• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲು

By Mahesh
|
Reservation of tatkal tickets to start from 10 am
ಬೆಂಗಳೂರು, ಜು.1: ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ವಿತರಣೆ ಅವಧಿಯಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಿದೆ. ಜುಲೈ 10 ರಿಂದ ತತ್ಕಾಲ್ ಮುಂಗಡ ಟಿಕೆಟ್ ಬುಕ್ಕಿಂಗ್ ಬೆಳಗ್ಗೆ 8 ಗಂಟೆಗೆ ಬದಲಾಗಿ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಮೊದಲ ಎರಡು ಗಂಟೆ ಅವಧಿಯಲ್ಲಿ ಅಧಿಕೃತ ಏಜೆಂಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಭಾರತೀಯ ರೈಲ್ವೇ ಪ್ರಕಟಣೆ ತಿಳಿಸಿದೆ.

ಈ ಹಿಂದೆ ತತ್ಕಾಲ್ ಟಿಕೆಟ್ ವಿತರಣೆ ಅವಧಿಯನ್ನು ಈ ಹಿಂದಿನ 48 ಗಂಟೆಗೆ ಬದಲಾಗಿ 24 ಗಂಟೆಗಳಲ್ಲಿ ನೀಡಲು ಭಾರತೀಯ ರೈಲ್ವೆ ತೀರ್ಮಾನಿಸಿತ್ತು. ತತ್ಕಾಲ್ ಟಿಕೆಟ್ ರದ್ದು ಮಾಡಿದರೆ ಹಣವಾಪಸ್ ಮಾಡಲಾಗುವುದಿಲ್ಲ ಎಂದು ಕೂಡಾ ರೈಲ್ವೇ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ, ತತ್ಕಾಲ್ ಟಿಕೆಟ್ ಮುಂಗಡ ಬುಕ್ಕಿಂಗ್ ಬೆಳಗ್ಗೆ 8 ಕ್ಕೆ ಬದಲಾಗಿ 10 ಗಂಟೆ ಟ್ರೈನ್ ಹೊರಡುವ ಸ್ಥಳದಿಂದ 24 ಗಂಟೆ ಮೊದಲು ಕಾಯ್ದಿರಿಸಬಹುದಾಗಿದೆ. ರೈಲ್ವೆ ಇಲಾಖೆ ಈ ಪ್ರಾಯೋಗಿಕ ಯೋಜನೆ ಸದ್ಯದಲ್ಲೆ ಜಾರಿಗೆ ತರುವ ನಿರೀಕ್ಷೆಯಿದೆ.

ತತ್ಕಾಲ್ ಟಿಕೆಟ್ ವಿತರಣೆಯಲ್ಲಿ ಇರುವ ಲೋಪದೋಷಗಳು ಅವ್ಯವಸ್ಥೆಯ ಬಗ್ಗೆ ನಾಗರೀಕರು ಅನೇಕ ದೂರುಗಳನ್ನು ನೀಡಿದ ಬಳಿಕ ತತ್ಕಾಲ್ ವ್ಯವಸ್ಥೆ ಬದಲಾಯಿಸಲು ನಿರ್ಧರಿಸಿದ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಈ ಹೊಸ ವ್ಯವಸ್ಥೆಯಿಂದ ಟಿಕೆಟ್ ಬುಕ್ಕಿಂಗ್ ಕೌಂಟರ್ ಗಳಲ್ಲಿ ಒತ್ತಡ ಕಮ್ಮಿಯಾಗಲಿದೆ. ಸಾಮಾನ್ಯದರ ಹಾಗೂ ತತ್ಕಾಲ್ ಟಿಕೆಟ್ ಎರಡನ್ನು ಏಕಕಾಲಕ್ಕೆ ಕಾಯ್ದಿರಿಸಬಹುದಾಗಿದೆ. ತತ್ಕಾಲ್ ಟಿಕೆಟ್ ಗಾಗಿ ಹೆಚ್ಚು ಹೊತ್ತು ಕಾಯುವ ಅಗತ್ಯವಿರುವುದಿಲ್ಲ. ದೊಡ್ಡ ದೊಡ್ಡ ಕ್ಯೂನಲ್ಲಿ ನಿಂತು ಸಮಯ ವ್ಯರ್ಥವಾಗುವುದನ್ನು ತಪ್ಪಿಸಲಾಗುವುದು.

