಕೊನೆಗೆ ಉಸಿರುಗಟ್ಟಿ ರಸ್ತೆ ಮೇಲೆ ನಿಂತಿದ್ದ ವಾಹನದಲ್ಲೇ ಅಸುನೀಗಿದೆ.

ಕೆನ್ನೆಗೆ ಬಾರಿಸಿದ ಶಿಕ್ಷಕಿ- ಕಿಟಕಿಯಿಂದ ಹಾರಿ ಸಾವಿಗೆ ಶರಣಾದ ಬಾಲಕಿ; ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಶಿಕ್ಷಕಿ ತನ್ನ ಕೆನ್ನೆಗೆ ಬಾರಿಸಿದರೆಂದು ಅಪಮಾನಗೊಂಡ ಶಾಲಾ ಬಾಲಕಿಯೊಬ್ಬಳು ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾಳೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಸೇಂಟ್ ಡೊಮಿನಿಕ್ ಸ್ಯಾವಿಯೊ ಸ್ಕೂಲಿನಲ್ಲಿ ಗುರುವಾರ ಈ ಘಟನೆ ನಡೆದಿದೆ. ಮೃತಳು 11 ವರ್ಷದ 6ನೆಯ ತರಗತಿಯ ವಿದ್ಯಾರ್ಥಿನಿ.

ಪರೀಕ್ಷೆ ನಡೆಯುತ್ತಿದ್ದಾಗ ಏನಾಯಿತೆಂದರೆ ... ಸದರಿ ವಿದ್ಯಾರ್ಥಿನಿ ತನ್ನ ಸಹಪಾಠಿಯೊಂದಿಗೆ ಮಾತಿನಲ್ಲಿ ತೊಡಗಿದ್ದಳು. ಇದನ್ನು ಗಮನಿಸಿದ ಶಿಕ್ಷಕಿ, ತಕ್ಷಣ ಬಾಲಕಿಯ ಬಳಿ ಸಾಗಿ, ಬಯ್ಯಲಾರಂಭಿಸಿದರು. ಬಾಲಕಿಯ ಉತ್ತರ ಪತ್ರಿಕೆಯನ್ನು ಕಸಿದುಕೊಂಡು ಅವಳ ಕೆನ್ನೆಗೆ ಎರಡು ಬಾರಿಸಿದರು. ಅಷ್ಟೇ ಸಾಕಾಯಿತು...

ಶಾಲೆಯಲ್ಲಿ ಎಲ್ಲರೆದುರೂ ಮ್ಯಾಡಂ ತನ್ನ ಕೆನ್ನೆಗೆ ಬಾರಿಸಿದ್ದನ್ನು ಸಹಿಸಲಾರದ ಬಾಲಕಿ ಸೀದಾ ಶಾಲೆಯ ಮೇಲ್ಮಹಡಿಯಲ್ಲಿರುವ ಕೊಠಡಿಯತ್ತ ದೌಡಾಯಿಸಿದ್ದಾಳೆ. ಹಿಂದುಮುಂದು ಯೋಚಿಸದೆ ಅಲ್ಲಿಂದ ಸೀದಾ ಕೆಳಗೆ ಹಾರಿದ್ದಾಳೆ. ಜತೆಗೆ ಅವಳ ಪ್ರಾಣಪಕ್ಷಿಯೂ ಹಾರಿದೆ.

English summary
Traffic jam causes child's death in Pak: A child stuck in a massive traffic jam, following protests over frequent power outages, died due to the searing heat in G.T. Road in Swat in Pakistan on Thursday (July 26).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X