ಉಗುರಿನಿಂದ ಪರಚಿ ಟೆಕ್ಕಿಯ ನವಜಾತ ಶಿಶು ಹತ್ಯೆ

infant-strangled-to-death-with-nail-marks-on-throat
ಹೈದರಾಬಾದ್‌, ಜುಲೈ 14: ಎರಡೂವರೆ ತಿಂಗಳ ಹಾಲುಗಲ್ಲದ ಆ ಮಗು ಏನು ತಪ್ಪು ಮಾಡಿತ್ತೋ ಗೊತ್ತಿಲ್ಲ. ಆದರೆ ಪಾಪಿಗಳು ಉಗುರುಗಳಿಂದ ಆ ಮಗುವಿನ ಕತ್ತನ್ನು ಪರಚುತ್ತಾ, ಉಸಿರುಗಟ್ಟಿಸಿ ಸಾಯಿಸಿಬಿಟ್ಟಿದ್ದಾರೆ. ಬೇಜವಾಬ್ದಾರಿಯ ಪರಮಾವಧಿ ಅಂದರೆ ಬೆಡ್ ರೂಮಿನಲ್ಲಿ ಮಲಗಿದ್ದ ಮಗುವನ್ನು ಹಾಗೆ ಸಾಯಿಸುವಾಗ ಅದರ ತಾಯಿ ಮತ್ತು ಕೆಲಸದಮ್ಮ ಅಲ್ಲೇ ಮನೆಯಲ್ಲೇ ಇದ್ದರು.

ಹೀಗೆ ಮಗುವನ್ನು ಕಳೆದುಕೊಂಡ ನತದೃಷ್ಟ ತಂದೆ ಎಸ್ ಸುನಿಲ್, Polaris ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ವಾಣಿನಗರದ ಮಲ್ಕಾಜ್ ಗಿರಿಯಲ್ಲಿ ಮಂಗಳವಾರ ಘಟನೆ ನಡೆದಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಗು ಗುರುವಾರ ರಾತ್ರಿ ಸಾವನ್ನಪ್ಪಿದೆ. ಮೃತ ಮಗುವಿನ ಹೆಸರು ಅರ್ಷಿತಾ.

ಅರ್ಷಿತಾಳ ತಾಯಿ ಅನುಶಾರ ಹೇಳಿಕೆಯನ್ನು ಆಧರಿಸಿ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿರುವ ಪೊಲೀಸರು 'ಹೊರಗಿನಿಂದ ಬಂದ ಅಪರಿಚಿತ ವ್ಯಕ್ತಿ ಈ ದುಷ್ಕೃತ್ಯವೆಸಗಿರುವ ಸಾಧ್ಯತೆಯಿದೆ. ಮನೆಯಲ್ಲೇ ಇದ್ದ ಮಗುವಿನ ತಾಯಿ ಮತ್ತು ಕೆಲಸದಮ್ಮ ಬೇರೆ ಕೆಲಸದಲ್ಲಿ ಮಗ್ನರಾಗಿದ್ದಾಗ ಸಮಯ ಸಾಧಿಸಿ, ಒಳನುಗ್ಗಿರುವ ದುಷ್ಕರ್ಮಿ ಹತ್ಯೆ ಮಾಡುವ ಉದ್ದೇಶದಿಂದ ಮಗುವಿನ ಮೇಲೆ ಹಲ್ಲೆ ಮಾಡಿರಬಹುದು' ಎಂದು ಶಂಕಿಸಿದ್ದಾರೆ.

ಬಹಳ ಹೊತ್ತಿನ ನಂತರ ಮಗು ಶಬ್ದ ಮಾಡುತ್ತಿಲ್ಲ ಎಂದು ಅರಿವಾದಾಗ ತಾಯಿ ಅನುಶಾ ಎಚ್ಚೆತ್ತು ಮಗು ಮಲಗಿರುವ ಕೊಠಡಿಗೆ ಹೋಗಿ ನೋಡಿದ್ದಾರೆ. ಆದರೆ ಅಲ್ಲಿ ಮಗು ನಿಶ್ಚಲವಾಗಿ ಮಲಗಿರುವುದು ಕಂಡುಬಂದಿದೆ. ಮತ್ತು ಮಗುವಿನ ಕುತ್ತಿಗೆಯ ಮೇಲೆ ಉಗುರಿನಿಂದ ಪರಚಿದ ಗಾಯಗಳೂ ಕಂಡುಬಂದಿವೆ.

ತಕ್ಷಣ ಮಗುವನ್ನು ವಿಕ್ರಮಪುರಿಯಲ್ಲಿರುವ ರೈನ್ ಬೋ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ 2 ದಿನಗಳ ತರುವಾಯ ಮಗು ಚೇತರಿಸಿಕೊಳ್ಳದೆ ಅಸುನೀಗಿದೆ. ಐಪಿಸಿ ಸೆಕ್ಷನ್ 302ಎ ಅನುಸಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+