ಟೀಚರಿಗೇ ಅಶ್ಲೀಲ ಸಂದೇಶ: ಪಿಯು ವಿದ್ಯಾರ್ಥಿಯ ಸೆರೆ

madurai-student-send-lewd-sms-to-teacher-held
ಮದುರೈ, ಜುಲೈ 3: ಅವ ನಿಜಕ್ಕೂ ಬುದ್ಧಿವಂತನೇ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮ ಅಂಕಗಳನ್ನು ಗಳಿಸಿದ್ದ. ಮುಂದೆ ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಸಿಇಟಿ ಫಲಿತಾಂಶಕ್ಕೆ ಎದುರು ನೋಡುತ್ತಿದ್ದ. ಆದರೆ ಈ ಮಧ್ಯೆ ಒಂದಷ್ಟು ಎಡವಟ್ಟೂ ಮಾಡಿಕೊಂಡುಬಿಟ್ಟ.

ಇಂತಿಪ್ಪ ಪ್ರತಿಭಾನ್ವಿತ ವಿದ್ಯಾರ್ಥಿ ಏನಪಾ ಅಂಥಾ ಅಪರಾಧ ಮಾಡಿದ ಅಂದಿರಾ? ಏನಿಲ್ಲ ಹುಡುಗು ಬುದ್ಧಿ. ತನ್ನ ಟೀಚರಿಗೂ ಸೇರಿದಂತೆ ಕೆಲವು ಮಹಿಳೆಯರಿಗೆ ತನ್ನ ಮೊಬೈಲಿನಿಂದ ಸುಮ್ಮನೆ SMSಗಳನ್ನು ಕಳಿಸತೊಡಗಿದ. ಅದೂ ಅಶ್ಲೀಲ ಸಂದೇಶಗಳು. ಅದುವೇ ಈಗ ಅವನ ಭವಿಷ್ಯಕ್ಕೆ ಮುಳುವಾಗಿದೆ. ಪೊಲೀಸರು ಅವನನ್ನು ಬಂಧಿಸಿದ್ದಾರೆ.

ಯುವಕನೊಬ್ಬ ನನ್ನ ಮೊಬೈಲಿಗೆ ಅಶ್ಲೀಲ ಮೆಸೇಜುಗಳನ್ನು ಕಳಿಸುತ್ತಿದ್ದಾನೆ. ಆಗಾಗ ಕರೆ ಮಾಡಿ ಕಿರಿಕಿರಿಯುಂಟುಮಾಡುತ್ತಿದ್ದಾನೆ. ಏನೇನೂ ಪೋಲಿಪೋಲಿಯಾಗಿ ಮಾತನಾಡುತ್ತಾನೆ. ಅವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮೇಡಂ ಒಬ್ಬರು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಮಾಥೂರ್ ಅವರಿಗೆ ಲಿಖಿತ ದೂರು ನೀಡಿದರು. ಮುಂದಿನದೆಲ್ಲ ಪಿಯುಸಿ ಬಾಲಕನ ಪ್ರಲಾಪವೇ ಕೇಳಿಬಂದಿದೆ.

ನಗರದ ಸೈಬರ್ ಕ್ರೈಂ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಸೌತ್ ಗೇಟ್ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ಅವನ ಮೊಬೈಲು ತೆರೆದು ನೋಡಿದಾಗ ಒಂದೊಂದೇ ವಿಷಯಗಳು ಹೊರಬಿದ್ದಿವೆ.

ಸದರಿ ವಿದ್ಯಾರ್ಥಿಯು ಈ ಘನ ಕಾರ್ಯಕ್ಕೆಂದೇ ಬರೋಬ್ಬರಿ 10 ಸಿಮ್ ಕಾರ್ಡುಗಳನ್ನು ಬಳಸುತ್ತಿದ್ದ! ಮಹಿಳೆಯರಿಗೆ ಅಶ್ಲೀಲ SMSಗಳನ್ನು ಕಳಿಸುವುದೇ ಇವನ ಹವ್ಯಾಸವಾಗಿತ್ತು. ಪ್ಲಸ್-2 ಪರೀಕ್ಷೆಯಲ್ಲಿ 1,100 ಅಂಕಗಳನ್ನು ಗಳಿಸಿ, ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುತ್ತಿದ್ದವನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಅವನಿಂದ ೆರಡು ಮೊಬೈಲುಗಳು ಮತ್ತು ಒಟ್ಟು 9 ಸಿಮ್ ಕಾರ್ಡುಗಳನ್ನು ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+