ಅಪ್ಪನ ಲಂಚ ಒಪ್ಪಿಕೊಂಡ ರೆಡ್ಡಿ ಜಡ್ಜ್ ಪಟ್ಟಾಭಿ ಪುತ್ರ

ಇದರೊಂದಿಗೆ ಸಿಬಿಐ ಲಕ್ಷ್ಮಿನಾರಾಯಣ ಬೀದಿಸಿದ ಬಲೆಯಲ್ಲಿ ಸರಿಯಾಗಿ ಸಿಕ್ಕಿಹಾಕಿಕೊಂಡಿರುವ ಜನಾರ್ದನ ರೆಡ್ಡಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಿಂದ ಮುಕ್ತಿ ಸಿಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಜತೆಗೆ, ಖದೀಮ ಜಡ್ಜುಗಳು ಕೂಟ ರಚಿಸಿಕೊಂಡು ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ, ಹೇಗೆ ಜಾಮೀನು ದಂಧೆಯಲ್ಲಿ ತೊಡಗುತ್ತಾರೆ ಎಂಬುದೂ ಗೋಚರವಾಗುತ್ತದೆ.
ದುರಂತವೆಂದರೆ ಈ ಖದೀಮರು ಈ ಹಿಂದೆ ತಾವು ಯಾವ ನ್ಯಾಯಪೀಠದಲ್ಲಿ ಕುಳಿತು ತೀರ್ಪುಗಳನ್ನು ನೀಡುತ್ತಿದ್ದರೋ ಅದೇ ನ್ಯಾಯಾಲಯದಲ್ಲಿ ಆರೋಪಿಗಳಾಗಿ ಕಟಕಟೆಯಲ್ಲಿ ನಿಂತಿದ್ದಾರೆ. (ಮೇಲಿನ ಚಿತ್ರದಲ್ಲಿ ತಲೆತಗ್ಗಿಸಿರುವವರು ಜಡ್ಜ್ ಪಟ್ಟಾಭಿ)
'ಮಾಜಿ ಜಡ್ಜಿ ಚಲಪತಿ ರಾವು ಮತ್ತು ರೌಡಿಶೀಟರ್ ಯಾದಗಿರಿ ರಾವು ಒಟ್ಟು 10 ಕೋಟಿ ರುಪಾಯಿ ಲಂಚ ತೆಗೆದುಕೊಂಡಿದ್ದರು' ಎಂದು ರವಿಚಂದ್ರ ಹೇಳಿದ್ದಾರೆ. ಈ ಮಧ್ಯೆ ಚಲಪತಿರಾವು ಸಹ ತಪ್ಪೊಪ್ಪಿಗೆ ನೀಡಿದ್ದು, 'ಪಟ್ಟಾಭಿ ಮತ್ತು ನಾನು LLB ಸಹಪಾಠಿಗಳು. 1987ರಲ್ಲಿ ಆತ ಮುನ್ಸೀಫ್ ಜಡ್ಜ್ ಆಗಿ ನೇಮಕಗೊಂಡ.
ಇನ್ನು ನಚರಾಮ್ ನಿವಾಸಿ ಯಾದಗಿರಿ ರಾವ್ ನನ್ನು 2011ರ ನವೆಂಬರಿನಲ್ಲಿ ಭೇಟಿಯಾದೆ. ಆನಂತರ ಆತ ಆಯೋಜಿಸುತ್ತಿದ್ದ ಮೂಜುಮಸ್ತಿ ಪಾರ್ಟಿಗಳಿಗೆ ರೆಗ್ಯುಲರ್ ಆಗಿ ಹೋಗುತ್ತಿದೆ. ಅದರಿಂದ ನಮ್ಮ ಗೆಳೆತನ ಗಟ್ಟಿಯಾಗುತ್ತಾ ಹೋಯಿತು' ಎಂದು ಹೇಳಿದ್ದಾರೆ.
'2011ರ ಡಿಸೆಂಬರಿನಲ್ಲಿ ACB judge ಆಗಿದ್ದ ಪಟ್ಟಾಭಿಯಿಂದ ತನ್ನ ಗೆಳೆಯ ಸರ್ವೇಶ್ವರ ರೆಡ್ಡಿಗೆ ಜಾಮೀನು ದೊರಕಿಸಿಕೊಡಬೇಕು ಎಂದು petition ಇಟ್ಟರು. ಅದರಂತೆ ನಾನು ಗೆಳೆಯ ಪಟ್ಟಾಭಿಯನ್ನು convince ಮಾಡಿ, ಸರ್ವೇಶ್ವರನ ಜಾಮೀನಿಗೆ ವೀಳ್ಯ ನೀಡಿದೆ. ಅದಕ್ಕಾಗಿ ಯಾದಗಿರಿ ನನಗೆ 1 ಲಕ್ಷ ರು. ಮತ್ತು ಪಟ್ಟಾಭಿಗೆ 10 ಲಕ್ಷ ರು. ನೀಡಿದ' ಎಂದು ನಿವೃತ್ತ ಜಡ್ಜ್ ಸಾಹೇಬ ಚಲಪತಿ ರಾವು ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ.
