ಬಿಜೆಪಿ ಸರ್ಕಾರ ಪತನ, ಸಂಕ್ರಾಂತಿಗೆ ಜೆಡಿಎಸ್ ಉದಯ

ಮಧುಗಿರಿ ಪಟ್ಟಣದ ನೆಹರು ಮೈದಾನದಲ್ಲಿ ಸೋಮವಾರ(ಜು.16) ನಡೆದ ಜೆಡಿಎಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಖಾತೆ ಹಂಚಿಕೆಯಲ್ಲಿ ವಿಳಂಬ ಮಾಡಲಾಗುತ್ತಿದೆ. ಖಾತೆ ಗಾಗಿ ಕಿತ್ತಾಟ ಮುಂದುವರಿದಿದೆ. ಹೀಗಾಗಿ ಈ ಸರ್ಕಾರ ಬಹುಬೇಗ ಪತನವಾಗಲಿದೆ. ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆದು ಸಂಕ್ರಾಂತಿ ಹಬ್ಬದ ವೇಳೆಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ಯಾರೂ ಗಮನಹರಿಸುತ್ತಿಲ್ಲ. ಜನತೆ ಕುಡಿಯುವ ನೀರು ಸಿಗದೆ ಕಷ್ಟಪಡುವಂತಾಗಿದೆ. ಮೇವು, ನೀರಿಲ್ಲದೆ ಜಾನುವಾರುಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಸರಕಾರ ಜಾನುವಾರುಗಳಿಗೆ ಮೇವು ಕೊಡಲು ಸಾಧ್ಯವಾಗದಿದ್ದರೆ ಈ ಕ್ಷೇತ್ರಕ್ಕೆ ಮೇವು ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ದೇವೇಗೌಡರ ಕುಟುಂಬ ಹೊರಲಿದೆ ಎಂದರು.
ಶಾಸಕರಾದ ಅನಿತಾ ಕುಮಾರಸ್ವಾಮಿ, ಎಂ.ಟಿ. ಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಆರ್. ಹುಲಿನಾಯ್ಕರ್, ಮಾಜಿ ಸಚಿವರಾದ ಬಿ.ಸತ್ಯನಾರಾಯಣ,ಸಿ.ಚನ್ನಿಗಪ್ಪ, ಮಾಜಿ ಶಾಸಕರಾದ ಎಸ್.ಪಿ.ಮುದ್ದಹನುಮೇಗೌಡ, ಕೆ.ಎಂ.ತಿಮ್ಮರಾಯಪ್ಪ, ಗೌರಿಶಂಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಆನಂದ ರವಿ, ಸೇರಿದಂತೆ ಹಲವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಚನ್ನಿಗಪ್ಪ: ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಎದುರು ಸೋಲು ಅನುಭವಿಸಿದ್ದ ಚನ್ನಿಗಪ್ಪ ಮಧುಗಿರಿ ಮತದಾರರು ನನಗೆ ಮೋಸ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಈ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಮೂರು ವರ್ಷಗಳಿಗೂ ಹೆಚ್ಚು ಕಾಲ ಈ ಕ್ಷೇತ್ರದಿಂದ ದೂರವೇ ಉಳಿದಿದ್ದ ಚನ್ನಿಗಪ್ಪ ಇಂದು ನಡೆದ ಸಮಾವೇ ಶದ ವೇದಿಕೆಯಲ್ಲಿ ದಿಢೀರ್ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.
ರಾಜಕೀಯ ಸ್ಥಿತ್ಯಂತರದಲ್ಲಿ ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಚನ್ನಿಗಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಎದುರು ತೀರಾ ಕಡಿಮೆ ಮತ ಪಡೆದು ಸೋಲು ಕಂಡಿದ್ದರು. ಈ ಸೋಲಿನಿಂದ ಕಂಗೆಟ್ಟಿದ್ದ ಅವರು ಮಾಧ್ಯಮದವರ ಮುಂದೆ ಮಧುಗಿರಿ ಕ್ಷೇತ್ರದ ಜನತೆ ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು.












Click it and Unblock the Notifications