• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಲ್ಲಿ ಶೇ 14ರಷ್ಟು ನೇಮಕಾತಿ ಹೆಚ್ಚಳ

By Mahesh
|
Bangalore sees 14% increase in hiring compared to last year
ಬೆಂಗಳೂರು, ಜು.11: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿಮೆ, ನಿರ್ಮಾಣ, ಐಟಿ ಹಾಗೂ ಐಟಿಯೇತರ ವಲಯಗಳಲ್ಲಿ ಶೇ 14 ರಷ್ಟು ನೇಮಕಾತಿ ಹೆಚ್ಚಳವನ್ನು ಬೆಂಗಳೂರಿನಲ್ಲಿ ಕಾಣಲಾಗಿದೆ.

ಆಯ್ದ ನೇಮಕಾತಿ ಪ್ರಕ್ರಿಯೆ ಇದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14 ರಷ್ಟು ನೇಮಕಾತಿ ಹೆಚ್ಚಳಗೊಂಡಿದೆ ಎಂದು ಇನ್ಫೋ ಎಡ್ಜ್ ಇಂಡಿಯಾ ಸಂಸ್ಥೆ ಸಿಇಒ ಹಿತೇಶ್ ಒಬೆರಾಯ್ ಹೇಳಿದ್ದಾರೆ.

ಆದರೆ, ಮುಂಬರುವ ತಿಂಗಳುಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಇದೇ ಟ್ರೆಂಡ್ ಇರುತ್ತದೆ ಎನ್ನಲಾಗುವುದಿಲ್ಲ. ನೇಮಕಾತಿ ಸಂಸ್ಥೆಗಳಿಗೆ ಈ ವರ್ಷದ ಕೆಲವು ತಿಂಗಳು ಸವಾಲು ಎದುರಿಸಬೇಕಾಗಿದೆ.

ಕಳೆದ ವರ್ಷದ ಜೂನ್ ತಿಂಗಳಲ್ಲಿ ಸಾಫ್ಟ್ ವೇರ್ ಸೇವೆ, ಬ್ಯಾಂಕಿಂಗ್ ಹಾಗೂ ಫಾರ್ಮಾಸ್ಯೂಟಿಕಲ್ಸ್ ಕೈಗಾರಿಕಾ ಕ್ಷೇತ್ರಗಳಲ್ಲಿ ಆಗಿದ್ದ ನೇಮಕಾತಿಗಿಂತ ಈ ವರ್ಷ ಕ್ರಮವಾಗಿ ಶೇ 9, 16% ಹಾಗೂ 19% ಹೆಚ್ಚಿನ ನೇಮಕಾತಿ ಕಂಡು ಬಂದಿದೆ.

ಇದೇ ರೀತಿ ಆಟೋಮೋಟಿವ್ ಹಾಗೂ ಬೃಹತ್ ಯಂತ್ರ ನಿರ್ಮಾಣ ಸಂಸ್ಥೆಗಳಲ್ಲಿ ನೇಮಕಾತಿ ಗ್ರಾಫ್ ಸ್ಥಿರವಾಗಿದ್ದರೆ, ನಿರ್ಮಾಣ ಸಂಸ್ಥೆ ಹಾಗೂ ಐಟಿಯೇತರ ಸಂಸ್ಥೆಗಳ ನೇಮಕಾತಿ ಉತ್ತಮವಾಗಿದೆ. ಸೇಲ್ಸ್ ಹಾಗೂ ವಾಣಿಜ್ಯ ಅಭಿವೃದ್ಧಿ ಸಂಸ್ಥೆಗಳಲ್ಲಿ ಬೇಡಿಕೆ ಹೆಚ್ಚಿದ್ದರೆ, ಬಿಪಿಒಗಳಲ್ಲಿ ಅಷ್ಟಾಗಿ ಸಂಚಲನವಾಗಿಲ್ಲ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗೆ ಸಕಾಲ: ಅಮೆರಿಕದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ತೆರಿಗೆ ಮನ್ನಾ ಮಾಡುವ ಚಿಂತನೆ ನಡೆದಿದೆ. ಹೀಗಾಗಿ ಅಮೆರಿಕ ಮೂಲದ ಕಂಪನಿಗಳು ಹೆಚ್ಚಾಗಿ ಹೊರಗುತ್ತಿಗೆ ವಲಯದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಲಕ್ಷಣಗಳು ಕಂಡು ಬಂದಿದೆ.

ಒಮ್ಮೆ ಈ ಮಸೂದೆ ಅಂಗೀಕಾರವಾದರೆ ಕಿರು ಉದ್ದಿಮೆಗಳಿಗೆ $500,000 ನಷ್ಟು ಹೆಚ್ಚುವರಿ ಸಾಲ ದೊರೆಯಲಿದೆ. ಇದು ಅಮೆರಿಕದ ಆರ್ಥಿಕತೆ ಸುಧಾರಣೆಗೆ ಸಹಾಯಕವಾಗಲಿದೆ. ಹಾಗೂ ಪರೋಕ್ಷವಾಗಿ ನೇಮಕಾತಿ ಹೆಚ್ಚಳಕ್ಕೆ ನಾಂದಿ ಹಾಡಲಿದೆ.

ಜಿಇ ಹೆಲ್ತ್ ಕೇರ್ ನೇಮಕಾತಿ: ಡಿಸೆಂಬರ್ 2012ರೊಳಗೆ ಭಾರತದಲ್ಲಿ ಸುಮಾರು 400 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಮೆಡಿಕಲ್ ತಂತ್ರಜ್ಞಾನ ಮತ್ತು ಸೇವಾ ಸಂಸ್ಥೆ ಜಿಇ ಹೆಲ್ತ್ ಕೇರ್ ಪ್ರಕಟಿಸಿದೆ.

ಬೆಂಗಳೂರಿನಲ್ಲಿರುವ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಅರ್ಧದಷ್ಟು ಉದ್ಯೋಗಿಗಳು ಸೇರ್ಪಡೆಗೊಳ್ಳಲಿದ್ದಾರೆ. ಭಾರತದಲ್ಲಿ ಸುಮಾರು 4,000 ಜನರು ಜಿಇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಅವರಲ್ಲಿ 1,200 ಜನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿದ್ದಾರೆ.

ಭಾರತದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರದ ಪ್ರಗತಿಗೆ ಪೂರಕ ವಾತಾವರಣವಿದೆ. ನಿಪುಣ ಉದ್ಯೋಗಿಗಳನ್ನು ಆಯ್ಕೆ ಮಾಡಿ ಆರ್ ಅಂಡ್ ಡಿ ವಿಭಾಗದ ಶಕ್ತಿ ಹೆಚ್ಚಿಸಲಾಗುವುದು. ಕಳೆದ ವರ್ಷ ಭಾರತ ಶೇ 25 ರಷ್ಟು ಪ್ರಗತಿ ಕಾಣಲಾಗಿದೆ. ಈ ವರ್ಷ ಕೂಡಾ ಉತ್ತಮ ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ಜಿಇ ಹೆಲ್ತ್ ಕೇರ್ ದಕ್ಷಿಣ ಏಷ್ಯಾದ ಸಿಇಒ ಟೆರಿ ಬ್ರೆಸೆನ್ಹಾಮ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಉದ್ಯೋಗ ಸುದ್ದಿಗಳುView All

English summary
Bangalore sees 14pc increase in hirring in various sectors like construction, insurance, IT and ITeS industries compared to last year. the next few months will be challenging for the overall recruitment market in India" said Hitesh Oberoi, Managing Director and CEO, Info Edge India

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more