ಬೆಂಗಳೂರಿನ ಮಕ್ಕಳನ್ನು ನೋಡಿ ಕಲ್ತುಕೊಳ್ಳಿ: ಒಬಾಮಾ

americans-should-learn-from-bangalore-youths-obama
ವಾಷಿಂಗ್ಟನ್, ಜುಲೈ 27: 'ಬೆಂಗಳೂರಿನ ಮಕ್ಕಳನ್ನು ನೋಡಿ ಕಲ್ತುಕೊಳ್ಳಿ' ಎಂದು ಸಾಕ್ಷಾತ್ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ದೇಶದ ಹುಡುಗರ ಎಳೆಯ ಭಾವನೆಗಳಿಗೆ ಕಿಚ್ಚುಹಚ್ಚಿದ್ದಾರೆ. ಬುಧವಾರ (ಜುಲೈ 25) ಇಲ್ಲಿ ನಡೆದ ರಾಷ್ಟ್ರೀಯ ನಗರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ದೇಶದ ಯುವಜನತೆಯ ಭವಿಷ್ಯದ ಬಗ್ಗೆ ಅಪಾರ ಕಾಳಜಿ ಮತ್ತು ಆತಂಕವನ್ನು ಒಟ್ಟೊಟ್ಟಿಗೇ ಹೊರಹಾಕಿರುವ ದೊಡ್ಡಣ್ಣ ಒಬಾಮಾ, 'ಬೆಂಗಳೂರು ಮತ್ತು ಬೀಜಿಂಗ್ ಯುವಜನತೆಯ ಕೈಯಲ್ಲಿ ಸೋಲುಣ್ಣಬಾರದು ಎಂದರೆ ನಿಮ್ಮ ನಿಮ್ಮ ಹೋಮ್ ವರ್ಕುಗಳನ್ನು ಸರಿಯಾಗಿ ಮಾಡಿ' ಎಂದು ಅಮೆರಿಕದ ಮಕ್ಕಳಿಗೆ ಕಿವಿ ಹಿಂಡಿದ್ದಾರೆ.

'ಬೆಂಗಳೂರಿಗರು ಮತ್ತು ಈ ಬೀಜಿಂಗ್ ಜನ ಇದ್ದಾರಲ್ಲಾ ಅವರು ಅಮೆರಿಕನ್ನರಿಗೆ ಬಹುದೊಡ್ಡ ಬೆದರಿಕೆಯೊಡ್ಡಿದ್ದಾರೆ. ಜತೆಗೆ ದೊಡ್ಡ ಪ್ರತಿಸ್ಪರ್ಧಿಗಳಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಆದ್ದರಿಂದ ಅಮೆರಿಕದ ನನ್ನ ನೆಚ್ಚಿನ ಮಕ್ಕಳೇ ಏಳಿ, ಎದ್ದೇಳಿ. ನಿಮ್ಮ ಹೋಮ್ ವರ್ಕುಗಳನ್ನು ಸಮರ್ಪಕವಾಗಿ ಮಾಡಿಮುಗಿಸಿ. ಸಮಯದ ನಾಡಿಮಿಡಿತ ಅರಿಯಿರಿ' ಎಂದು ಚಾಚಾ ಒಬಾಮಾ ತಮ್ಮ ದೇಶದ ಅಂತರಾಳದ ಮಾತನ್ನು ಹೊರಹಾಕಿದ್ದಾರೆ.

'ಅವರಲ್ಲಿ hang out ಎಂಬ ಮಾತೇ ಇಲ್ಲ. ಇನ್ನು over ಆಗುವ ಮಾತೇ ಇಲ್ಲ. ನೋಡಿ ಅವರು ವಿಡಿಯೋ ಗೇಮುಗಳನ್ನೇ ಆಡುವುದಿಲ್ಲ. ಇನ್ನು Real Housewives ವೀಕ್ಷಿಸುವ ರಗಳೆಯೂ ಅವರಿಗಿಲ್ಲ. ನಾನಿದನ್ನು ಹಾಗೇ ಸುಮ್ಮನೆ ಅಂತೇನೂ ಹೇಳ್ತಿಲ್ಲ. ಯಶಸ್ಸು ನಿಮ್ಮದಾಗಲೇಬೇಕು' ಎಂದು ಖಡಕ್ಕಾಗಿಯೇ ಬುದ್ಧಿಮಾತು ಹೇಳಿದ್ದಾರೆ ದೊಡ್ಡಣ್ಣ ಬರಾಕ್ ಒಬಾಮಾ.

ಮರೆತ ಮಾತು: ಬೆಂಗಳೂರು/ಕರ್ನಾಟಕದ ಪುಟ್ ಪುಟಾಣಿ ಮಕ್ಕಳೇ ಅಂಕಲ್ ಸ್ಯಾಮ್ ಅವರ ಈ ಮಾತುಗಳು ಖಂಡಿತಾ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿವೆ - 'ಎಳಿ, ಎದ್ದೇಳಿ, ಗುರಿ ಸಾಧಿಸುವವರಿಗೆ ವಿಶ್ರಮಿಸಬೇಡಿ' ಎಂಬ ವಿವೇಕವಾಣಿಯನ್ನು ಅರ್ಥಪೂರ್ಣಗೊಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+