• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುವತಿ ಪೀಡನೆ : ಅಲ್ಕಾಳನ್ನು ಅರಸಿಬಂದ (ಕು)ಖ್ಯಾತಿ

By Prasad
|
Alka Lamba
ನವದೆಹಲಿ, ಜು. 17 : ಆಸ್ಸಾಂನ ಗುವಾಹಾಟಿಯಲ್ಲಿ ಜುಲೈ 9ರಂದು ಬಾರ್ ಎದುರಿನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರ ತಂಡವೊಂದು ಹದಿಹರೆಯದ ಯುವತಿಯನ್ನು ವಿವಸ್ತ್ರಗೊಳಿಸಿ ಲೈಂಗಿಕವಾಗಿ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ವ್ಯಕ್ತಿಗಳು ಬಿರುಗಾಳಿಯ ಸುಳಿಯಲ್ಲಿ ಸಿಲುಕಿದ್ದಾರೆ ಮತ್ತು ತಮ್ಮ ಹುದ್ದೆಗಳನ್ನು ಕಳೆದುಕೊಂಡಿದ್ದಾರೆ.

ಈ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಪ್ರಸಾರ ಮಾಡಿದ ನ್ಯೂಸ್‌ಲೈವ್ ಚಾನಲ್ ಪ್ರಧಾನ ಸಂಪಾದಕ ಅತಾನು ಭುಯನ್ ಅವರು ರಾಜೀನಾಮೆ ಸಲ್ಲಿಸಿದ್ದರೆ, ಪೀಡನೆಗೆ ಒಳಗಾದ ಯುವತಿಯ ಹೆಸರನ್ನು ಬಹಿರಂಗಗೊಳಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ 37 ವರ್ಷದ ಸುಂದರಿ ಅಲ್ಕಾ ಲಾಂಬಾ ಅವರನ್ನು ಅವರ ಹುದ್ದೆಯಿಂದ ಕೆಳಗಿಳಿಸಲಾಗಿದೆ.

ಆಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರು ತೀವ್ರ ಒತ್ತಡ ಹೇರಿದ್ದರಿಂದ ಮತ್ತು ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂಪಾದಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾಗಿ ಹೇಳಿರುವ ಅತಾನು ಅವರು, ಯುವತಿ ಸಂಕಷ್ಟದಲ್ಲಿದ್ದಾಗಲೂ ಇಡೀ ಘಟನೆಯನ್ನು ಚಿತ್ರೀಕರಣಗೊಳಿಸಿದ ಪತ್ರಕರ್ತನ ವರ್ತನೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಅಲ್ಕಾ ಲಾಂಬಾ ಸಮರ್ಧನೆ : ಕಿರುಕುಳಕ್ಕೊಳಗಾದ ಯುವತಿಯನ್ನು ಭೇಟಿ ಮಾಡಿದ ನಂತರ ಆಕೆಯ ಹೆಸರನ್ನು ಮಾಧ್ಯಮದೆದಿರು ಬಹಿರಂಗಪಡಿಸಿ ನೈತಿಕತೆಯ ಅಧಃಪತನಕ್ಕಿಳಿದಿದ್ದಾರೆ ಎಂದು ಟೀಕೆಗೊಳಗಾಗಿರುವ ಕಾಂಗ್ರೆಸ್‌ನ ಯುವ ರಾಜಕಾರಣಿ, ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷೆ 37 ವರ್ಷದ ಅಲ್ಕಾ ಲಾಂಬಾ ಅವರು ಕೂಡ, ಯುವತಿಯ ಹೆಸರು ಬಹಿರಂಗಪಡಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಆ ಯುವತಿ ತನ್ನ ಹೆಸರನ್ನು ಬಹಿರಂಗಪಡಿಸಲು ಒಪ್ಪಿದ್ದರಿಂದಲೇ ಆಕೆಯ ಹೆಸರನ್ನು ಪ್ರಸ್ತಾಪಿಸಬೇಕಾಯಿತು ಎಂದು ಅಲ್ಕಾ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಕಾ ಅವರ ಈ ವರ್ತನೆಯ ವಿರುದ್ಧ ಟೀಕಾಪ್ರಹಾರಗಳು ಬರುವುದರ ಜೊತೆಗೆ, ಫೇಸ್‌ಬಕ್ ಮತ್ತು ಟ್ವಿಟ್ಟರ್‌ಗಳಲ್ಲಿ ಟೀಕೆಯ ಸುರಿಮಳೆಗಳಾಗುತ್ತಿವೆ. ದಿಟ್ಟ ಯುವ ನೇತಾರ ಎಂದೇ ಖ್ಯಾತರಾಗಿರುವ ಅಲ್ಕಾ ಇದ್ದಕ್ಕಿದ್ದಂತೆ ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ. ನೀವು ಹೀಗೆಯೇ ಮುಂದುವರಿಯಿರಿ, ನಾವು ನಿಮ್ಮ ಜೊತೆಗಿದ್ದೇವೆ ಎಂಬ ಸಂದೇಶಗಳನ್ನು ಫೇಸ್‌ಬುಕ್ಕಿಗಳು ಹಾಕುತ್ತಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವ ಮಮತಾ ಶರ್ಮಾ ಅವರು, ಸತ್ಯಾಂಶ ಪರಿಶೋಧನಾ ತಂಡದಲ್ಲಿ ಇದ್ದ ಅಲ್ಕಾಳನ್ನು ತಂಡದಿಂದ ಕೈಬಿಡಲಾಗಿದೆ. ಪೀಡನೆಗೊಳಗಾದ ಯುವತಿಯ ಹೆಸರು ಬಹಿರಂಗಪಡಿಸಿದ್ದು ತಪ್ಪು ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಲ್ಕಾ ಅವರು, ನಾನು ಯಾವ ತಪ್ಪೂ ಮಾಡಿಲ್ಲ. ಕಿರುಕುಳಕ್ಕೊಳಗಾದ ಯುವತಿಗೆ ನ್ಯಾಯ ದೊರಕಿಸಿಕೊಡಲು ಕೊನೆಯ ಉಸಿರಿರುವವರೆಗೆ ಹೋರಾಡುತ್ತೇನೆ ಎಂದು ಕೆಚ್ಚೆದೆಯಿಂದ ನುಡಿದಿದ್ದಾರೆ.