ಆಮೇಲೆ ಏನಾಯ್ತು ಅಂದರೆ 2012ರ ಏಪ್ರಿಲ್ 23ರಂದು ಪಟ್ಟಾಭಿ ಅವರು CBI courtಗೆ ವರ್ಗವಾದರು. ಮೇ 2 ರಮದು ನನ್ನ ಮೊಬೈಲಿಗೆ ಕರೆ ಮಾಡಿದ ಯಾದಗಿರಿ - CBI courtನಲ್ಲಿ ಜಡ್ಜ್ ಪಟ್ಟಾಭಿ ಎದುರಿಗೆ ಜನಾರ್ದನ ರೆಡ್ಡಿಯ ಜಾಮೀನು ಅರ್ಜಿ ಬಂದಿದೆ. ಜಾಮೀನು ಮಂಜೂರು ಮಾಡಿಸಿದರೆ ಅಪಾರ ಹಣ ಕೊಡಿಸುವುದಾಗಿ- ಆಮಿಷವೊಡ್ಡಿದ. ತಡಮಾಡದೆ 'ನೋಡು. ಗಾಲಿ ರೆಡ್ಡಿಗೆ ಜಾಮೀನು ನೀಡಿದರೆ 10 ಕೋಟಿ ರು. ಸಿಗುತ್ತೆ' ಅಂತ ಗೆಳೆಯ ಪಟ್ಟಾಭಿಗೆ ಹೇಳಿದೆ ಎನ್ನುತ್ತಾರೆ ಮಾಜಿ ಜಡ್ಜಿ ಸಾಹೇಬ ಚಲಪತಿ.
ಆ ಹಂತದಲ್ಲಿಯೇ ಮತ್ತೊಬ್ಬ ಭ್ರಷ್ಟ ವ್ಯಕ್ತಿಯ ಲಂಚಾವತಾರ ಬಿಚ್ಚಿಕೊಳ್ಳುತ್ತದೆ. ಯಾರಪಾ ಆ ಪುಣ್ಯಾತ್ಮ ಅಂದರೆ ಆತನೂ ಇವರಿಬ್ಬರ LLB classmate ಆಗಿದ್ದವನೇ. ನಾಮಧೇಯ ಡಿ. ಪ್ರಭಾಕರ ರಾವ್ ಅಂತ. ಈತ AP Election Commission ಕಾನೂನು ವಿಭಾಗದಲ್ಲಿ ಅಧಿಕಾರಿ. ಈ ಜಡ್ಜ್ ಪ್ರಭಾಕರ ಅದಾಗಲೇ ಜಡ್ಜ್ ಪಟ್ಟಾಭಿಯನ್ನು ಭೇಟಿಯಾಗಿ ಗಾಲಿ ರೆಡ್ಡಿಗೆ ಜಾಮೀನು ಕಲ್ಪಿಸುವ ಬಗ್ಗೆ petition ಇಟ್ಟಿರುತ್ತಾನೆ. ಆದರೆ ಯಾಕೋ, ಏನೋ ಜಡ್ಜ್ ಪಟ್ಟಾಭಿಯು ಪ್ರಭಾಕರನ petition ತಿರಸ್ಕರಿಸಿರುತ್ತಾನೆ. ಬಹುಶಃ ಲಂಚದ ಮೊತ್ತ ಕಡಿಮೆಯಾಗಿದೆ ಎಂದಿರಬಹುದು.
ಆದರೆ ಮೇ 6ರಂದು ಯಾದಗಿರಿ ಹೆಚ್ಚಿನ ಲಂಚದ ಮೊತ್ತದ ಪ್ರಸ್ತಾಪದೊಂದಿಗೆ ಜಡ್ಜ್ ಚಲಪತಿ ಬಳಿ ಬಂದಿರುತ್ತಾನೆ. ಮತ್ತು ಅಷ್ಟೊಂದು ಮೊತ್ತದ ಗಂಟು ನೋಡುತ್ತಿದ್ದಂತೆ ರೆಡ್ಡಿ ಪ್ರಕರಣದ ಆಳ-ಅಗಲ ನೋಡದೆ ಜಡ್ಜ್ ಪಟ್ಟಾಭಿಯು ಗಣಿ ಪ್ರಪಾತದೊಳಕ್ಕೆ ಜಾರಿ ಬೀಳುತ್ತಾನೆ.
