• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎ ಸೈಟ್ ಪ್ರಕರಣ: ಸಿಟಿ ರವಿಗೆ ಸಿಕ್ತು ಜಾಮೀನು

By Mahesh
|

ಬೆಂಗಳೂರು, ಜು.18: ಅಕ್ರಮವಾಗಿ ಸಿಎ ನಿವೇಶನ ಪಡೆದ ಆರೋಪ ಹೊತ್ತಿದ್ದ ರಾಜ್ಯ ಬಿಜೆಪಿ ವಕ್ತಾರ ಹಾಗೂ ಸಚಿವ ಸಿಟಿ ರವಿ ಅವರಿಗೆ ಹೈಕೋರ್ಟ್ ಬುಧವಾರ(ಜು.18) ರಿಲೀಫ್ ನೀಡಿದೆ. ಚಿಕ್ಕಮಗಳೂರಿನಲ್ಲಿ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ರವಿ ಹಾಗೂ ಅವರ ಪಲ್ಲವಿ ಅವರಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಹೈಕೋರ್ಟ್ ನ್ಯಾ. ವಿ ಜಗನ್ನಾಥನ್ ಅವರು ಸಿ.ಟಿ ರವಿ, ಪತ್ನಿ ಪಲ್ಲವಿ, ರವಿ ತಂಗಿ,ಭಾವ ಮೊದಲಾದ ಸಹ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದ್ದಾರೆ.2 ಲಕ್ಷ ರು.ನ ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಲಾಗಿದೆ. ರಾಜ್ಯದಿಂದ ಹೊರ ಹೋಗಲು ಕೋರ್ಟ್ ಅನುಮತಿ ಪಡೆಯಬೇಕಾಗುತ್ತದೆ.

ನಾಗರಿಕ ಸೌಲಭ್ಯಕ್ಕೋಸ್ಕರ ಇರುವ ಮೂರು ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಚಿಕ್ಕಮಗಳೂರು ನಗರ ಪಾಲಿಕೆ ಸದಸ್ಯ ದೇವಿಪ್ರಸಾದ್ ಎಂಬುವರು ಲೋಕಾಯುಕ್ತ ಕೋರ್ಟ್ ಗೆ ದೂರು ಸಲ್ಲಿಸಿದ್ದರು.

ಸೈಟ್ ನಂಬರ್ 113 ಮತ್ತು 114 (ಕೆಎಚ್‌ಬಿ ಕಾಲೋನಿ ಎಂಐಜಿ 2ನೇ ಸ್ಟೇಜಿನಲ್ಲಿ) ಜಾಗದಲ್ಲೂ ಇದೇ ಉದ್ದೇಶಕ್ಕಾಗಿ ಪ್ರಮಾಣ ಪತ್ರ ನೀಡಿ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಿಟಿ ರವಿ ಹಾಗೂ ಅವರ ಪತ್ನಿ ಸೇರಿದಂತೆ 11 ಜನರ ವಿರುದ್ಧ ನೀಡಿದ್ದರು.

ಲೋಕಾಯುಕ್ತ ನ್ಯಾ. ಎನ್ ಕೆ ಸುಧೀಂದ್ರರಾವ್ ಅವರ ನಿರ್ದೇಶನದಂತೆ ಲೋಕಾಯುಕ್ತ ಪೊಲೀಸರು ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಟಿ ರವಿ ಸೇರಿದಂತೆ 7 ಜನರ ಮೇಲೆ ಎಫ್ ಐಆರ್ ದಾಖಲಿಸಿದ್ದರು.

ಭ್ರಷ್ಟಾಚಾರ ಕಾಯ್ದೆ 13(1), ಐಪಿಸಿ ಸೆಕ್ಷನ್ 420 ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಆದರೆ, ತನಿಖೆ ನಂತರ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರಿಂದ ಸಿಟಿ ರವಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ, ಲೋಕಾಯುಕ್ತ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಿಟಿ ರವಿ ಮೇಲ್ಮನವಿ ಸಲ್ಲಿಸಿದ್ದರು.