ಅಲ್ಕಾ ಲಾಂಬಾ ಯಾರು? : 1994ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಮಾಡುತ್ತಿದ್ದಾಗಲೇ ತಮ್ಮ ರಾಜಕೀಯ ಅಭಿಯಾನ ಪ್ರಾರಂಭಿಸಿದ ಅಲ್ಕಾ ಲಾಂಬಾ, ಕಡಿಮೆ ಸಮಯದಲ್ಲಿ ಯುವ ನೇತಾರಳಾಗಿ ಹೆಸರು ಮಾಡಿದವರು. ಭಾರತದ ರಾಷ್ಟ್ರೀಯ ಒಕ್ಕೂಟವನ್ನು ಸೇರಿದ ಮೇಲೆ ಮುಂದೆ ದೆಹಲಿಯ ಮಹಿಳಾ ಸಂಯೋಜಕಿಯಾಗಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದರು. ಹಂತಹಂತವಾಗಿ ಮೇಲೇರಿದ ಅಲ್ಕಾ ಮುಂದೆ ಎನ್ಎಸ್‌ಯುಐನ ಅಧ್ಯಕ್ಷೆಯಾಗಿಯೂ ಹೆಸರು ಗಳಿಸಿದರು.

2002ರಲ್ಲಿ ಅಲ್ಕಾ ಅವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಮುಂದೆ ಒಂದೇ ವರ್ಷದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗಿಳಿದು ಸೋಲಿನ ರುಚಿಯನ್ನು ಉಂಡರು. ಆದರೆ, ರಾಜಕೀಯದಲ್ಲಿ ಇಟ್ಟ ಕಾಲನ್ನು ಹಿಂದೆ ತೆಗೆಯದ ಅಲ್ಕಾ ಅವರನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವಾಯತ್ತ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಯಿತು. ಅಲ್ಕಾ ಅವರು ಗೋ ಇಂಡಿಯಾ ಫೌಂಡೇಷನ್ ಎಂಬ ಸರಕಾರೇತರ ಸಂಸ್ಥೆಯನ್ನು ಕೂಡ ನಡೆಸುತ್ತಿದ್ದಾರೆ.

ಖ್ಯಾತಿ ಹೇಗೆ ಅವರನ್ನು ಹುಡುಕಿಕೊಂಡು ಬಂದಿದೆಯೋ, ವಿವಾದಗಳು ಕೂಡ ಅವರ ಸಂಗಾತಿಯಾಗಿಯೇ ಜೊತೆಯಾಗಿ ಬಂದಿವೆ. ಅಲ್ಕಾ ಅವರ ಮಾಜಿ ಪತಿ ಲೋಕೇಶ್ ಕಪೂರ್ ಅವರು, ಅಲ್ಕಾ ತಮ್ಮ ರಾಜಕೀಯ ಮದದಿಂದ ತಮ್ಮ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸಿದ್ದರು ಎಂದು ಆರೋಪಿಸಿದ್ದರು. ತಮಗೆ ಸೇರಿದ ಬಂಗ್ಲೆಯಲ್ಲಿ ಬಲವಂತವಾಗಿ ಇದ್ದ ಅಲ್ಕಾ ಅದನ್ನೇ ತಮ್ಮ ರಾಜಕೀಯ ಕಚೇರಿಯನ್ನಾಗಿ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Alka Lamba has suddenly become the talk of the town following the controversial decision by National Commission for Women (NCW) to remove her from a fact finding team of the panel regarding the Guwahati molestation case. The editor-in-chief of TV channel which telecast the incident has also resigned.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more