ರಾಹುಲ್ ಗಾಂಧಿಗೆ 15 ಕೋಟಿ ವರದಕ್ಷಿಣೆ ಆಫರ್

Posted By:
Subscribe to Oneindia Kannada
Rahul Gandhi offered Rs 15 Cr Dowry
ನವದೆಹಲಿ, ಜು.12: ಯಾರಿಗುಂಟು ಯಾರಿಗಿಲ್ಲ! 40 ಪ್ಲಸ್ ಆದರೂ ಕಾಂಗ್ರೆಸ್ ಪಾಲಿನ ಯುವರಾಜ ರಾಹುಲ್ ಗಾಂಧಿ ಅವರಿಗೆ 15 ಕೋಟಿ ರು ವರದಕ್ಷಿಣೆ ಜೊತೆಗೆ ಕನ್ಯೆ ನೀಡುವ ಆಫರ್ ಬಂದಿದೆ. ಇದು ನೆಹರೂ ಕುಟುಂಬ ಕೇಳಿದ ಮೊತ್ತವಲ್ಲ. ಸೋನಿಯಾ ಗಾಂಧಿ ಫಿಕ್ಸ್ ಮಾಡಿದ ಅಮೌಂಟ್ ಅಂತೂ ಅಲ್ಲವೇ ಅಲ್ಲ. ರಾಹುಲ್ ಗಾಂಧಿ ತನ್ನ ಮಗಳನ್ನು ಮದುವೆಯಾದರೆ ತಗೊಳ್ಳಿ ಎಷ್ಟು ಕೋಟಿ ಬೇಕಾದರೂ ಕೊಡುವೆ ಎಂದು ಮಹಿಳೆಯೊಬ್ಬಳು ನೀಡಿರುವ ಫ್ರೆಶ್ ಆಫರ್.

ಓಂ ಶಾಂತಿ ಶರ್ಮಾ ಎಂಬ ಮಹಿಳೆ ಜುಲೈ 9ರಿಂದ ಜಂತರ್ ಮಂತರ್ ನಲ್ಲಿ ಅನಿರ್ದಿಷ್ಟಾವಧಿಯ ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾಳೆ. ಹಳದಿ ಸೀರೆಯಲ್ಲಿ ಧರಣಿಗೆ ಕುಳಿತಿರುವ ಮೌನವಾಗಿ ಕುಳಿತುಕೊಂಡು ಕೊರೆಯುವ ಚಳಿಯಲ್ಲಿ ಸಕತ್ ಹಾಟ್ ಆಫರ್ ನೀಡಿದ್ದಾಳೆ.

ತನ್ನ ಮಗಳಿಗೆ ಒಳ್ಳೆಯ ವರ ಕರುಣಿಸಿ ಎಂದು ಬೇಡುತ್ತಿದ್ದಾಳೆ. ರಾಹುಲ್ ಗಾಂಧಿ ಅಲ್ಲದೆ ಬೇರೆ ಯಾರೂ ನನ್ನ ಮಗಳಿಗೆ ವರನಾಗಲು ಸಾಧ್ಯವಿಲ್ಲವೆಂದು ಹಠ ಹಿಡಿದು ಕುಳಿತುಕೊಂಡಿದ್ದಾಳೆ.

ಮೌನವ್ರತ ಕೈಗೊಂಡಿರುವ ಶರ್ಮಾ ಧರಣಿ ಕುಳಿತಿರುವ ಜಾಗದಲ್ಲಿರುವ ಪ್ಲಕಾರ್ಡ್ ನಲ್ಲಿ 'ರಾಹುಲ್ ಗಾಂಧಿ ಸೆ ಅಪ್ನಿ ಬೇಟಿ ಕೆ ರಿಸ್ತೆ ಕಿ ಮಾಂಗ್(ನನ್ನ ಮಗಳನ್ನು ಮದುವೆಯಾಗೆಂದು ರಾಹುಲ್ ಗಾಂಧಿಯಲ್ಲಿ ಬೇಡಿಕೆ) ಎಂದು ಬರೆದಿದ್ದಾಳೆ. ತನ್ನ ಬೇಡಿಕೆಯನ್ನು ರಾಹುಲ್ ಗಾಂಧಿ ಒಪ್ಪಿದರೆ ತಾನು 15 ಕೋಟಿ ರೂ. ವರದಕ್ಷಿಣೆ ನೀಡಲು ತಯಾರಿದ್ದೇನೆ ಎಂದು ಆಕೆ ಬರೆದುಕೊಂಡಿದ್ದಾಳೆ.