ಪ್ರಸ್ತಾವ ಒಪ್ಪಿತವಾದ ಮೇಲೆ ಮೇ 10ರಂದು ಪಟ್ಟಾಭಿಯ ಮಗ ರವಿಚಂದ್ರನನ್ನು ಮಸಬ್ ಟ್ಯಾಂಕ್ ಬಳಿಗೆ ಬರುವಂತೆ ಸೂಚಿಸಿದೆ. ಅಲ್ಲಿ ರವಿಯು ಗಾಲಿ ರೆಡ್ಡಿ ಬಂಧುಗಳನ್ನು ಭೇಟಿಯಾಗುತ್ತಾನೆ. ತದನಂತರ ನನಗೆ ಕರೆ ಮಾಡಿದ ಜಡ್ಜ್ ಪಟ್ಟಾಭಿ ಎಲ್ಲ ಓಕೆ ಎನ್ನುತ್ತಾ ಜಾಮೀನು ನೀಡಲು ಮನಸು ಮಾಡುತ್ತಾರೆ ಎಂದು ನಿವೃತ್ತ ಜಡ್ಜ್ ಸಾಹೇಬ ಚಲಪತಿ ರಾವು ತಪ್ಪೊಪ್ಪಿಗೆಯಲ್ಲಿ ಜಾಮೀನು ಲಂಚ ಪುರಾಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಕೊನೆಗೆ ಮೇ 11ರ ಮಹಾದಿನ ಬಂದೇ ಬಿಟ್ಟಿತು. ಬೆಳಗ್ಗೆ 9.45ಕ್ಕೆ ಜಡ್ಜ್ ಪಟ್ಟಾಭಿ ನನಗೆ ಕರೆ ಮಾಡಿದವನೇ 'ಗಾಲಿ ರೆಡ್ಡಿಗೆ ಇಂದು ಜಾಮೀನು ನೀಡುವೆ' ಎಂದು ಘೋಷಿಸಿದ. ಆದಕ್ಕೆ ನಾನೂ ಹೇಳಿದೆ. ಲಂಚದ ಹಣವೆಲ್ಲ ಬ್ಯಾಂಕ್ ಲಾಕರುಗಳಲ್ಲಿ ಸೇಫ್ ಆಗಿದೆ. ಜಾಮೀನು ಸಿಗುತ್ತಿದ್ದಂತೆ ಲಾಕರುಗಳ ಕೀಯನ್ನು ಮಗ ರವಿಗೆ ಹಸ್ತಾಂತರಿಸುವುದಾಗಿ ಪ್ರಕಟಿಸಿದೆ ಎಂದಿದ್ದಾನೆ ಪುಣ್ಯಾತ್ಮ ನಿವೃತ್ತ ಜಡ್ಜ್ ಸಾಹೇಬ ಚಲಪತಿ ರಾವು. ಮುಂದ !? KMF ಸೋಮಶೇಖರ ರೆಡ್ಡಿಯೇ ಹೇಳಬೇಕು ಏನೆಲ್ಲ ಆಯ್ತು ಅಂತ!
ಮರೆತ ವಿಷಯ: ಜಡ್ಜ್ ಪಟ್ಟಾಭಿ ಲಂಚ ತಿಂದು ಜಾಮೀನು ನೀಡುವುದನ್ನೇ ಉಪ ಕಸುಬಾಗಿಸಿಕೊಂಡಿರುತ್ತಾನೆ. ಒಮ್ಮೆ ಅಕ್ರಮ ಆಸ್ತಿ ಪ್ರಕರಣವೊಂದರಲ್ಲಿ ಎಂ ಸರ್ವೇಶ್ವರ ರೆಡ್ಡಿ ಎಂಬ ಕಳಂಕಿತ ಪೊಲೀಸ್ ಅಧಿಕಾರಿಗೆ ಜಾಮೀನು ನೀಡಲು ಇದೇ ಜಡ್ಜ್ ಸಾಹೇಬ 10 ಲಕ್ಷ ರುಪಾಯಿ ಲಂಚ ಮುಟ್ಟಿರುತ್ತಾನೆ.












Click it and Unblock the Notifications