ಎಂಎಂಎಸ್ ಭೀತಿಯಿಂದ ವಿದ್ಯಾರ್ಥಿನಿ ನೇಣಿಗೆ ಶರಣು

ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಇಂಜಿನಿಯರ್ ವಿಷಯದ 2ನೇ ವರ್ಷದ ಡಿಪ್ಲೋಮಾ ವಿದ್ಯಾರ್ಥಿ ಎಂ. ಎಜಿಲಾ ಮೃತಪಟ್ಟ ದುರ್ದೈವಿ. ತಿರುವಣ್ಣಾಮಲೈನ ಚೆಂಗಮ್ ಸಮೀಪದ ಮನ್ಮಲೈನ ತನ್ನ ಮನೆಯಲ್ಲಿ ಎಜಿಲಾ ನೇಣು ಹಾಕಿಕೊಂಡಿದ್ದಾಳೆ.
ಸುಳಿವು ಕೊಟ್ಟ ಸೂಸೈಡ್ ನೋಟ್: ಎಜಿಲಾ ಬರೆದಿಟ್ಟ ಸೂಸೈಟ್ ನೋಟ್ ನಲ್ಲಿ ತನ್ನ ಕಸಿನ್ ಇಳವರಸನ್ 21, ಆತನ ಗೆಳೆಯರಾದ ಆರ್ ಜಗನ್ 21 ಹಾಗೂ ವಿನೋದ್ 21 ಹೆಸರು ವಿಳಾಸ ಸಮೇತ ದಾಖಲಿಸಲಾಗಿದೆ. ಎಲ್ಲರೂ ಆಕೆ ಇದ್ದ ಪ್ರದೇಶದವರೇ ಆಗಿರುವುದರಿಂದ ಪೊಲೀಸರಿಗೆ ಅರೋಪಿಗಳನ್ನು ಪತ್ತೆ ಹಚ್ಚಲು ಸುಲಭವಾಗಿದೆ.
ಕೆಲ ದಿನಗಳ ಹಿಂದೆ ಆಕೆ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ನೋಡಿಕೊಂಡು ಆಕೆ ಕಸಿನ್ ಇಳವರಸನ್ ನುಗ್ಗಿದ್ದಾನೆ. ಆಕೆ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಮೊಬೈಲ್ ಫೋನ್ ಮೂಲಕ ಸಂಪೂರ್ಣ ಬೆತ್ತಲೆ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ.
ನಂತರ ಆಕೆ ಬಳಿ ತನ್ನ ಗೆಳೆಯರೊಡನೆ ಬಂದ ಇಳವರಸನ್, ನನ್ನ ಬಳಿ ನಿನ್ನ ನಗ್ನ ಚಿತ್ರಗಳಿದೆ. ವಿಡಿಯೋ ಕ್ಲಿಪ್ಪಿಂಗ್ ಇದೆ. ನೀನು ನಮಗೆ ಸಹಕರಿಸದಿದ್ದರೆ ಎಲ್ಲವನ್ನೂ ಎಂಎಂಎಸ್ ಮಾಡಿ ನಿಮ್ಮ ಕಾಲೇಜಿನಲ್ಲಿ ಹಂಚುತ್ತೇನೆ ಎಂದು ಹೆದರಿಸಿದ್ದಾನೆ. ನಂತರ ಆಕೆ ಪ್ರತಿರೋಧಿಸಿದರೂ ಲೆಕ್ಕಿಸದೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇದರಿಂದ ನೊಂದ ಆಕೆ ತನ್ನ ಜೀವನವನ್ನು ಆತ್ಮಹತ್ಯೆ ಮೂಲಕ ಅಂತ್ಯಗೊಳಿಸಿದ್ದಾಳೆ.
2000 ಐಟಿ ಕಾಯಿದೆ ಹಾಗೂ ತಮಿಳುನಾಡಿನ ಮಹಿಳಾ ಕಿರುಕುಳ ತಡೆ ಕಾಯಿದೆ 1988 ರ ಅನ್ವಯ ಮೂವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಿದೆ. ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿde.
ಆದರೆ, ಎಜಿಲಾ ತನ್ನ ಸೂಸೈಡ್ ನೋಟ್ ನಲ್ಲಿ ಬರೆದಿದ್ದಂತೆ ಮೊಬೈಲ್ ನಲ್ಲಿ ಯಾವುದೇ ಕ್ಲಿಪ್ಪಿಂಗ್ ಇರಲಿಲ್ಲ .ಆದರೆ, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಸತ್ಯ ಬಾಯ್ಬಿಟ್ಟ ಇಳವರಸನ್, ಬಂಧನದ ಭೀತಿಯಿಂದ ವಿಡಿಯೋ ಡಿಲಿಟ್ ಮಾಡಿಬಿಟ್ಟೆ ಎಂದಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇಳವರಸನ್ ಆಕೆ ಮನೆಗೆ ಹೋಗಿ ಆಕೆ ಬೆತ್ತಲೆ ಚಿತ್ರ ವಿಡಿಯೋ ಮಾಡಿದ್ದಕ್ಕೆ ಸಾಕ್ಷಿ ಸಿಕ್ಕಿದೆ. ಆದರೆ, ವಿಡಿಯೋ ಕ್ಲಿಪ್ಪಿಂಗ್ ಈಗ ನಾಶ ಪಡಿಸಿಬಿಟ್ಟಿದ್ದಾನೆ. ಸೈಬಲ್ ಸೆಲ್ ಸಹಾಯ ಪಡೆದು ವಿಡಿಯೋ ಕ್ಲಿಪ್ಪಿಂಗ್ ಬೇರೆ ಕಡೆ ಹರಡದಂತೆ ತಡೆಯಲಾಗುವುದು ಎಂದು ಚೆಂಗಮ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ತನಿಖಾಧಿಕಾರಿ ಕಾಮರಾಜ್ ಹೇಳಿದ್ದಾರೆ.












Click it and Unblock the Notifications