ರಾಜಸ್ಥಾನದ ಜೈಪುರದ ಬಂದಿರುವ ಓಂ ಶರ್ಮಾ ತನ್ನ ಅತ್ತೆ ಮನೆ ಮತ್ತು ತಾಯಿ ಮನೆಯಲ್ಲಿ ಆಸ್ತಿ ಪಾಲು ನೀಡಬೇಕೆಂದು ಬೇಡಿಕೆಯನ್ನಿಟ್ಟಿದ್ದಾಳೆ. ಆಕೆ ಯಾವತ್ತೂ ಮಾತನಾಡಿದ್ದನ್ನು ಕೇಳಿಲ್ಲ, ಕೇವಲ ಮೌನವಾಗಿ ಉಪವಾಸ ಕುಳಿತುಕೊಳ್ಳುತ್ತಾಳೆ ಎಂದು ಅಲ್ಲೇ ಪಕ್ಕದಲ್ಲಿ ಧರಣಿ ಕುಳಿತಿರುವ ಸಂತೋಷ್ ಮುರತ್ ಸಿಂಗ್ ಎಂಬ ವ್ಯಕ್ತಿ ಹೇಳಿದ್ದಾನೆ.

ಮಿಡ್ ಡೇ ವರದಿಯಂತೆ ಶರ್ಮ ಅವರ ಉಪವಾಸಕ್ಕೆ ಸಾಥ್ ನೀಡಿರುವ ಸಂತೋಷ್ ಕೂಡಾ ಕುಟುಂಬದಿಂದ ಪರಿತ್ಯಕ್ತನಾಗಿದ್ದಾನೆ.

'ಪೊಲೀಸರ ಪ್ರಕಾರ ಆಕೆ ಮಾನಸಿಕ ಅಸ್ವಸ್ಥಳಿರಬಹುದು. ಆಕೆಯಿಂದ ಯಾರಿಗೂ ಏನು ತೊಂದರೆಯಾಗಿಲ್ಲ. ಸುಮ್ಮನೆ ಮೌನವಾಗಿ ಕುಳಿತು ಪ್ರರ್ಥಾನೆ ಸಲ್ಲಿಸುತ್ತಿರುತ್ತಾಳೆ. ಒಂದು ಮಾತು ಆಡಿಲ್ಲ. ಬರೆದು ತೋರಿಸಿಲ್ಲ. ಜಂತರ್ ಮಂತರ್ ಬಳಿ ಉಪವಾಸ ಕೂರಲು ಆಕೆ ಯಾವುದೇ ಅನುಮತಿ ಪಡೆದಿಲ್ಲ'ಎಂದು ನವದೆಹಲಿಯ ಹೆಚ್ಚುವರಿ ಡಿಸಿಪಿ ಕೆಸಿ ದ್ವಿವೇದಿ ಹೇಳಿದ್ದಾರೆ.

43 ವರ್ಷದ ಚಿರಯುವಕ ಇನ್ನೂ ಮದುವೆಯಾಗದಿರುವುದು ಅನೇಕರ ನಿದ್ದೆ ಕೆಡಿಸಿರುವುದಂತೂ ನಿಜ. ರಾಹುಲ್ ಮದುವೆ ಅಫ್ಘಾನ್ ಯುವರಾಣಿಯೊಂದಿಗೆ ಆಗುವ ಲಕ್ಷಣಗಳಿದೆ ಎಂದು ಜನಪ್ರಿಯ ದೈನಿಕ ದಿ ಸಂಡೇ ಗಾರ್ಡಿಯನ್ ಇತ್ತೀಚೆಗೆ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಫ್ರಾನ್ಸ್ ಪ್ರವಾಸದಲ್ಲಿ ಮುಸ್ಲಿಂ ಚೋಕರಿಯೊಂದಿಗೆ ರಾಹುಲ್ ಸುತ್ತಾಡಿದ ವಿಷಯವನ್ನು ಜೆಡಿಯುನ ಸುಬ್ರಮಣಿಯಂ ಸ್ವಾಮಿ ಕೂಡಾ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress general secretary Rahul Gandhi is Rs 15 crore as dowry by a woman called Om Shanti Sharma. Sharma is fasting at Janatar Mantar made this proposal that she will pay hefty dowry if Rahul marries her daughter.
Please Wait while comments are loading...