• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ವಿಶ್ವವೇ ಸಜ್ಜು

By Mahesh
|

ಬೆಂಗಳೂರು, ಜು.27: ಲಂಡನ್ನಿನಲ್ಲಿ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಗೆ 2012ಕ್ಕೆ ಶುಕ್ರವಾರ ತಡರಾತ್ರಿ ಭಾರತೀಯ ಕಾಲಮಾನ 1 ಗಂಟೆಗೆ ಚಾಲನೆ ದೊರೆಯಲಿದೆ. ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ಮೂರು ಗಂಟೆಗಳ ನೇರ ಪ್ರಸಾರವನ್ನು ಡಿಡಿ ಸ್ಪೋರ್ಟ್ಸ್ ವಾಹಿನಿ ಹೊತ್ತು ತರುತ್ತಿದೆ. 17 ದಿನಗಳ ಕ್ರೀಡಾಕೂಟದಲ್ಲಿ ಭಾರತದ 81 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಕ್ವೀನ್ ಎಲಿಜಬೆತ್ II ಅವರು ಅಧಿಕೃತವಾಗಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಉದ್ಘಾಟನಾ ಸಮಾರಂಭ ಜುಲೈ 27 ತಡರಾತ್ರಿ 1 ಗಂಟೆಯಿಂದ ಬೆಳಗ್ಗಿನ 4:30ರ ವರೆಗೆ ಪ್ರಸಾರವಾಗಲಿದೆ. ದಿನದ ಮುಖ್ಯಾಂಶಗಳ ಬಗ್ಗೆ ನಿತ್ಯ ಅರ್ಧ ಗಂಟೆ ಕಾರ್ಯಕ್ರಮ, ಬೆಳಗ್ಗೆ 7ರಿಂದ 8ರ ವರೆಗೆ ಇಂಡಿಯಾ ಅಟ್ ಲಂಡನ್ ಕಾರ್ಯಕ್ರಮ' ದೂರದರ್ಶನದಲ್ಲಿ ಪ್ರಸಾರವಾಗಲಿದೆ. [ವೇಳಾಪಟ್ಟಿ ನೋಡಿ]

ತಾರೆಗಳ ದಂಡು: ಸ್ಟ್ರಾಡ್ ಫೋರ್ಡ್ ನ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ 120 ದೇಶದ ಪ್ರತಿನಿಧಿಗಳು ಆಗಮಿಸುತ್ತಿದ್ದು, ಗಣ್ಯರ ಪಟ್ಟಿಯಲ್ಲಿ ಹಾಲಿವುಡ್ ತಾರೆ ಏಂಜಲಿನಾ ಜೋಲಿನಿಂದ ಅಮೆರಿಕದ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ತನಕ ಹಬ್ಬಿದೆ.

ಪ್ರಿನ್ಸ್ ವಿಲಿಯಮ್ಸ್, ಕ್ಯಾಥರೀನ್ ಜೋಡಿ ಜೊತೆಗೆ ಯುರೋಪಿನ ರಾಜಮನೆತನ ಜೋಡಿಗಳು ಸಮಾರಂಭಕ್ಕೆ ಆಗಮಿಸಲಿದೆ. ಜರ್ಮನಿಯ ಏಂಜೆಲಾ ಮರ್ಕೆಲ್, ಜಪಾನ್ ಪ್ರಧಾನಿ ಯೊಶಿಹಿಕೊ ನೊಡಾ, ಮೊನೊಕೊದ ಪ್ರಿನ್ಸ್ ಆಲ್ಬರ್ಟ್, ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್, ರಾಷ್ಟ್ರಪತಿ ವ್ಲಾಡಿಮಿರ್ ಪುಟಿನ್.

ಡೇವಿಡ್ ಬೆಕ್ ಹ್ಯಾಮ್, ಏಂಜಲಿನಾ ಜೋಲಿ ಹಾಗೂ ನಟ ಬ್ರಾಡ್ ಪಿಟ್ , ರೇಸ್ ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್, ನಟಿ ರೊಸರಿಯೊ ಡಾಸನ್ ಗಣ್ಯರ ಪಟ್ಟಿಯಲ್ಲಿದ್ದಾರೆ.

80,000 ಜನ ಪ್ರೇಕ್ಷಕರ ಸಮ್ಮುಖದಲ್ಲಿ ಮೂರು ಗಂಟೆಗಳ ಕಾಲ ಮನರಂಜನೆ ಒದಗಿಸುವ ಹೊಣೆಯನ್ನು ಸ್ಲಮ್ ಡಾಗ್ ಮಿಲಿಯೇನರ್ ಖ್ಯಾತಿಯ ಡ್ಯಾನಿ ಬಾಯ್ಲ್ ಅವರಿಗೆ ನೀಡಲಾಗಿದೆ. ಉದ್ಘಾಟನಾ ಕಾರ್ಯಕ್ರಮ ಸುಮಾರು ನೂರು ಕೋಟಿ ಪ್ರೇಕ್ಷಕರನ್ನು ತಲುಪುವ ನಿರೀಕ್ಷೆಯಿದೆ.