ಶಿಕ್ಷಣ ಟ್ರಸ್ಟ್ ಹೆಸರಲ್ಲಿ ಸೈಟು : ಅಸ್ತಿತ್ವದಲ್ಲೇ ಇರದ ಶಿಕ್ಷಣ ಟ್ರಸ್ಟ್ ಹೆಸರಲ್ಲಿ ಸಿಎ ಸೈಟು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ನಿವೇಶನ ಪಡೆಯುವಲ್ಲಿ ಅಸ್ತಿತ್ವದಲ್ಲಿರದ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದಾರೆ. ಚಿಕ್ಕಮಗಳೂರು ಅಸೆಂಬ್ಲಿ ಕ್ಷೇತ್ರ ಜನಪ್ರತಿನಿಧಿ ಸಿಟಿ ರವಿ ಅವರ ಪತ್ನಿ ಪಲ್ಲವಿ ಹೆಸರಿಗೆ ಮೂರು CA ಸೈಟು ಪರಭಾರೆಯಾಗಿದೆ.

6,953.54 ಚ.ಅಡಿ ಇರುವ ನಂ.6ಎ, 7,319 ಚ.ಅ ಇರುವ ನಂ.6ಬಿ ಹಾಗೂ 15,725 ಚ.ಅ ಇರುವ ನಿವೇಶನ ಸಂಖ್ಯೆ 8 ಪಲ್ಲವಿ ಹೆಸರಿಗೆ ಮಂಜೂರಾಗಿದೆ.

ವಿಜಯಪುರದ ಶ್ರೀ ಆಂಜನೇಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆಯಾಗಿರುವ ಪಲ್ಲವಿ ಹೆಸರಿಗೆ ಲೀಸ್ ಕಮ್ ಸೆಲ್ ಕ್ರಯ ಪತ್ರ ನೋಂದಣಿಯಾಗಿದೆ.

2007ರ ಅಕ್ಟೋಬರ್ 24ರಂದು ಕರ್ನಾಟಕ ಗೃಹ ಮಂಡಳಿಗೆ 6.29 ಲಕ್ಷ ರೂ ಪಾವತಿಸಿರುವ ಬಗ್ಗೆ ದಾಖಲೆ ಸಿಕ್ಕಿದೆ. ನಿವೇಶನ ಸಂಖ್ಯೆ 8 ಕ್ಕೆ 6.29 ಲಕ್ಷ ರೂ, ನಿವೇಶನ ಸಂಖ್ಯೆ 6ಎಗೆ 2.78 ಲಕ್ಷ ರೂ ಹಾಗೂ ನಿವೇಶನ ಸಂಖ್ಯೆ 6ಬಿಗೆ 2.92 ಲಕ್ಷ ರೂ ನೀಡಲಾಗಿದೆ.

ಆದರೆ ಈ ಜಾಗ ಪಡೆಯಲು ಆಕೆ ಸುಳ್ಳು ಕಾರಣ (ಸೊಸೈಟಿ / ಟ್ರಸ್ಟ್) ಕಾರಣ ನೀಡಿದ್ದಾರೆ.

ಈ ಜಾಗ ಯಾರಿಗೂ ಮಾರಾಟ ಮಾಡುವಂತಿಲ್ಲ ಹಾಗೂ ಉದ್ದೇಶಿತ ಕೆಲಸಕ್ಕೆ ಜಾಗ ವಿನಿಯೋಗವಾಗದಿದ್ದರೆ ತಕ್ಷಣ ಕೆಎಚ್‌ಬಿಗೆ ಹಿಂದಿರುಗಿಸಬೇಕು ಎಂದು ರವಿ ಪತ್ನಿಗೆ ಸೂಚಿಸಲಾಗಿತ್ತು.

ಆದರೆ ಆಕೆ ಈ ಜಾಗದಲ್ಲಿ ಶಿಕ್ಷಣ ಸಂಸ್ಥೆ ಹೆಸರಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಯೋಜನೆ ರೂಪಿಸಿದ್ದಾರೆ.

ಇದೇ ರೀತಿ ಆಕೆ ಸೈಟ್ ನಂಬರ್ 113 ಮತ್ತು 114 (ಕೆಎಚ್‌ಬಿ ಕಾಲೋನಿ ಎಂಐಜಿ 2ನೇ ಸ್ಟೇಜಿನಲ್ಲಿ) ಜಾಗದಲ್ಲೂ ಇದೇ ಉದ್ದೇಶಕ್ಕಾಗಿ ಪ್ರಮಾಣ ಪತ್ರ ನೀಡಿ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ದಾಖಲೆ ಸ್ಪಷ್ಟಪಡಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka High Court on Wednesday (Jul.18) granted regular anticipatory bail to state Higher Education Minister C T Ravi in connection with a case accusing him of abuse of official power in securing CA site in Chikmagalur. Justice V Jagannathan granted anticipatory bail to Ravi and also to his wife, sister and brother-in-law, co-accused in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more