• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿಂಪಿಕ್ಸ್ : ಭಾರತ ಕ್ರೀಡಾಕಲಿಗಳ ಸಂಪೂರ್ಣ ಪಟ್ಟಿ

By Mahesh
|

ಬೆಂಗಳೂರು, ಜು.18: ಲಂಡನ್ ಒಲಿಂಪಿಕ್ಸ್‌ 2012ಕ್ಕೆ ದಾಖಲೆ ಸಂಖ್ಯೆಯಲ್ಲಿ ಭಾರತದ ಕ್ರೀಡಾಪಟುಗಳು ತೆರಳುತ್ತಿರುತ್ತಿದ್ದಾರೆ. ಈ ಬಾರಿ ಒಲಿಂಪಿಕ್ಸ್ ಗೆ 81 ಸ್ಪರ್ಧಾಳುಗಳು ಅರ್ಹತೆ ಪಡೆದಿರುವುದು ಹೆಮ್ಮೆಯ ವಿಷಯ.

2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 12 ಸ್ಪರ್ಧೆಗಳಲ್ಲಿ ಒಟ್ಟು 57 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಬಾರಿ 24 ಹೆಚ್ಚು ಅಥ್ಲೀಟ್ ಗಳು ಹಾಗೂ 13 ಹೆಚ್ಚಿನ ಕ್ರೀಡೆಗಳಲ್ಲಿ ಭಾರತ ಪ್ರತಿನಿಧಿಸುತ್ತಿದೆ.

ಒಟ್ಟು 58 ಜನ ಪುರುಷರು ಹಾಗೂ 23 ಮಹಿಳಾ ಕ್ರೀಡಾಪಟುಗಳನ್ನು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ಸ್ (IOA) ಕಳಿಸುತ್ತಿದ್ದು, ಅಧಿಕಾರಗಳು ಹಾಗೂ ಸಹಾಯಕ ಸಿಬ್ಬಂದಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದೆ.

ಬೀಜಿಂಗ್ ಒಲಿಂಪಿಕ್ಸ್ ಗೆ 57 ಕ್ರೀಡಾಪಟುಗಳ ಜೊತೆ 166 ಅಧಿಕಾರಿಗಳು ಹೋಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಾರಿ 10 ಜನ ಸರ್ಕಾರಿ ಪ್ರಯೋಜಿತ ಅಧಿಕಾರಿಗಳು, 7 ಇತರೆ ಅಧಿಕಾರಿಗಳು, 54 ಸಹಾಯಕ ಸಿಬ್ಬಂದಿ ಹಾಗೂ 12 ಕ್ರೀಡಾ ಫೆಡರೇಷನ್ ಅಧಿಕಾರಿಗಳು ಅಜಿತ್ ಪಾಲ್ ಸಿಂಗ್ ನೇತೃತ್ವ(Chef de Mission)ದಲ್ಲಿ ಹೋಗಲಿದ್ದಾರೆ.

ಲಂಡನ್ ಒಲಿಂಪಿಕ್ಸ್ ಜು.27 ರಿಂದ ಆರಂಭವಾಗಿ ಆಗಸ್ಟ್ 12ರಂದು ಮುಕ್ತಾಯವಾಗಲಿದೆ. ಜು.28ರಿಂದ ಸ್ಪರ್ಧಾಕಣಕ್ಕೆ ಭಾರತ ಧುಮುಕಲಿದೆ. ಭಾರತದ 81 ಕ್ರೀಡಾಪಟುಗಳು ಹಾಗೂ ಅವರು ಪ್ರತಿನಿಧಿಸುವ ಕ್ರೀಡೆಗಳ ಪಟ್ಟಿ ಇಲ್ಲಿದೆ.