ವಿಲಿಯಂ ಶೇಕ್ಸ್ ಪಿಯರ್ ಅವರ The Tempest ಕೃತಿ ಆಧರಿಸಿ Isles of Wonder ಎಂಬ ಕಾರ್ಯಕ್ರಮವನ್ನು ನಿರ್ದೇಶಕ ಡ್ಯಾನಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಿಟಿಷರ ಸಾಂಸ್ಕೃತಿಕ ಹಿರಿಮೆ ಗರಿಮೆಗಳನ್ನು ಕೊಂಡಾಡಲಾಗುತ್ತದೆ. ಜೇಮ್ಸ್ ಬಾಂಡ್, ಪೇಟರ್ ಪ್ಯಾನ್ ಹಾಗೂ ಪಾಲ್ ಮೆಕ್ ಕಾರ್ಟ್ನಿ ಮುಂತಾದ ವ್ಯಕ್ತಿಗಳ, ಪಾತ್ರಗಳ ಬಗ್ಗೆ ಉಲ್ಲೇಖವಿರುತ್ತದೆ.

The Beatles, The Clash, The Sex Pistols, The Who, The Rolling Stones, Led Zeppelin, Pink Floyd, David Bowie, Queen, Blur, Radiohead, Coldplay, Oasis and Adele ತಂಡಗಳ ಜೊತೆಗೆ ಎಆರ್ ರೆಹಮಾನ್ ಹಾಗೂ ಇಳಯರಾಜ ಅವರ ಸಂಗೀತ ಸಂಯೋಜನೆಗಳನ್ನು ಕೇಳಬಹುದಾಗಿದೆ. ಒಟ್ಟಾರೆ 86 ಹಾಡುಗಳನ್ನು ಲೈವ್ ಆಗಿ ಕೇಳಬಹುದು.

ಸುಮಾರು 7 ವರ್ಷಗಳ 9.3 ಬಿಲಿಯನ್ ಪೌಂಡ್ ಖರ್ಚು ಮಾಡಿ ನಿರ್ಮಿಸಿರುವ ವೇದಿಕೆಯಲ್ಲಿ 10,000ಕ್ಕೂ ಅಧಿಕ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಆಸ್ಕರ್ ವಿಜೇತ ನಿರ್ದೇಶಕ ಡ್ಯಾನಿ ಅವರು ತಮ್ಮ ರೂಪಕದಲ್ಲಿ 70 ಕುರಿಗಳು, 12 ಕುದುರೆಗಳು, 10 ಕೋಳಿಗಳು ಹಾಗೂ 9 ಬಾತುಕೋಳಿಗಳನ್ನು ಬಳಸಿಕೊಂಡಿರುವುದು ವಿಶೇಷ.

ಒಟ್ಟಾರೆ 204 ದೇಶಗಳ 11,000 ಅಥ್ಲೀಟ್ ಗಳು 39 ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಮ್ಮ ದೇಶದ ಕೀರ್ತಿ ಹೆಚ್ಚಿಸಲು ಶ್ರಮಿಸಲಿದ್ದಾರೆ. ಇಡೀ ಕ್ರೀಡಾಕೂಟದ ಇಂಚಿಂಚು ಸುದ್ದಿಯನ್ನು ಹೆಕ್ಕಿ ಜನರಿಗೆ ತಲುಪಿಸಲು ದಾಖಲೆಯ ಸಂಖ್ಯೆಯಲ್ಲಿ ಸುಮಾರು 21,000 ಮಾಧ್ಯಮ ಪ್ರತಿನಿಧಿಗಳು ಈ ಬಾರಿ ಒಲಿಂಪಿಕ್ಸ್ ಗೆ ಆಗಮಿಸಿದ್ದಾರೆ.

ಭಾರತದ ಅಥ್ಲೀಟ್‌ಗಳು ಈ ವರೆಗೆ ಮಾಡಿರುವ ಸಾಧನೆಯನ್ನು ಅಳಿಸಿ ಹಾಕಿ ಹೊಸ ಇತಿಹಾಸವನ್ನು ಬರೆಯಲು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Opening Ceremony of the world's biggest sporting event-Olympics 2012 will begin in London at 1:30 AM IST on Friday(Jul.27).Thousands of VIPs including some 120 national leaders are in town for the event, with guests ranging from Angelina Jolie and US First Lady Michelle Obama are attending the event. 60,000 odd spectators will witness Danny Boyle's stunning opening performance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more