• search

ವಿಂಬಲ್ಡನ್ ಸುತ್ತು: ಸಾನಿಯಾ, ಭೂಪತಿ, ನಡಾಲ್ ಔಟ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Sania Bhupathi out of Tounament
  ಲಂಡನ್, ಜು.1: ವಿಂಬಲ್ಡನ್ 2012ನ ಆರಂಭದ ದಿನದಲ್ಲೇ ವೀನಸ್ ವಿಲಯನ್ಸ್ ನಿರ್ಗಮಿಸಿದ ನಂತರ ಪುರುಷರ ಸಿಂಗಲ್ಸ್ ನಿಂದ ರಫೆಲ್ ನಡಾಲ್ ಹೊರಬಿದ್ದಿದ್ದಾರೆ. ಜೊತೆಗೆ ಭಾರತದ ಮಿಶ್ರ ಡಬಲ್ಸ್ ಜೋಡಿ ಸಾನಿಯಾ ಹಾಗೂ ಮಹೇಶ್ ಭೂಪತಿ ಕೂಡಾ ಹೀನಾಯ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

  2ನೇ ಸುತ್ತಿನಲ್ಲಿ ಸಾನಿಯಾ ಮಿರ್ಜಾ ಹಾಗೂ ಮಹೇಶ್ ಭೂಪತಿ ಅವರು 3-6,1-6 ರ ನೇರ ಸೆಟ್ ಗಳಿಂದ ರಷ್ಯಾದ ಅನ್ನೆ ಕುದ್ರೆತ್ಸೋವಾ ಹಾಗೂ ಆಸ್ಟ್ರೇಲಿಯಾದ ಪೌಲ್ ಹೆನ್ಲಿ ಜೋಡಿಗೆ ತಲೆಬಾಗಿತು. ಈ ಮೂಲಕ ಒಲಿಂಪಿಕ್ಸ್ ನ ಸಂಭಾವ್ಯ ಜೋಡಿಯಾಗಿರುವ ಮಹೇಶ್ ಭೂಪತಿ ಹಾಗೂ ಸಾನಿಯಾಗೆ ಆಘಾತ ಅನುಭವಿಸಿತು.

  ಮಿಶ್ರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಹಾಗೂ ಚೀನಾದ ಜೆಂಗ್ ಜೋಡಿ 2ನೇ ಸುತ್ತಿಗೆ ವಾಕ್ ಓವರ್ ಪಡೆದುಕೊಂಡಿದ್ದಾರೆ,

  ಪುರುಷರ ಡಬಲ್ಸ್ ನಲ್ಲಿ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಜೋಡಿ ಎರಡನೇ ಸುತ್ತಿಗೆ ತಲುಪಿದ್ದಾರೆ. ಲಿಯಾಂಡರ್ ಪೇಸ್ ಹಾಗೂ ರಾಡಿಕ್ ಸ್ಟೆಪ್ನೆಕ್ ಜೋಡಿ ಇಸ್ರೇಲ್ ನ ಜೋನಾಥನ್ ಎರ್ಲಿಚ್- ಆಂಡಿ ರಾಮ್ ಜೋಡಿಯನ್ನು 6-2.6-4.7-6(5) ಸೆಟ್ ಗಳಲ್ಲಿ ಸೋಲಿಸಿದರು.

  ಕಿಂಗ್ ಆಫ್ ಕ್ಲೇ ಔಟ್ : ಸ್ಪೇನ್‌ನ ರಫೆಲ್ ನಡಾಲ್ ಆಘಾತಕಾರಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ವಿಶ್ವದ ನಂ.100ನೆ ಶ್ರೇಯಾಂಕಿತ ಝೆಕ್‌ನ ಲೂಕಾಸ್ ರೊಸೊಲ್ ವಿರುದ್ಧ 2008 ಹಾಗೂ 2010ರ ವಿಂಬಲ್ಡನ್ ಚಾಂಪಿಯನ್ ಹಾಗೂ 11 ಬಾರಿ ಗ್ರಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ನಡಾಲ್‌ರನ್ನು 6-7(9/11), 6-4, 6-4, 2-6, 6-4 ಸೆಟ್‌ಗಳಿಂದ ಸೋಲಿಸಿ ಆಘಾತ ನೀಡಿದರು.

  ಈ ಮೊದಲು 5 ಬಾರಿ ವಿಂಬಲ್ಡನ್‌ನಲ್ಲಿ ಭಾಗವಹಿಸಿದ್ದ ರೊಸೊಲ್ ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದರು. ಏಳನೆ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದು ದಾಖಲೆಯನ್ನು ಬರೆದಿರುವ ನಡಾಲ್ ಕಳೆದ ಐದು ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೇರಿದ ದಾಖಲೆ ಹೊಂದಿದ್ದಾರೆ.

  ಉಳಿದಂತೆ (3ನೇ ಸುತ್ತು) ಜಂಟಲ್ ಮೆನ್ಸ್ ಸಿಂಗಲ್ಸ್, ಡಬಲ್ಸ್,ಲೇಡಿಸ್ ಸಿಂಗಲ್ಸ್, ಡಬಲ್ಸ್ ಫಲಿತಾಂಶ ಇಂತಿದೆ:

