ರೈಸಿನಾ ಹಿಲ್ ಒಡೆಯ ಪ್ರಣಬ್ ದಾದಾ ಪರಿಚಯ

ಜನನ: ಡಿಸೆಂಬರ್ 11, 1935, ಮಿರಾತಿ, ಪಶ್ಚಿಮ ಬಂಗಾಳ, ಭಾರತ
ತಂದೆ, ತಾಯಿ: ಕಮದ ಕಿನ್ಕರ್ ಮುಖರ್ಜಿ ಹಾಗೂ ರಾಜಲಕ್ಷ್ಮಿ ಮುಖರ್ಜಿ
ಪತ್ನಿ: ಸುವ್ರಾ ಮುಖರ್ಜಿ
ಧರ್ಮ: ಬೆಂಗಾಳಿ ಬ್ರಾಹ್ಮಣ, ಹಿಂದೂ
ಕುಟುಂಬ: ಇಬ್ಬರು ಗಂಡು ಮಕ್ಕಳು ಮಗ ಅಭಿಜಿತ್ ಹಾಗೂ ಇಂದ್ರಜಿತ್ ಹಾಗೂ ಓರ್ವ ಪುತ್ರಿ
* ಪ್ರಣಬ್ ಅವರ ತಂದೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು 10 ವರ್ಷಕ್ಕೂ ಅಧಿಕ ಕಾಲ ಜೈಲುವಾಸ ಅನುಭವಿಸಿದ್ದರು. ಕಾಂಗ್ರೆಸ್ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಕೆ ಮುಖರ್ಜಿ ಕರ್ತವ್ಯ ನಿರ್ವಹಿಸಿದ್ದರು.
ವಿದ್ಯಾಭ್ಯಾಸ: ಎಂಎ(ಇತಿಹಾಸ), ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಕೋಲ್ಕತ್ತಾ ವಿವಿ.
* ಅಂತಾರಾಷ್ಟ್ರೀಯ ವ್ಯವಹಾರ ವಿಷಯದ ಮೇಲೆ ಸ್ನಾತಕೋತ್ತರ ಪದವಿ, ಡಿಬ್ರುಗರ್ ವಿವಿ, ಅಸ್ಸಾಂ
* ಎಲ್ ಎಲ್ ಬಿ
* University of Wolverhampton ನಿಂದ 2011ರಲ್ಲಿ ಡಿಲಿಟ್ ಪದವಿ
ವೃತ್ತಿ: ಪತ್ರಕರ್ತ, ರಾಜಕಾರಣಿ
ಹವ್ಯಾಸ: ತೋಟಗಾರಿಕೆ, ಡೈರಿ ಬರೆಯುವುದು, ಸಂಗೀತ, ಸಾಹಿತ್ಯ
ಆಹಾರ ಅಭ್ಯಾಸ: ಸಾಮಾನ್ಯವಾಗಿ ಶಾಖಾಹಾರಿ ಆಹಾರವನ್ನು ಇಷ್ಟಪಡುವ ಪ್ರಣಬ್, ಮಾಂಸಹಾರಿ ಕೂಡಾ ಹೌದು.
ವೃತ್ತಿ ಜೀವನ: ಅಂಚೆ ಮತ್ತು ಟೆಲಿಗ್ರಾಫ್ ಕಚೇರಿಯಲ್ಲಿ ಮೊದಲ ದರ್ಜೆ ಗುಮಾಸ್ತರಾಗಿ ವೃತ್ತಿ ಆರಂಭ. ಕಾಲೇಜು ಅಧ್ಯಾಪಕ ಮತ್ತು Desher Dak ನಲ್ಲಿ ಪತ್ರಕರ್ತರಾಗಿ ಅನುಭವ
* 1969ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು. ಮಿಡ್ನಾಪುರ್ ನಲ್ಲಿ ಪಕ್ಷೇತರ ಅಭ್ಯರ್ಥಿ ಕೃಷ್ಣ ಮೆನನ್ ಪರ ಪ್ರಣಬ್ ಮುಖರ್ಜಿ ಆವರು ನಡೆಸಿದ ಪ್ರಚಾರ ಕಾರ್ಯ ಗುರುತಿಸಿದ ಅಂದಿನ ಪ್ರಧಾನಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿ ಅವರು ಪ್ರಣಬ್ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರುವಂತೆ ಮಾಡಿದರು.
* 1969 ಜುಲೈನಲ್ಲಿ ರಾಜ್ಯಸಭೆಗೆ ಆಯ್ಕೆ. 1975, 1981, 1993 ಮತ್ತು 1999 ರಲ್ಲಿ ಪುನರಾಯ್ಕೆ
* 1973 ರಲ್ಲಿ ಇಂದಿರಾ ಗಾಂಧಿ ಕ್ಯಾಬಿನೆಟ್ ಗೆ ಸೇರ್ಪಡೆ. ಕೈಗಾರಿಕಾ ಖಾತೆ ರಾಜ್ಯ ಸಚಿವರಾಗಿ ಆಯ್ಕೆ
* 1982 ರಿಂದ 1984 ರ ವರೆಗೆ ಆರ್ಥಿಕ ಸಚಿವರಾಗಿದ್ದರು.
* 1978 ರಲ್ಲಿ ರಾಜ್ಯಸಭೆ ಉಪ ನಾಯಕ, 1980ರಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ.
