ರಾಷ್ಟ್ರಪತಿ ಭವನ: ಪ್ರಣಬ್ ಜತೆಗೆ ಮಾಂಸಾಹಾರವೂ ಪ್ರವೇಶ

non-veg-may-be-back-in-rashtrapati-bhavan-azad
ನವದೆಹಲಿ, ಜುಲೈ4: ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರು ಈ ಬಾರಿ ರಾಷ್ಟ್ರಪತಿ ಭವನ ಪ್ರವೇಶಿಸುವುದು ಬಹುತೇಕ ಖಚಿತ. ಅದರೊಂದಿಗೆ ಮಾಂಸಾಹಾರವು ಒಂದು ದಶಕದ ಬಳಿಕ ಮತ್ತೆ ರಾಷ್ಟ್ರಪತಿ ಭವನದೊಳಕ್ಕೆ ನುಸುಳಲಿದೆ.

ಹೀಗೇಕೆ ಅಂದರೆ ಕಳೆದ 10 ವರ್ಷಗಳಲ್ಲಿ ರಾಷ್ಟ್ರಪತಿಯಾದವರೆಲ್ಲ (ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್) ಅಪ್ಪಟ ಶಾಖಾಹಾರಿಗಳಾಗಿದ್ದರು. ಆದರೆ ಬೆಂಗಾಲಿ ಬಾಬು ಪ್ರಣಬ್ ದಾ ಅವರು ಶುದ್ಧ ಮಾಂಸಾಹಾರಿಗಳು. ಹೀಗಾಗಿ ದೇಶದ ಮೊದಲ ಅಡುಗೆ ಮನೆಯಲ್ಲಿ ಇನ್ಮುಂದೆ ಮಾಂಸಾಹಾರದ ಘಮ ಪಸರಿಸಲಿದೆ.

ಮೀನು, ಮಾಂಸ ಮತ್ತು ಸುಪ್ರಸಿದ್ಧ ಹೈದರಾಬಾದ್ ಬಿರಿಯಾನಿ ಪ್ರಣಬ್ ಮುಖರ್ಜಿ ಅವರ ಜಿಹ್ವಾ ಚಾಪಲ್ಯಕ್ಕೆ ಸಾಣೆಹಿಡಿಯುತ್ತದೆ. ಇದರ ಜತೆಗೆ, ಕಶ್ಮೀರಿ ವಾಜ್ವಾನ್ ಗೂ ಸ್ಥಾನ ಕಲ್ಪಿಸಬೇಕು ಎಂದು ಪ್ರಣಬ್ ದಾ ಗೆಳೆಯ, ಕೇಂದ್ರ ಆರೋಗ್ಯ ಮಂತ್ರಿ ಗುಲಾಂ ನಭಿ ಆಜಾದ್ ಈಗಾಗಲೇ ಬೇಡಿಕೆಯಿಟ್ಟಿದ್ದಾರೆ.

ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರುಗಳು ಸ್ವತಃ ಅಪ್ಪಟ ಶಾಖಾಹಾರಿಗಳಾಗಿದ್ದು ರಾಷ್ಟ್ರಪತಿ ಭವನದ ಅನೇಕ ಅತಿಥಿಗಳಿಗೆ ಇರುಸುಮುರುಸು ತಂದಿತ್ತು. ಅನೇಕ ವಿದೇಶಿ ಗಣ್ಯರು, ವಿದೇಶಗಳ ಸರಕಾರಿ ಮುಖ್ಯಸ್ಥರು ಮಾಂಸಾಹಾರವಿಲ್ಲದೆ ಪರಿತಪಿಸಿದ ಪ್ರಸಂಗಗಳೂ ನಡೆದಿವೆ.

ಆದರೆ ಈ ಬಾರಿ ರಾಷ್ಟ್ರಪತಿ ಭವನದೊಳಕ್ಕೆ ಶುದ್ಧ ಮಾಂಸಾಹಾರಿ ಪ್ರವೇಶ ಪಡೆಯುವ ಸಾಧ್ಯತೆಯಿರುವುದರಿಂದ ಮಾಂಸಾಹಾರಿಗಳಿಗೆ ಇನ್ನು ಮುಂದೆ ಯಾವುದೇ ಧಕ್ಕೆಯೊದಗದು ಎಂದು ಆಜಾದ್ ಆಶಿಸಿದ್ದಾರೆ.

ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೂ ನಾನು ಕಶ್ಮೀರಿ ವಾಜ್ವಾನ್ ಮಾಂಸಾಹಾರವನ್ನು ಕಳಿಸಿಕೊಡುತ್ತಿದೆ ಎಂದು ತಮ್ಮ ಮಾಂಸಾಹಾರದ ಸ್ವಾದವನ್ನು ಮೆಲುಕು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+