  * ಅಂಡಿ ಮರ್ರೆ 7-5,3-6,7-5,6-1 ರಲ್ಲಿ ಬಾಗ್ದಟಿಸ್ ವಿರುದ್ಧ ಗೆಲುವು
  * ಜೆ ಸೊಂಗಾ 6-4,6-3,6-3 ರಲ್ಲಿ ಲಾಕೊ ವಿರುದ್ಧ ಗೆಲುವು
  * ಫಿಶ್ 6-3,7-6,7-6 ರಲ್ಲಿ ಗಾಫಿನ್ ವಿರುದ್ಧ ಗೆಲುವು
  * ಡೆಲ್ ಪೊರ್ಟೊ 6-3,7-6,6-1 ರಲ್ಲಿ ನಿಶಿಕೋರಿ ವಿರುದ್ಧ ಗೆಲುವು
  * ಫೆರೆರ್ 2-6,7-6,6-4,6-3 ರಲ್ಲಿ ರಾಡಿಕ್ ವಿರುದ್ಧ ಗೆಲುವು
  * ಕೊಹಿಶ್ರೆಬರ್ 6-2,6-3,7-6ರಲ್ಲಿ ರಸೂಲ್(ನಡಾಲ್ ಸೋಲಿಸಿದ ವೀರ) ವಿರುದ್ಧ ಗೆಲುವು
  * ಫೆಡರರ್ 4-6,6-7,6-2,7-6,6-1 ರಲ್ಲಿ ಬೆನ್ನೆಟ್ಯೂ ವಿರುದ್ಧ ಗೆಲುವು
  * ಜೊಕೊವಿಕ್ 4-6,6-2,6-2,6-2 ರಲ್ಲಿ ಸ್ಟೆಪನೆಕ್ ವಿರುದ್ಧ ಗೆಲುವು

  ಪುರುಷರ ಡಬಲ್ಸ್: 2ನೇ ಸುತ್ತು
  * 7ನೇ ಶ್ರೇಯಾಂಕದ ಮಹೇಶ್ ಭೂಪತಿ/ರೋಹನ್ ಬೋಪಣ್ಣ vs ಎಲ್ಗಿನ್. ಇಸ್ಟೋಮಿನ್
  * ಅಗ್ರ ಶ್ರೇಯಾಂಕದ ಎಂ ಮಿರ್ನಿ/ ನೆಸ್ಟರ್ ಔಟ್. 4-6,4-6,4-6 ನೇರ ಸೆಟ್ ಗಳಲ್ಲಿ ಬ್ರಸಿಯಾಲಿ/ನೊಲೆಗೆ ಶರಣು
  * 2ನೇ ಶ್ರೇಯಾಂಕದ ಬ್ರಯಾನ್ ಸೋದರರು 7-6,6-0,6-2 ರಲ್ಲಿ ಡೆಲ್ಗಾಡೋ/ ಸ್ಕುಪಸ್ಕಿರನ್ನು ಸೋಲಿಸಿದರು.

  ಮಹಿಳೆಯರ ಸಿಂಗಲ್ಸ್ 3ನೇ ಸುತ್ತು
  * ಅಗ್ರ ಶ್ರೇಯಾಂಕದ ಮರಿಯಾ ಶೆರಾಪೊವಾ 6-1,6-4 ರಲ್ಲಿ ಹೆಶಿಹ್ ವಿರುದ್ಧ ಗೆಲುವು
  * ತಮಿರಾ ಪಾಸ್ಜೆಕ್ 2-6,7-6,7-5 ರಲ್ಲಿ ವಿಕ್ ಮೇಯರ್ ಮೇಲೆ ಗೆಲುವು
  * ಅಜರೆಂಕಾ 6-3,6-3 ರಲ್ಲಿ ಸೆಪೆಲೊವಾ ಮೇಲೆ ಗೆಲುವು
  * ಕಿಮ್ ಕ್ಲಿಜಿಸ್ಟರ್ 6-3,3-4 ಜೊವನ್ ರೆವಾ ವಿರುದ್ಧ ನಿವೃತ್ತಿ
  * ರಾದ್ವಾನ್ಕ 6-0,6-2 ರಲ್ಲಿ ವಾಟ್ಸನ್ ಮೇಲೆ ಗೆಲುವು

  ಮಹಿಳೆಯರ ಡಬಲ್ಸ್ 2ನೇ ಸುತ್ತು
  * ಹೂಬರ್/ ರೇಮಂಡ್ 5-7,6-3,6-4 ರಲ್ಲಿ ಡೆಲ್ಲಾಕ್ಯೂ/ ಸ್ಟೋಸುರ್ ಮೇಲೆ ಜಯ
  * ಎರ್ರಾನಿ/ ವಿಂಚಿ 6-1,6-3 ರಲ್ಲಿ ಮೆಕ್ ಹಾಲೆ.ಪಾಶ್ಚೆಕ್ ಮೇಲೆ ಗೆಲುವು
  * 13ನೇ ಶ್ರೇಯಾಂಕ ದ ಸಾನಿಯಾ ಮಿರ್ಜಾ/ ಮೆಟ್ಟೆಕ್ ಸ್ಯಾಂಡ್ 6-3,6-2 ರಲ್ಲಿ ಫರೆಟ್ಜ್ ಗಾಕೊನ್. ಮ್ಲಡೆನೊವಿಕ್ ಮೇಲೆ ಜಯ.
  * ಸೆರೆನಾ ವಿಲಿಯಮ್ಸ್ / ವೀನಸ್ ವಿಲಿಯಮ್ಸ್ 3-6,6-3,0-0 ಕಿರಿಲೆಂಕೊ/ ಪೆಟ್ರೋವಾ ಪಂದ್ಯ ಪ್ರಗತಿಯಲ್ಲಿದೆ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Wimbledon Round Up : The Man who beat Rafael Nadal is also out of tournament. Lukas Rosol lost Saturday to No. 27-seeded Philipp Kohlschreiber, Mahesh Bhupathi and Sania Mirza, the French Open champions, crashed out of the mixed-doubles, losing Australia’s Paul Hanley and Russia’s Alla Kudryavtsev

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more