ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಸ್ ಸಿಡಿ: ಮೋದಿ ಹಣಿಯಲು ಕಾಂಗ್ರೆಸ್ 'ಕಸ'ರತ್ತು

By Srinath
|
Google Oneindia Kannada News

gujarat-cm-modi-raunchy-video-congress-dirty-game
ಅಹಮದಾಬಾದ್, ಜುಲೈ 20: ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಈ ಬಾರಿಯೂ ಅಧಿಕಾರಸ್ಥರಾದರೆ ಕೇಂದ್ರದಲ್ಲಿ ತನಗೆ ಉಳಿಗಾಲವಿಲ್ಲ ಎಂಬ ಮುನ್ಸೂಚನೆ ಅರಿತಿರುವ ಕಾಂಗ್ರೆಸ್ ಪಕ್ಷ ಡಿಸೆಂಬರ್ ಚುನಾವಣೆಯಲ್ಲಿ ಮೋದಿಯನ್ನು ಹಣಿಯಲು ಸರ್ವ ರೀತಿಯಲ್ಲೂ ಸಜ್ಜಾಗುತ್ತಿದೆ. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗುತ್ತಿದೆ.

ಬಿಜೆಪಿ (ಮೋದಿ) ಹಣಿಯಲು ಕಾಂಗ್ರೆಸ್ 'ಕಸ'ರತ್ತು: ಮುಖ್ಯಮಂತ್ರಿ ನರೇಂದ್ರ ಮೋದಿಯ ಭಾಗಿಯಾಗಿರುವ ಸೆಕ್ಸ್‌ ವಿಡಿಯೋವನ್ನು ಬಿಡುಗಡೆ ಮಾಡಲು ಕಾಂಗ್ರೆಸ್‌ ತಯಾರಿ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಗಮನಾರ್ಹವೆಂದರೆ ಕಳೆದ ವರ್ಷ ನಡೆದ ಹಿರಿಯ ನಾಯಕರ ಸಮಾಲೋಚನಾ ಸಭೆಯಲ್ಲಿ ಕಾಂಗ್ರೆಸ್ ವಾಮ ಮಾರ್ಗಗಳನ್ನು ತುಳಿಯುವ ಬಗ್ಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಎಚ್ಚರಿಸಿದ್ದರು. ಇದೇ ಸೆಕ್ಸ್‌ ವಿಡಿಯೋ ಬಗ್ಗೆಯೂ ಗಮನ ಸೆಳೆದಿದ್ದರು. ಈಗ ಶಿವಸೇನೆ ಮುಖವಾಣಿಯ ಮೂಲಕವೇ ರಣಕಹಳೆ ಮೊಳಗಿರುವ ಬಿಜೆಪಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇಂತಹ ಯಾವುದೇ ದುಸ್ಸಾಹಸಕ್ಕೆ 'ಕೈ'ಹಾಕಿದರೂ ತಕ್ಕ ಶಾಸ್ತಿ ಮಾಡಲು ಸಜ್ಜಾಗುತ್ತಿದೆ.

'ಕಳೆದ 15 ವರ್ಷಗಳಿಂದ ಅಧಿಕಾರದ ರುಚಿ ನೋಡದ ಕಾಂಗ್ರೆಸ್ ಸಹಜವಾಗಿಯೇ ಹತಾಶ ಸ್ಥಿತಿ ತಲುಪಿದೆ. 'ಕೀಳು ಮನೋಭಾವ'ದೊಂದಿಗೆ ಹೇಗಾದರೂ ಮಾಡಿ ಅಧಿಕಾರ ವಾಪಸ್ ಗಳಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಹೀಗೆ ಮತ್ತೆ ಮತ್ತೆ ಮಸಿ ಬಳಿಯಲು ಹವಣಿಸಿದರೆ ಗುಜರಾತ್ ಜನ ಅದಕ್ಕೆ ತಕ್ಕ ಶಾಸ್ತಿ ಮಾಡಲಿದ್ದಾರೆ' ಎಂದು ಬಿಜೆಪಿ ವಕ್ತಾರ ಐಕೆ ಜಡೇಜಾ ಅವರು ಪ್ರತಿಕ್ರಿಯಿಸಿದ್ದಾರೆ.

'ಹ್ಯಾಟ್ರಿಕ್ ಸಿಎಂ' ಆಗಿ ತಳವೂರಿರುವ ಮೋದಿಯನ್ನು ಅಭದ್ರಗೊಳಿಸಲು, ಅವರ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ಈ ಹಿಂದೆ ಮೋದಿ ವಿರುದ್ಧ ಭ್ರಷ್ಟಾಚಾರದ ಆಪಾದನೆಗಳನ್ನು ಹೊರಿಸಿತ್ತು. ಈ ಪ್ರಯತ್ನಗಳ ಮಧ್ಯೆ, ಮಾಜಿ ಸಿಎಂ, ಬಿಜೆಪಿಯ spent force ಕೇಶೂ ಭಾಯಿ ಅವರನ್ನು ದಾಳವಾಗಿ ಉಪಯೋಗಿಸಿಕೊಳ್ಳಲು ಕಾಂಗ್ರೆಸ್ ಹಾತೊರೆಯುತ್ತಿದೆ.

ಯುವರಾಜ ರಾಹುಲ್ ಗಾಂಧಿ ಪಟ್ಟಾಭಿಷೇಕಕ್ಕೆ ಕಾಂಗ್ರೆಸ್ ಮತ್ತು ಯುಪಿಎ ವಲಯದಲ್ಲಿ ಸಂಭಾವ್ಯ PM Candidate ಗಳನ್ನೆಲ್ಲ ಮೂಲೆಗುಂಪು ಮಾಡುತ್ತಿರುವ ಮೇಡಂ ಸೋನಿಯಾಗೆ ಮೋದಿ ಭಯ ಆವರಿಸಿದ್ದು, ಇಂತಹ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಪುತ್ರವಾತ್ಸಲ್ಯ ಆರ್ಥವಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆ.

English summary
It is reported that a secret task force formed by the Congress party has been assigned the task of preparing a fake sex video that is to be used to defame Gujarat Chief Minister Narendra Modi. But BJP has reacted that it is nothing but a dirty game by Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X