• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವನಸಮುದ್ರ ಬಳಿ ತಲೆ ಎತ್ತಿದ ಸೌರ ವಿದ್ಯುತ್ ಘಟಕ

By Mahesh
|

ಬೆಂಗಳೂರು, ಜು.26: ಏಷ್ಯಾದ ಪ್ರಪ್ರಥಮ ಜಲವಿದ್ಯುತ್ ಸ್ಥಾವರ ಎಂಬ ಖ್ಯಾತಿಯ ಮಂಡ್ಯ ಜಿಲ್ಲೆಯ ಶಿವನಸಮುದ್ರ ಈಗ ಸೌರ ವಿದ್ಯುತ್ ಘಟಕ ಸ್ಥಾಪನೆ ಮೂಲಕ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ.

ಶಿವನಸಮುದ್ರ ಬಳಿ 5 ಮೆಗಾವ್ಯಾಟ್ ಸಾಮರ್ಥ್ಯದ ಪರಿಸರ-ಸ್ನೇಹಿ, ಮುಖ್ಯ ವಿದ್ಯುತ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಸೌರ ವಿದ್ಯುತ್ ಸ್ಥಾವರಕ್ಕೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಚ್‌ಇಎಲ್ ಚಾಲನೆ ನೀಡಿದೆ.

ಕೋಲಾರದ ಸೌರ ಘಟಕದ ನಂತರ ಶಿವನಸಮುದ್ರ ಸ್ಥಾವರವು ಕರ್ನಾಟಕದ ಮೊದಲ ಬೃಹತ್ ಸೌರ ವಿದ್ಯುತ್ ಸ್ಥಾವರವಾಗಿದೆ. ಬಿಎಚ್‌ಇಎಲ್ ಇದನ್ನು ಕರ್ನಾಟಕ ವಿದ್ಯುತ್ ನಿಗಮಕ್ಕಾಗಿ ಜಾರಿಗೊಳಿಸಿದೆ.

ಈ ಯೋಜನೆಯಲ್ಲಿ ಬಿಎಚ್‌ಇಎಲ್ ಕಾರ್ಯವ್ಯಾಪ್ತಿಯಲ್ಲಿ ಸೌರವಿದ್ಯುತ್ ಸ್ಥಾವರದ ವಿನ್ಯಾಸ, ಉತ್ಪಾದನೆ, ಸರಬರಾಜು, ಸ್ಥಾಪನೆ ಮತ್ತು ಕಾರ್ಯಾಚರಣೆ ಸೇರಿದೆ. ಅಲ್ಲದೆ, ಇನ್ನೂ 3 ವರ್ಷಗಳ ಅವಧಿಗೂ ಈ ಸೌರ ವಿದ್ಯುತ್ ಸ್ಥಾವರದ ಚಾಲನೆ, ನಿರ್ವಹಣೆ ಮತ್ತು ಸಂರಕ್ಷಣೆ ನೋಡಿಕೊಳ್ಳಲಿದೆ.

ಜೂನ್‌ನಿಂದಲೇ ಪ್ರಾಯೋಗಿಕ ಕಾರ್ಯಾರಂಭ ಮಾಡಿದ್ದ ಈ ಸೌರವಿದ್ಯುತ್ ಸ್ಥಾವರ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದೆ. ಸೂರ್ಯನ ಕಿರಣಗಳನ್ನು ಸೌರ ಪಟ್ಟಿಗಳಿಗೆ ಹಾಯಿಸಲಾಗುವುದು ಇದರಿಂದ ಉತ್ಪಾದಿಸಿದ ಡಿ.ಸಿ. ವಿದ್ಯುತ್ ಅನ್ನು ಇನ್ವರ್ಟರುಗಳ(ಸುಮಾರು 12 ಇನ್ವರ್ಟರ್ಸ್ 250KW/invertor) ಮೂಲಕ ಎಸಿ ವಿದ್ಯುತ್ತಾಗಿ ಪರಿವರ್ತನೆ ಮಾಡಲಾಗುವುದು, ಟ್ರಾನ್ಸ್‌ಫಾರ್ಮರ್‌ಗಳನ್ನು ಬಳಸಿ 66 ಕೆ.ವಿ. ಮುಖ್ಯ ವಿದ್ಯುತ್ ಜಾಲ(ಗ್ರಿಡ್) ಕ್ಕೆ ಹರಿಯುತ್ತಿದೆ.

