• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಜರಾತ್ ಅರ್ಥಿಕ ಜಪ: ಜಪಾನಿಗೆ ಹೊರಟ ಮೋದಿ

By Srinath
|

ಅಹಮದಾಬಾದ್, ಜುಲೈ 21: ಡಿಸೆಂಬರ್ ಚುನಾವಣೆಯಲ್ಲಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹಣಿಯಲು ಕಾಂಗ್ರೆಸ್ ಪಕ್ಷ ಸರ್ವ ರೀತಿಯಲ್ಲೂ ಸಜ್ಜಾಗುತ್ತಿದ್ದರೆ ಅತ್ತ ಮೋದಿ ರಾಜ್ಯದ ಅರ್ಥಿಕಾಭಿವೃದ್ಧಿ ಜಪ ಮಾಡುತ್ತಾ ಜಪಾನ್ ನತ್ತ ಪ್ರಯಾಣ ಬೆಳೆಸಲಿದ್ದಾರೆ.

ಜಪಾನ್ ಸರಕಾರವೇ ಮೋದಿಗೆ ಆಹ್ವಾನ ನೀಡಿದ್ದು, ಇದೇ ಜುಲೈ 24ರಂದು ನಾಲ್ಕು ದಿನಗಳ ಭೇಟಿಗಾಗಿ ತೆರಳಲಿದ್ದಾರೆ. ನಾನಾ ಕ್ಷೇತ್ರಗಳ ಉದ್ಯಮಿಗಳೂ ಮೋದಿಗೆ ಸಾಥ್ ನೀಡಲಿದ್ದಾರೆ. ಹಲವಾರು ಉದ್ಯಮ ರಂಗಗಳ ಮುಖಂಡರೊಂದಿಗೆ ಮೋದಿ ನಿಯೋಗ ಮಾತುಕತೆ ನಡೆಸಲಿದೆ.

ಚುನಾವಣೆಗೆ ಮುನ್ನ ಉದ್ಯಮಿಗಳನ್ನು ಜಪಾನಿಗೆ ಕೊಂಡೊಯ್ಯುತ್ತಿರುವ ಮೋದಿಗೆ ವರವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಗಮನಾರ್ಹವೆಂದರೆ ಭಾರತದ ಯಾವುದೇ ರಾಜ್ಯವೊಂದರ ಮುಖ್ಯಮಂತ್ರಿಯನ್ನು ತನ್ನ ದೇಶಕ್ಕೆ ಆಮಂತ್ರಿಸುತ್ತಿರುವುದು ಬಹುಶಃ ಇದೇ ಮೊದಲು.

ಪ್ರತಿ ವರ್ಷ ಗುಜರಾತಿನಲ್ಲಿ ವಾಡಿಕೆಯಂತೆ ನಡೆಸುತ್ತಿರುವ Vibrant Gujarat Global Investors' Summitನಲ್ಲಿ ಜಪಾನ್ ಪಾಲುದಾರ ರಾಷ್ಟ್ರವಾಗಿ ಪಾಲ್ಗೊಂಡಿತ್ತು. ಆ ಸಂದರ್ಭದಲ್ಲಿ ಗುಜರಾತಿನ ಸರ್ವಾಂಗೀಣ ಅಭಿವೃದ್ಧಿಯನ್ನು ಮೆಚ್ಚಿಕೊಂಡು ಜಪಾನ್ ಈಗ ಖುದ್ದು ಮುಖ್ಯಮಂತ್ರಿಯನ್ನೇ ತನ್ನ ರಾಷ್ಟ್ರಕ್ಕೆ ಆಹ್ವಾನಿಸಿದೆ ಎನ್ನಲಾಗಿದೆ.

ಪ್ರಸ್ತುತ, ಜಪಾನ್ ಸಹಯೋಗದಲ್ಲಿ ಭಾರತ ಸರಕಾರ ಮಹತ್ವಾಕಾಂಕ್ಷಿ Delhi-Mumbai Industrial Corridor (DMIC) ಅಂತಾರಾಜ್ಯ ಯೋಜನೆ ಕಾಮಗಾರಿ ಆರಂಭಿಸಿದೆ. ಯೋಜನೆಯಲ್ಲಿ ಗುಜರಾತ್ ಹೆಚ್ಚಿನ ಭೂಭಾಗವನ್ನು ಹೊಂದಿದೆ.

ಮೋದಿ ಅವರು ಟೋಕಿಯೋ, ಹಮಾಮತ್ಸು, ನಗೋಯಾ, ಒಸಾಕಾ ಮತ್ತೊ ಕೋಬ್ ಪ್ರಾಂತ್ಯಗಳಲ್ಲಿ ಒಟ್ಟು 44 ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಶಿನ್ಜೋ ನಕಾನಿಷಿ ಅವರನ್ನು ಭೇಟಿ ಮಾಡಲಿದ್ದಾರೆ.

ಟೋಕಿಯೋದಲ್ಲಿ ನಕಾನಿಷಿ ಅವರನ್ನು ಭೇಟಿ ಮಾಡಿದ ನಂತರ ಬುಲ್ಲೆಟ್ ಟ್ರೈನಿನಲ್ಲಿ ನಗೋಯಾಗೆ ಪ್ರಯಾಣಿಸಲಿರುವ ಮೋದಿ, ಹೈಸ್ಪೀಡ್ ಟ್ರೈನಿನ ಬಗ್ಗೆ ಸ್ವಾನುಭವ ಪಡೆಯಲಿದ್ದಾರೆ. ಇದರಿಂದ ಬಹುನಿರೀಕ್ಷಿತ ಅಹಮದಾಬಾದ್-ಮುಂಬೈ-ಪುಣೆ ಮಾರ್ಗ ಮತ್ತು ಅಹಮದಾಬಾದ್-ಧೋಲೆರಾ ಮೆಟ್ರೋ ಬುಲ್ಲೆಟ್ ಟ್ರೈನ್ ಯೋಜನೆಗಳಿಗೆ ಜೀವತುಂಬಿದಂತಾಗುತ್ತದೆ.

ವಾಪಸ್ ಬರುವಾಗ ಗುಜರಾತಿನಲ್ಲಿ 2 ಜಪಾನಿ ಇಂಡಸ್ಟ್ರಿಯಲ್ ಪಾರ್ಕ್ ಗಳ ಸ್ಥಾಪನೆಗೆ ಮೋದಿ ಅನುಮೋದನೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಷ್ಟೇ ಅಲ್ಲ. ಬಂದರು ರಾಜ್ಯ ಗುಜರಾತಿನಲ್ಲಿ ಅಗತ್ಯವಾಗಿರುವ ಬಂದರು ಅಭಿವೃದ್ಧಿಗಾಗಿ ಕೋಬ್ ಅತ್ಯಾಧುನಿಕ ಬಂದರು ಪ್ರದೇಶಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಜತೆಗೆ, ಭೂಕಂಪ ರಾಜ್ಯವೂ ಆದ ಗುಜರಾತಿಗೆ ಸುನಾಮಿ ರಾಷ್ಟ್ರವಾದ ಜಪಾನಿನಿಂದ ನೈಸರ್ಗಿಕ ವಿಕೋಪಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gujarat Chief Minister Narendra Modi is set to leave for Japan on July 22 on a four-day tour in response to an invitation from the Government of Japan. A big delegation of top industrialists and businessmen, who have set up partnership with Japan in different sectors, will accompany Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more