* ಇಂದಿರಾ ಗಾಂಧಿ ಹತ್ಯೆ ನಂತರ ಪ್ರಣಬ್ ರಾಜಕೀಯ ಜೀವನ ಮಂಕಾಗಿತ್ತು. ರಾಜೀವ್ ಗಾಂಧಿ ಅಧಿಕಾರ ಅವಧಿಯಲ್ಲಿ ಪ್ರಣಬ್ ಸೇರಿದಂತೆ ಇಂದಿರಾ ಗಾಂಧಿ ನಿಷ್ಠರಿಗೆ ಅಷ್ಟಾಗಿ ಮಾನ್ಯತೆ ಸಿಗಲಿಲ್ಲ. ಈ ಸಂದರ್ಭದಲ್ಲಿ ರಾಷ್ಟೀಯ ಸಮಾಜವಾಗಿ ಕಾಂಗ್ರೆಸ್(NSC)ಎಂಬ ಹೊಸ ಪಕ್ಷವನ್ನು ಪ್ರಣಬ್ ಕಟ್ಟಿದ್ದರು. ನಂತರ ಈ ಪಕ್ಷ ಮೂರು ವರ್ಷಗಳ ನಂತರ ಕಾಂಗ್ರೆಸ್ ಜೊತೆ ವೀಲಿನಗೊಂಡಿತು.
* ರಾಜೀವ್ ಗಾಂಧಿ ಅಕಾಲಿಕ ಸಾವಿನ ನಂತರ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಪ್ರಣಬ್ ಮುಖರ್ಜಿ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಿಸಿದರು.
* 1995-96 ರಲ್ಲಿ ವಿದೇಶಾಂಗ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದರು.
* ನಂತರ ಸೋನಿಯಾ ಗಾಂಧಿ ಕಾಲದಲ್ಲೂ ಪ್ರಣವ್ ಅವರನ್ನು ಕಾಂಗ್ರೆಸ್ ಪಕ್ಷ ಸಂಕಷ್ಟ ಬಂದಾಗ ಪ್ರಣಬ್ ಇದ್ದರಲ್ಲ ಎಂಬಂತೆ ಕಷ್ಟಕಾಲದಲ್ಲಿ ಪ್ರಣಬ್ ಅವರ ಸಲಹೆ ಪಡೆಯತೊಡಗಿತು.
* 2004-2012ರ ವರೆಗೂ ಲೋಕಸಭೆಯ ನಾಯಕರಾಗಿ ಮುಂದುವರೆದರು.
* 2004-2006ರ ನಡುವೆ ಪ್ರಣವ್ ರಕ್ಷಣಾ ಸಚಿವರಾಗಿ ಅಧಿಕಾರ ನಿರ್ವಹಿಸಿದ್ದಾರೆ.
* 2006-2009ರ ವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕರ್ತವ್ಯ ನಿರ್ವಹಿಸಿದರು.
* ಮನಮೋಹನ್ ಸಿಂಗ್ ನೇತೃತ್ವದ ಯುಪಿಎಯ 2ನೆ ಅವಧಿಯ ಸರ್ಕಾರದಲ್ಲೂ ಪ್ರಣವ್ ಹಣಕಾಸು ಸಚಿವರಾಗಿ ಅಧಿಕಾರ ನಿರ್ವಹಿಸಿದ್ದಾರೆ.
* 2012 ರಲ್ಲಿ 13ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಪಿಎ ಸಂಗ್ಮಾ ಅವರನ್ನು ಸೋಲಿಸಿ ದೇಶದ ಪ್ರಥಮ ಪ್ರಜೆ ಪಟ್ಟಕ್ಕೇರಿದ್ದಾರೆ.
ಪ್ರಶಸ್ತಿ, ಮಾನ್ಯತೆ, ಪುರಸ್ಕಾರ:
* 1984ರಲ್ಲಿ ಯೂರೋನಮಿ ಮ್ಯಾಗಜಿನ್ ಪ್ರಣವ್ ಮುಖರ್ಜಿಯನ್ನು ಜಗತ್ತಿನ ಅತ್ಯುತ್ತಮ ಹಣಕಾಸು ಸಚಿವ
* 2010ರಲ್ಲಿ ಅವರನ್ನು ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪರಿಗಣಿಸುವ ಎಮರ್ಜಿಂಗ್ ಮಾರ್ಕೆಟ್ಸ್ ದಿನ ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ಏಶ್ಯಾದಲ್ಲಿನ ವರ್ಷದ ಹಣಕಾಸು ಸಚಿವ ಪುರಸ್ಕಾರ
* ಬ್ಯಾಂಕ್ ಗಳು ಕೂಡ ವರ್ಷದ ಹಣಕಾಸು ಸಚಿವ ಪುರಸ್ಕಾರ
* ಭಾರತ ಸರಕಾರ ಅವರನ್ನು ಪದ್ಮ ವಿಭೂಷಣ್ ಪ್ರಶಸ್ತಿ
* ಕೋಲ್ಕತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ ಟಿಟ್ಯೂಟ್ ನಲ್ಲಿ ಮುಖರ್ಜಿ ಅಧ್ಯಕ್ಷ
* ರಬೀಂದ್ರ ಭಾರತಿ ವಿಶ್ವ ವಿದ್ಯಾಲಯದ ಮಾಜಿ ಅಧ್ಯಕ್ಷ
* ನಿಖಿಲ್ ಭಾರತ್ ಬಂಗಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೌರವ
* ಬಾಂಗಿಯ ಸಾಹಿತ್ಯ ಪರಿಷತ್, ಬಿಧಾನ್ ಮೆಮೊರಿಯಲ್ ಟ್ರಸ್ಟ್ ನ ಟ್ರಸ್ಟೀ
* ಏಶಿಯಾಟಿಕ್ ಸೊಸೈಟಿಯ ಯೋಜನಾ ಮಂಡಳಿಯಲ್ಲೂ ಪ್ರಣವ್ ಪಾತ್ರ ನಿರ್ವಹಿಸಿದ್ದಾರೆ.












Click it and Unblock the Notifications