ಕ್ರಿಸ್ಟಲಿನ್ ಸಿಲಿಕಾನ್ ತಂತ್ರಜ್ಞಾನ: ಈ ವಿದ್ಯುತ್ ಸ್ಥಾವರಕ್ಕೆ ಕ್ರಿಸ್ಟಲಿನ್ ಸಿಲಿಕಾನ್ ಸೌರ ವಿದ್ಯುತ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನವು ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ವಿದ್ಯುತ್ ಸ್ಥಾವರವು ಸೌರ ಪಟ್ಟಿಗಳನ್ನು ಸಾಲು ಸಾಲಾಗಿ ಹೊಂದಿರುತ್ತದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯಳೇಸಂದ್ರ ಗ್ರಾಮದಲ್ಲಿ ದೇಶದಲ್ಲೇ ಪ್ರಪ್ರಥಮ ಸೌರಶಕ್ತಿ ವಿದ್ಯುತ್ ಸ್ಥಾವರವನ್ನು 2010ರಲ್ಲಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗಿತ್ತು.

ಮೊದಲ ಹಂತದಲ್ಲಿ 500 ಮೆಗಾವ್ಯಾಟ್, ದ್ವಿತೀಯ ಹಂತದಲ್ಲಿ 500 ಮೆಗಾ ವ್ಯಾಟ್ ಹಾಗೂ ಮೂರನೆ ಹಂತದಲ್ಲಿ 1000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ.

2022ನೆ ಇಸವಿಯಲ್ಲಿ ದೇಶದಲ್ಲಿ 20 ಸಾವಿರ ಮೆಗಾ ವ್ಯಾಟ್ ಸೌರ ವಿದ್ದುತ್ ಉತ್ಪಾದನೆಯ ಗುರಿಯನ್ನು ಭಾರತ ಹೊಂದಲಾಗಿದೆ. 59 ಕೋಟಿ ರೂ. ವೆಚ್ಚದ ಯಳೇಸಂದ್ರದ ಸೌರವಿದ್ಯುತ್ ಸ್ಥಾವರದಲ್ಲಿ 13,330 ಪ್ಯಾನೆಲ್ ಗಳಿದ್ದು, ಪ್ರತಿ ಪ್ಯಾನೆಲ್ ಗಳು 230 ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಪ್ರತಿ ದಿನ 15,000 ಯುನಿಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಈ ಘಟಕದ ಗುರಿಯಾಗಿದೆ.

ಇನ್ನಷ್ಟು ಘಟಕಗಳು: ಕೋಲಾರ, ಶಿವನಸಮುದ್ರ ನಂತರ ರಾಜ್ಯದ 10 ಕಡೆ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.ಹಾವೇರಿ, ಬಾಗಲಕೋಟೆ, ತುಮಕೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಈ ಘಟಕಗಳು ತಲೆ ಎತ್ತಲಿದೆ.

ಹಾವೇರಿಯ ಕಾಗಿನೆಲೆ, ಶಿಗ್ಗಾಂವಿ; ಬಾಗಲಕೋಟೆಯ ಕೂಡಲಸಂಗಮ; ಶಿವಮೊಗ್ಗದ ಶಿಕಾರಿಪುರ; ತುಮಕೂರಿನ ಮಧುಗಿರಿ ಹಾಗೂ ಮೈಸೂರು ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗುವುದು ಎಂದು ಕೆಪಿಸಿಎಲ್ ಪ್ರಕಟಿಸಿದೆ. ಪ್ರತಿ ಸೌರ ಘಟಕವು 10 MW ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ.

ಜವಹರಲಾಲ್ ನೆಹರೂ ರಾಷ್ಟ್ರೀಯ ಸೌರ ಮಿಷನ್ ಅಡಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಕೆಪಿಸಿಎಲ್ ಹೇಳಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 5-MW eco-friendly solar power plant has been commissioned by Bharat Heavy Electricals Ltd. (BHEL) at Shivanasamudra near Mandya.KPCL will be taking up 10 more projects in six districts in Haveri, Bagalkot, Tumkur, Shimoga and Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more