ಹಾಲಾಡಿ ಹಾದಿಯಲ್ಲಿ ಮತ್ತೊಬ್ಬ ಶಾಸಕ ರಾಜೀನಾಮೆ?

ಈ ಮಧ್ಯೆ, ತಾನೂ ರಾಜೀನಾಮೆ ನೀಡಬೇಕು ಅಂದ್ಕೊಂಡಿದ್ದ ಉಡುಪಿ ಶಾಸಕ ರಘುಪತಿ ಭಟ್ ಅವರು 'ಹಿರಿಯ ನಾಯಕರು ಹೇರಿದ ಒತ್ತಡ' ದಿಂದಾಗಿ ಕೊನೆಯ ಘಳಿಗೆಯಲ್ಲಿ ರಾಜೀನಾಮ ಪ್ರಹಸನದಿಂದ ಹಿಂದೆ ಸರಿದಿದ್ದಾರೆ. ಆದರೆ ಸುಳ್ಯದ ಶಾಸಕ ಎಸ್ ಅಂಗಾರಾ ಅವರು ಸಚಿವ ಸ್ಥಾನ ದೊರಕದ ಕಾರಣ ರಾಜೀನಾಮೆ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.
ಆದರೆ ಪಕ್ಷದ ರಾಜ್ಯ ನಾಯಕರು ಕನಿಷ್ಠ ಒಂದು ವಾರವಾದರೂ ಸಮಯಾವಕಾಶ ಕೇಳಿದ್ದು, ದಿಲ್ಲಿ ಹೈಕಮಾಂಡ್ ಅನುಮತಿಗಾಗಿ ಕಾಯುವಂತೆ ಸೂಚಿಸಿದ್ದಾರೆ. ಹಾಗಾಗಿ, ಒಂದು ವಾರ ಕಾಲ ರಾಜೀನಾಮೆ ವಿಚಾರವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಅಂಗಾರರ ಆಪ್ತ ಮೂಲಗಳು ಹೇಳಿವೆ.
'ದಕ್ಷಿಣ ಕನ್ನಡ ಜಿಲ್ಲೆಗೆ ಮಂತ್ರಿ ಸ್ಥಾನವೇ ಸಿಕ್ಕಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳಲಿದೆ' ಎಂಬುದು ಜಿಲ್ಲಾ ಕಾರ್ಯಕರ್ತರ ಕೂಗು, ಕೊರಗು.











Click it and Unblock the Notifications