ಅಲ್ಲದೆ, ಇ ಟಿಕೆಟಿಂಗ್ ವೆಬ್ ತಾಣದ ಟ್ರಾಫಿಕ್ ಕೂಡಾ ನಿಯಂತ್ರಣಕ್ಕೆ ಬರಲಿದ್ದು, ಸುಲಭವಾಗಿ ಟಿಕೆಟ್ ಖರೀದಿಸಬಹುದಾಗಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.

ತತ್ಕಾಲ್ ಎಂಬ ಅಪದ್ಬಾಂದವ: ಯೋಜಿತವಲ್ಲದ, ಅನಿರೀಕ್ಷಿತ ಪ್ರಯಾಣಕ್ಕೆ ತತ್ಕಾಲ್ ವರದಾನವಾಗಿದೆ. ಒಂದು ತತ್ಕಾಲ್ ಪಿಎನ್ಆರ್ ನಲ್ಲಿ ಗರಿಷ್ಠ 4 ಟಿಕೆಟ್ ಮಾತ್ರ ಖರೀದಿಸಬಹುದು. ಐಡೆಂಟೆಟಿ ದಾಖಲೆ ಜೊತೆಗಿದ್ದರೆ ಮಾತ್ರ ತತ್ಕಾಲ್ ಟಿಕೆಟ್ ಪಡೆಯಬಹುದಾಗಿದೆ.

ಚಾಲ್ತಿಯಲ್ಲಿರುವ ಮುಂಗಡ ಬುಕ್ಕಿಂಗ್ ಕೌಂಟರ್ ಗಳ ಜೊತೆಗೆ ಹೆಚ್ಚಿನ ತತ್ಕಾಲ್ ಕೌಂಟರ್ ಗಳನ್ನು ಆರಂಭಿಸಲು ರೈಲ್ವೇ ಇಲಾಖೆ ಚಿಂತಿಸಿದೆ. ಸಿಸಿಟಿವಿ ಕೆಮೆರಾಗಳ ಅಳವಡಿಕೆ, ಟಿಕೆಟ್ ನೀಡುವ ಕ್ಲರ್ಕ್ ಗಳಿಗೆ ಮೊಬೈಲ್ ಬಳಕೆ ನಿಷೇಧ, ಪೊಲೀಸ್ ಗಸ್ತು ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಇಲಾಖೆ ಕೈಗೊಳ್ಳಲಿದೆ.

ಸದ್ಯಕ್ಕೆ 2677 ರೈಲುಗಳು 1.71 ಲಕ್ಷ ಬರ್ಥ್ ಗಳಿಗೆ ತತ್ಕಾಲ್ ಸೇವೆ ಲಭ್ಯವಿದೆ. 2011-12ರಲ್ಲಿ ತತ್ಕಾಲ್ ಯೋಜನೆಯೊಂದರಿಂದಲೇ ಇಲಾಖೆಗೆ 847 ಕೋಟಿ ರು ಆದಾಯ ಗಳಿಸಿದೆ. ತತ್ಕಾಲ್ ಯೋಜನೆಯ ಜನಪ್ರಿಯತೆ ಹಾಗೂ ಅವವ್ಯವಸ್ಥೆಯನ್ನು ಅಧ್ಯಯನ ನಡೆಸಿರುವ ಇಲಾಖೆ ಅನೇಕ ಬದಲಾವಣೆಗಳನ್ನು ತರಲು ನಿರ್ಧರಿಸಿದೆ.

ಐದು ದಿನಗಳ ಬದಲಿಗೆ 24 ಗಂಟೆಮೊದಲು ಬುಕ್ಕಿಂಗ್ ಅವಕಾಶ, ವೆಬ್ ಏಜೆಂಟ್ ಗಳಿಗೆ ಮೊದಲ ಒಂದು ಗಂಟೆ ಬುಕ್ಕಿಂಗ್ ನಿರ್ಬಂಧ ಮುಂತಾದ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಈಗ ಟಿಕೆಟ್ ಬುಕ್ಕಿಂಗ್ ಅವಧಿ ಬದಲಾವಣೆಗೆ ಮುಂದಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ರೈಲು ಸುದ್ದಿಗಳುView All

English summary
Indian Railways set to revamped Tatkal scheme from Jul 10, reservation of tatkal tickets will start from 10 am instead of 8 am, no authorised agents will be allowed to book them during the first 2 hours, Railways on Friday said.help reduce pressure on counters booking both general and tatkal tickets at time

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more