ಬೇಕಾಗಿದ್ದಾರೆ: ಕೇವಲ 400 ಪ್ರಾಮಾಣಿಕ ಸಂಸದರು

ಅದಕ್ಕೂ ಮುನ್ನ ಭ್ರಷ್ಟಾಚಾರವನ್ನು ತೊಡೆದುಹಾಕಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಜನತೆ ಯುಪಿಎ ಸರಕಾರವನ್ನು ಬಿಸಾಡುವುದು ಖಚಿತ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ಹಾಗಾದರೆ ಯುಪಿಎಗೆ ಪರ್ಯಾಯವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ '400 ಮಂದಿ ಪ್ರಾಮಾಣಿಕ ಸಂಸದರು ಮತ್ತು ಒಬ್ಬ ಪ್ರಾಮಾಣಿಕ ಪ್ರಧಾನ ಮಂತ್ರಿ ಸಾಕು' ಎಂದು ಅವರು ಮರುತ್ತರ ನೀಡಿದರು. ರಾಷ್ಟ್ರಪತಿ ಚುನಾವಣೆ ಬಗ್ಗೆ ಕೇಳಿದಾಗ ಚುನಾವಣೆಯ ಮೂಲಕ ರಾಷ್ಟ್ರಪತಿಯನ್ನು ಆರಿಸಬೇಕಾದ ಪರಿಸ್ಥಿತಿ ನಿರ್ಮಣಾವಾಗಿರುವುದು ದುರದೃಷ್ಟವೇ ಸರಿ ಎಂದು ಅವರು ಪ್ರತಿಕ್ರಿಯಿಸಿದರು.
ದೇಶದ ಅರ್ಥ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಅತ್ಯಗತ್ಯವಾಗಿದೆ. ದೇಶದ ಪ್ರಗತಿಗೆ ಮತ್ತು ಅಭಿವೃದ್ಧಿಗೆ ಇದರ ಜರೂರತ್ತು ಬಹಳಷ್ಟಿದೆ ಎಂದು ಅವರು ತಿಳಿಸಿದರು. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆರ್ಥಿಕ ಪ್ರಗತಿಗೆ ಒತ್ತು ನೀಡುವಂತೆ ಒತ್ತಾಯಿಸಿ ಆಗಸ್ಟ್ 9 ರಂದು ನವದೆಹಲಿಯಲ್ಲಿ ಮತ್ತೊಂದು ಸುತ್ತಿನ ಹೋರಾಟ ಹಮ್ಮಿಕೊಳ್ಳುವುದಾಗಿ ಬಾಬಾ ರಾಮದೇವ್ ಇದೇ ವೇಳೆ ಘೋಷಿಸಿದರು.











Click it and Unblock the Notifications