ಬಂಧನದ ಭೀತಿ: ಸೋಮಶೇಖರ ರೆಡ್ಡಿ ನಾಪತ್ತೆ
ಬಳ್ಳಾರಿ, ಜುಲೈ4: ಪೆದ್ದನ್ನ ಜನಾರ್ದನ ರೆಡ್ಡಿಗೆ ಜಾಮೀನು ದೊರಕಿಸಲು ಜಡ್ಜ್ ಪಟ್ಟಾಭಿ ರಾಮರಾವ್ ಗೆ ತಿನ್ನಿಸಬಾರದ್ದನ್ನು ತಿನ್ನಿಸಿದ ಆರೋಪಕ್ಕೆ ತುತ್ತಾಗಿರುವ ಕೆಎಂಎಫ್ ಗೋಪಾಲಕ ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಶಾಸಕ ಸುರೇಶ್ ಬಾಬು ಅವರ where abouts ಕಳೆದ 2-3 ದಿನದಿಂದ ಯಾರ ಕಣ್ಣು-ಕಿವಿಗೂ ಬಿದ್ದಿಲ್ಲ.

ಅತ್ತ, ಪ್ರಕರಣದಲ್ಲಿ KMF ಸೋಮಶೇಖರ ರೆಡ್ಡಿ ಪ್ರಧಾನ ಪಾತ್ರ ವಹಿಸಿರುವ ಬಗ್ಗೆ ಬಂಧಿತ ಆರೋಪಿ ರೌಡಿ ಶೀಟರ್ ಯಾದಗಿರಿ ರಾವ್ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳದ (ACB) ಮುಂದೆ ಸೋಮವಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದೇ ಬಂತು ಇತ್ತ KMF ಸೋಮಶೇಖರ ಜಾಗ ಖಾಲಿ ಮಾಡಿದ್ದಾರೆ.
Headquarters ಬಳ್ಳಾರಿಯಲ್ಲಿ KMF ಸೋಮಶೇಖರ ರೆಡ್ಡಿ ಮೂರು ದಿನಗಳಿಂದ ಯಾರಿಗೂ ಕಾಣಿಸಿಕೊಂಡಿಲ್ಲ. ಮತ್ತು ಕೋಟ್ಯಂತಯರ ರು. ಲಂಚ ಸಾಗಿಸಲು ನೆರವಾದರೆ ಕಂಪ್ಲಿ ಬಾಬು ಸಹ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇಬ್ಬರ ಮೊಬೈಲುಗಳೂ ಸ್ಚಿಚ್ಡ್ ಆಫ್ ಆಗಿವೆ. ಮೂಲಗಳ ಪ್ರಕಾರ ಈ ಶಾಸಕದ್ವಯರನ್ನು ವಶಕ್ಕೆ ತೆಗೆದುಕೊಂಡಿರುವ ACB ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ಬಂಧನದಲ್ಲಿದ್ದ ಜನಾರ್ದನ ರೆಡ್ಡಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ಜಡ್ಜ್ ಪಟ್ಟಾಭಿಗೆ ಕೋಟ್ಯಂತರ ರುಪಾಯಿ ಲಂಚ ಸಂದಾಯವಾದ ಪ್ರಕರಣದಲ್ಲಿ ಈಗಾಗಲೇ ಜಡ್ಜ್ ಪಟ್ಟಾಭಿ, ಆತನ ಪುತ್ರ ತಲ್ಲೂರಿ ರವಿಚಂದ್ರ, ನಿವೃತ್ತ ಜಡ್ಜ್ ಚಲಪತಿ ರಾವ್ ಹಾಗೂ ನಾಲ್ಕನೆಯವನಾಗಿ ರೌಡಿಶೀಟರ್ ಯಾದಗಿರಿ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ.
ಇವರ ವಿಚಾರಣೆ ವೇಳೆ ಲಭ್ಯವಾದ ಮಹತ್ವದ ಮಾಹಿತಿಯನ್ನಾಧರಿಸಿ ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಬಾಬುರನ್ನು ACB ವಶಕ್ಕೆ ತೆಗೆದುಕೊಂಡಿದ್ದು, ಅವರ ಬಂಧನ ಕುರಿತು ಅಧಿಕೃತ ಪ್ರಕಟಣೆಯಷ್ಟೇ ಹೊರಬೀಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಬೇಲ್ ಡೀಲ್ ಗೆ ಕೊಟ್ಟಿರುವ 9.5 ಕೋಟಿ ರುಪಾಯಿ ಹಣವನ್ನು ಇವರಿಬ್ಬರೂ ತಮ್ಮ ವಾಹನಗಳಲ್ಲಿ ಆಂಧ್ರ ಪ್ರದೇಶಕ್ಕೆ ಸಾಗಿಸಿದ್ದರು. ಹಾಗೆಯೇ, ಡೀಲ್ ಕುದುರಿಸುವಲ್ಲಿ ಈರ್ವರೂ ಪ್ರಮುಖ ಪಾತ್ರವಹಿಸಿರುವ ಬಗ್ಗೆ ACBಗೆ ಸಾಕ್ಷ್ಯಾಧಾರಗಳು ಲಭಿಸಿವೆ.












Click it and Unblock the Notifications