ಅಥ್ಲೆಟಿಕ್ಸ್
ಕ್ರೀಡೆ ಕ್ರೀಡಾಪಟು
ಮಹಿಳಾ ಡಿಸ್ಕಸ್ ಥ್ರೋ ಕೃಷ್ಣಾ ಪೂನಿಯಾ
ಮಹಿಳಾ 800 ಮೀಟರ್ಸ್ ಟಿಂಟು ಲೂಕಾ
ಮಹಿಳಾ ಥ್ರಿಪಲ್ ಜಂಪ್ ಮಯೂಖಾ ಜಾನಿ
ಪುರುಷರ ಡಿಸ್ಕಸ್ ಥ್ರೋ ವಿಕಾಸ್ ಗೌಡ
ಪುರುಷರ ಶಾಟ್ ಪುಟ್ ಓಂ ಪ್ರಕಾಶ್ ಕರ್ಹಾನಾ
20 ಕಿ.ಮೀ ನಡಿಗೆ ಬಾಬುಭಾಯಿ ಪನೋಚಾ
20 ಕಿ.ಮೀ ನಡಿಗೆ ಗುರ್ಮೀತ್ ಸಿಂಗ್
ಮ್ಯಾರಥಾನ್ ರಾಮ್ ಸಿಂಗ್ ಯಾದವ್
ಪುರುಷರ ಥ್ರಿಪಲ್ ಜಂಪ್ ರಂಜಿತ್ ಮಹೇಶ್ವರಿ
ಬಿಲ್ವಿದ್ಯೆ
ಕ್ರೀಡೆ ಕ್ರೀಡಾಪಟು
ಮಹಿಳಾ ರಿಕರ್ವ್ ಲೈಶ್ರಾಮ್ ಬೊಬಯ್ಲ ದೇವಿ
ಮಹಿಳಾ ರಿಕರ್ವ್ ದೀಪಿಕಾ ಕುಮಾರಿ
ಮಹಿಳಾ ರಿಕರ್ವ್ ಚೆಕ್ರೊವೊಲು ಸ್ವುರೊ
ಪುರುಷರ ರಿಕರ್ವ್ ಜಯಂತ್ ತಾಲೂಕ್ದಾರ್
ಪುರುಷರ ರಿಕರ್ವ್ ರಾಹುಲ್ ಬ್ಯಾನರ್ಜಿ
ಪುರುಷರ ರಿಕರ್ವ್ ತರುಣ್ ದೀಪ್ ರೈ
ಬಾಕ್ಸಿಂಗ್
ಕ್ರೀಡೆ ಕ್ರೀಡಾಪಟು
49 ಕೆ.ಜಿ ವಿಭಾಗ ದೆವೆಂದ್ರೋ ಸಿಂಗ್
56 ಕೆ.ಜಿ ವಿಭಾಗ ಶಿವ ಥಾಪಾ
60 ಕೆ.ಜಿ ವಿಭಾಗ ಜೈ ಭಗವಾನ್
64 ಕೆ.ಜಿ ವಿಭಾಗ ಮನೋಜ್ ಕುಮಾರ್
69 ಕೆ.ಜಿ ವಿಭಾಗ ವಿಕಾಸ್ ಕೃಷ್ಣನ್
75 ಕೆ.ಜಿ ವಿಭಾಗ ವಿಜೇಂದ್ರ ಸಿಂಗ್
81 ಕೆ.ಜಿ ವಿಭಾಗ ಸುಮಿತ್ ಸಾಂಗ್ವಾನ್
