ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ:ಮತ್ತಷ್ಟು ಸ್ವಯಂಕೃಷಿಕರು ಪೊಲೀಸ್ ವಶಕ್ಕೆ

By Srinath
|
Google Oneindia Kannada News

devanahalli-police-arrest-swayam-krushi-directors
ಬೆಂಗಳೂರು, ಜುಲೈ 7: ಚಿಟ್ ಫಂಡು ಮತ್ತೊಂದು ಮಗದೊಂದು ಎಂದು ಹತ್ತಾರು ನಕಲಿ ಕಂಪನಿಗಳ ಮೂಲಕ ಅಮಾಯಕ ಜನರಿಗೆ ಮೋಸ ಮಾಡಿದ ಸ್ವಯಂಕೃಷಿ ಸಂಸ್ಥೆಯ ಅಧ್ಯಕ್ಷ ಮುರಳಿ ಮತ್ತು ಉಪಾಧ್ಯಕ್ಷ ಮತ್ತು ಕಾರ್ಯ ನಿರ್ವಹಣಾಧಿಕಾರಿ ವೀರೇಂದ್ರ ಬಾಬುನನ್ನು ಮೊನ್ನೆ ಹೈದರಾಬಾದಿನಲ್ಲಿ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಅವರಯು ಕೊಟ್ಟ ಮಾಹಿತಿಯ ಮೇರೆಗೆ ಇನ್ನೂ ಮೂರು ಸ್ವಯಂಕೃಷಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಐದು ಮಂದಿಯನ್ನು ದೇವನಹಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವೀರೇಂದ್ರ ಬಾಬು ಹಾಗೂ ಮುರಳಿಯನ್ನು ಹೆಚ್ಚಿನ ತನಿಖೆಗಾಗಿ ಜುಲೈ 12ರವರೆಗೆ ಪೊಲೀಸರು ವಶಕ್ಕೆ ನೀಡಲಾಗಿದ್ದು ಇತರೆ ಮೂವರು ನಿರ್ದೇಶಕರುಗಳಾದ ವೆಂಕಟೇಶಬಾಬು, ಮಾರೇಗೌಡ ಮತ್ತು ಗೋವಿಂದರಾಜನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ತಾಲ್ಲೂಕು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಸ್ವಯಂಕೃಷಿ ಚಿಟ್‌ಫಂಡ್ಸ್ ಶಾಖೆಗಳ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಈ ಐವರ ವಿರುದ್ಧ 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿದ್ದವು. ತಲೆಮರೆಸಿಕೊಂಡು ಹೈದರಾಬಾದಿನಲ್ಲಿ ಇದ್ದ ಇವರನ್ನು ದೇವನಹಳ್ಳಿ ಪೊಲೀಸರು ಗುರುವಾರ ಬಂಧಿಸಿ ಇಲ್ಲಿಗೆ ಕರೆತಂದಿದ್ದರು.

ಸ್ವಯಂಕೃಷಿ ಸಂಸ್ಥೆಗೆ ಏಜೆಂಟರಾಗಿದ್ದವರು ಹಾಗೂ ಗ್ರಾಹಕರು ಹೂಡಿಕೆ ಮಾಡಿದ್ದ ಹಣವನ್ನು ಹಿಂದಿರುಗಿಸುವಲ್ಲಿ ಸಂಸ್ಥೆಯು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ಕಳೆದ ತಿಂಗಳಿನಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಹಿಂದೂಪುರ, ದೇವನಹಳ್ಳಿ, ಮೈಸೂರು, ನಂಜನಗೂಡು, ಬೆಂಗಳೂರಿನ ಜಯನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ವಂಚನೆ ಪ್ರಕರಣ ದಾಖಲಾಗಿರುವುದು ಚಿಟ್‌ಫಂಡ್‌ನಲ್ಲಿ ಎಂಬುದು ವಿಶೇಷ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

English summary
The owner of Swayam Krushi Group of Companies and a Kannada Daily Newspaper Shubodaya owner (also an actor) Veerendrababu had been recently arrested by Devanahalli police in Hyderabad. After that the police have arrested other directors of the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X