• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪರೇಷನ್ ಕಮಲ, ಜಾತಿವಾದದಿಂದ ಬಿಜೆಪಿ ಪತನ: ಡಿವಿಎಸ್

By Mahesh
|

ಮಂಗಳೂರು, ಜು.19: ಈಗಲೂ ಕಾಲ ಮಿಂಚಿಲ್ಲ. ಜನರ ನೆನಪಿನ ಶಕ್ತಿ ಕಮ್ಮಿ ಇರುವಾಗಲೇ ನಮ್ಮ ತಪ್ಪೊಪ್ಪಿಕೊಂಡು ಆಂತರಿಕ ಕಚ್ಚಾಟ ಕೈಬಿಟ್ಟರೆ ಬಿಜೆಪಿ ಉದ್ಧಾರ ಸಾಧ್ಯವಿದೆ. ಬಿಜೆಪಿಯ ಸದ್ಯದ ಬಿಕ್ಕಟ್ಟಿಗೆ ಆಪರೇಷನ್ ಕಮಲ ಹಾಗೂ ಜಾತಿವಾದ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಪಕ್ಷೇತರರು ಹಾಗೂ ಆಪರೇಷನ್ ಕಮಲದಿಂದ ಬಂದ ವಲಸಿಗರು ಮುಂದೆ ಸರ್ಕಾರದ ಅವನತಿಗೂ ಕಾರಣರಾಗಿದ್ದು ದುರಂತ. ವಲಸಿಗರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರ ನಡುವಿನ ಕಿತ್ತಾಟ ಮೊದಲಿನಿಂದಲೂ ಇತ್ತು. ಇದು ಈಗ ಕೆಟ್ಟ ಸ್ವರೂಪ ಪಡೆದಿದೆ ಅಷ್ಟೇ. ಮೂಲ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಎಂಬ ಕೊರಗಿದೆ ಎಂದು ಸದಾನಂದ ಗೌಡ ಹೇಳಿದರು.

ಆಪರೇಷನ್ ಕಮಲದಿಂದ ಆದ ತೊಂದರೆ ಬಗ್ಗೆ ಮಾತನಾಡುವವರೆ ಮೌನವಾಗಿರುವಾಗ ಏನು ಮಾಡಲು ಸಾಧ್ಯವಾಗುವುದಿಲ್ಲ, ಬಿಎಸ್ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಎಚ್ ಎನ್ ಅನಂತ್ ಕುಮಾರ್ ಹಾಗೂ ನಾನು ಕೋರ್ ಕಮಿಟಿಯಲ್ಲಿದ್ದೇವೆ. ಆದರೆ, ನಮ್ಮಲ್ಲೇ ಪರಸ್ಪರ ಭಿನ್ನಾಭಿಪ್ರಾಯಗಳಿರುವುದರಿಂದ ಶಾಸಕರು ಹಾಗೂ ಕೆಳಮಟ್ಟದ ಕಾರ್ಯಕರ್ತರಿಗೆ ಸೂಕ್ತ ಮನ್ನಣೆ ದೊರೆಕಿಸಿಕೊಡಲು ಆಗುತ್ತಿಲ್ಲ.

ಭಿನ್ನಮತೀಯರ ಓಲೈಕೆ: ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿರುವ ಶಾಸಕರನ್ನು ತಪ್ಪದೇ ಭೇಟಿಯಾಗುತ್ತೇನೆ. ಇದರಲ್ಲಿ ಯಾವ ಬಣ ಅಥವಾ ಜಾತಿ ರಾಜಕೀಯ ಇರುವುದಿಲ್ಲ. ಪಕ್ಷದ ನಾಯಕರನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಮಾಧ್ಯಮಗಳು ಗುಂಪುಗಾರಿಕೆ, ಬಣ ಎಂದು ಏನಾದರೂ ಬರೆದುಕೊಳ್ಳಲಿ. ನಾನು ಭಿನ್ನಮತೀಯರನ್ನು ಓಲೈಸಲು ಯತ್ನಿಸುವುದಂತೂ ಸತ್ಯ.

ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರನ್ನು ಮುಂದಿನ ಚುನಾವಣೆ ತನಕ ಉಳಿಸಿಕೊಳ್ಳುವುದು ನನ್ನ ಮುಂದಿರುವ ಮಹತ್ವ ಗುರಿ. ನನ್ನ ಪ್ರಯತ್ನದಲ್ಲಿ ಸೋಲುಂಟಾದರೆ ರಾಜಕೀಯ ತೊರೆಯಲು ಸಿದ್ಧ ಎಂದು ಸದಾನಂದ ಗೌಡರು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ನಡೆಸಿಲ್ಲ. ಎಲ್ಲಾ ಸ್ಥಾನ ಮಾನಕ್ಕೂ ಜಾತಿವಾದ ತರುವುದು ಸರಿಯಲ್ಲ. ನನ್ನ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲು ಪಕ್ಷ ಬಯಸಿದರೆ ನಾನು ಸಿದ್ಧ. ಒಕ್ಕಲಿಗರಿಗೆ ಎಚ್ ಡಿ ದೇವೇಗೌಡ ಅಥವಾ ಕುಮಾರಸ್ವಾಮಿ ನಾಯಕರಾಗಿದ್ದಾರೆ. ಎಸ್ ಸಿ ಎಸ್ಟಿಗಳಿಗೆ ಮಲ್ಲಿಕಾರ್ಜುನ ಖರ್ಗೆ, ಎಸ್ ಪರಮೇಶ್ವರ್ ಇದ್ದಾರೆ. ಕುರುಬರ ನಾಯಕನಾಗಿ ಸಿದ್ದರಾಮಯ್ಯ ಅವರನ್ನು ಕಾಣುತ್ತಾರೆ. ನಮ್ಮಲ್ಲಿ ಮಾತ್ರ ಲಿಂಗಾಯತರನ್ನೇ ನೆಚ್ಚಿಕೊಂಡು ಬಂದಿದೆ. ಹಾಗಂತ ಲಿಂಗಾಯತರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಪಕ್ಷ ನನ್ನಿಂದ ಏನು ಬಯಸುತ್ತದೆಯೋ ಅದನ್ನು ನೀಡಲು ನಾನು ಸಿದ್ಧ ಎಂದು ಸದಾನಂದ ಗೌಡ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to DV Sadananda Gowda, ex-Chief Minister of Karnataka, there are two reasons which have been causing crisis in BJP and incidentally downfall of BJP in Karnataka. One is Operation Lotus and another one is castism. He also said lack of unity and inner fighting may destroy BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more