ಮಹಿಳಾ ಬಾಕ್ಸಿಂಗ್ ಮೇರಿ ಕೋಮ್
ಬಾಡ್ಮಿಂಟನ್
ಕ್ರೀಡೆ ಕ್ರೀಡಾಪಟು
ಮಹಿಳಾ ಸಿಂಗಲ್ಸ್ ಸೈನಾ ನೆಹ್ವಾಲ್
ಮಿಶ್ರ ಡಬಲ್ಸ್ ಜ್ವಾಲಾ ಗುಟ್ಟಾ ಹಾಗೂ ವಿ ಡಿಜು
ಮಹಿಳಾ ಡಬಲ್ಸ್ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ
ಪುರುಷರ ಸಿಂಗಲ್ಸ್ ಪರುಪಲ್ಲಿ ಕಶ್ಯಪ್
ಹಾಕಿ
ಕ್ರೀಡೆ ಕ್ರೀಡಾಪಟು
ಪುರುಷರ ಹಾಕಿ ತಂಡ ಭರತ್ ಛೆಟ್ರಿ (ನಾಯಕ, ಗೋಲ್ ಕೀಪರ್), ಸರ್ದಾರ್ ಸಿಂಗ್ (ಉಪನಾಯಕ), ಪಿಆರ್ ಶ್ರೀಜೇಶ್(ಗೋಲ್ ಕೀಪರ್) ಸಂದೀಪ್ ಸಿಂಗ್, ವಿಆರ್ ರಘುನಾಥ್, ಇಗ್ನೇಸ್ ಟಿರ್ಕಿ, ಮನ್ ಪ್ರೀತ್ ಸಿಂಗ್, ಬೀರೇಂದ್ರ ಲಾಕ್ರಾ, ಗುರ್ಬಾಜ್ ಸಿಂಗ್, ಸೋಮವಾರಪೇಟೆ ಸುನಿಲ್, ಡ್ಯಾನಿಶ್ ಮುಜ್ತಬಾ, ಶಿವೇಂದ್ರ ಸಿಂಗ್, ತುಷಾರ್ ಖಾಂಡೇಕರ್, ಗುರ್ವಿಂಡರ್ ಸಿಂಗ್ ಛಾಂಡಿ, ಧರ್ಮವೀರ್ ಸಿಂಗ್, ಎಸ್ ಕೆ ಉತ್ತಪ್ಪ, ಸರ್ವಂಜಿತ್ ಸಿಂಗ್, ಕೊಥಾಜಿತ್ ಸಿಂಗ್ (ರಿಸರ್ವ್ಸ್)
ಶೂಟಿಂಗ್
ಕ್ರೀಡೆ ಕ್ರೀಡಾಪಟು
ಪುರುಷರ 10 ಮೀ ಏರ್ ರೈಫಲ್ ಅಭಿನವ್ ಬಿಂದ್ರಾ
10 ಮೀ ಏರ್ ರೈಫಲ್, 50 ಮೀ ರೈಫಲ್(2 ಸ್ಪರ್ಧೆ) ಗಗನ್ ನಾರಂಗ್
ಡಬಲ್ ಟ್ರಾಪ್ ರೊಂಜನ್ ಸಿಂಗ್ ಸೋಧಿ
ಮಹಿಳಾ 10 ಮೀ ಏರ್ ಪಿಸ್ತೂಲ್,

25 ಮೀ ಸ್ಫೋರ್ಟ್ಸ್ ಪಿಸ್ತೂಲ್

ಅನ್ನು ರಾಜ್ ಸಿಂಗ್ ಮಹಿಳಾ ಟ್ರಾಪ್ ಶಗುನ್ ಚೌಧುರಿ ಪುರುಷರ ಟ್ರಾಪ್ ಮನವ್ಜಿತ್ ಸಿಂಗ್ ಸಂಧು 25 ಮೀ ಸ್ಫೋರ್ಟ್ ಪಿಸ್ತೂಲ್ ರಾಹಿ ಸರ್ನೊಬಾತ್ ಪುರುಷರ 25 ಫೈರ್ ಪಿಸ್ತೂಲ್ ವಿಜಯ್ ಕುಮಾರ್ ಪುರುಷರ 50 ಮೀ ರೈಫಲ್ ತ್ರೀ ಪೊಸಿಷನ್ ಸಂಜೀವ್ ರಜಪುತ್ ಪುರುಷರ 50 ಮೀ ರೈಫಲ್ ಜೊಯ್ದೀಪ್ ಕರ್ಮಾಕರ್ ಮಹಿಳೆಯರ 100 ಮೀ ಏರ್ ಪಿಸ್ತೂಲ್ ಹೀನಾ ಸಿಧು
ಜೂಡೋ
ಕ್ರೀಡೆ ಕ್ರೀಡಾಪಟು
ಮಹಿಳಾ 63 ಕೆಜಿ ವಿಭಾಗ ಗರೀಮಾ ಚೌಧುರಿ
ಈಜು
ಕ್ರೀಡೆ ಕ್ರೀಡಾಪಟು
ಪುರುಷರ 1500 ಮೀ ಫ್ರೀ ಸ್ಟೈಲ್ ಉಲ್ಲಾಳ್ ಮಠ್ ಗಗನ್
ಟೇಬಲ್ ಟೆನಿಸ್
ಕ್ರೀಡೆ ಕ್ರೀಡಾಪಟು
ಪುರುಷರ ಸಿಂಗಲ್ಸ್ ಸೌಮ್ಯಜಿತ್ ಘೋಷ್
ಮಹಿಳಾ ಸಿಂಗಲ್ಸ್ ಅಂಕಿತಾ ದಾಸ್
ಟೆನಿಸ್
ಕ್ರೀಡೆ ಕ್ರೀಡಾಪಟು
ಪುರುಷರ ಸಿಂಗಲ್ಸ್ ಸೋಮದೇವ್ ದೇವರ್ ಮನ್
ಪುರುಷರ ಡಬಲ್ಸ್ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ
ಪುರುಷರ ಡಬಲ್ಸ್ ಲಿಯಾಂಡರ್ ಪೇಸ್ ಹಾಗೀ ವಿಷ್ಣುವರ್ಧನ್
ಮಹಿಳೆಯರ ಡಬಲ್ಸ್ ರುಷ್ಮಿ ಚಕ್ರವರ್ತಿ ಹಾಗೂ ಸಾನಿಯಾ ಮಿರ್ಜಾ
ಮಿಶ್ರ ಡಬಲ್ಸ್ ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್ ಪೇಸ್
ರೋಯಿಂಗ್
ಕ್ರೀಡೆ ಕ್ರೀಡಾಪಟು
ಸಿಂಗಲ್ಸ್ ಸ್ವರ್ಣ್ ಸಿಂಗ್ ವಿರ್ಕ್
ಲೈಟ್ ವೇಯ್ಟ್ ಡಬಲ್ಸ್ ಸಂದೀಪ್ ಕುಮಾರ್ ಹಾಗೂ ಮಂಜೀತ್ ಸಿಂಗ್
ಕುಸ್ತಿ
ಕ್ರೀಡೆ ಕ್ರೀಡಾಪಟು
60 ಕೆಜಿ ವಿಭಾಗ ಯೋಗೇಶ್ವರ್ ದತ್
60 ಕೆಜಿ ವಿಭಾಗ ಅಮಿತ್ ಕುಮಾರ್
66 ಕೆಜಿ ವಿಭಾಗ ಸುಶೀಲ್ ಕುಮಾರ್
55 ಕೆಜಿ ವಿಭಾಗ ಗೀತಾ ಕುಮಾರಿ ಫೊಗಾತ್
74 ಕೆಜಿ ವಿಭಾಗ ನರಸಿಂಗ್ ಯಾದವ್
ವೇಟ್ ಲಿಫ್ಟಿಂಗ್
ಕ್ರೀಡೆ ಕ್ರೀಡಾಪಟು
ಮಹಿಳಾ 48 ಕೆಜಿ ವಿಭಾಗ ಎನ್ ಸೋನಿಯಾ ಛಾನು
ಪುರುಷರ 69 ಕೆಜಿ ವಿಭಾಗ ಕಟುಲು ರವಿ ಕುಮಾರ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A record number of 81 athletes will represent India at London Olympics 2012 this year. This is the largest contingent from India for the Games. In Beijing Olympics 2008, India had sent 57 athletes for 12 events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more