ಸೂಪರ್ ಮಾರಿಯೋ ಡಬ್ಬಲ್ ಡಿಚ್ಚಿಗೆ ಜರ್ಮನ್ ಶರಣು

Striker Mario Balotelli
ವಾರ್ಸಾ, ಜೂ.29: ಯುರೋ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಮೂರು ಬಾರಿ ಚಾಂಪಿಯನ್ ಜರ್ಮನಿ ಮೊಟ್ಟಮೊದಲ ಬಾರಿಗೆ ಇಟಲಿಯನ್ನು ಮಣಿಸುವ ಕನಸು ನುಚ್ಚುನೂರಾಗಿದೆ.

ಮರಿಯೋ ಬಲೊಟೆಲ್ಲಿ ಆಕರ್ಷಕ ಆಟದ ನೆರವಿನಿಂದ ಸೋಲರಿಯದ ಸರದಾರರಾಗಿದ್ದ ಜರ್ಮನಿ ವಿರುದ್ಧ 2-1ರ ಗೆಲುವು ದಾಖಲಿಸಿಕೊಂಡ ಇಟಲಿ ಯುರೋ ಕಪ್ ನ ಫೈನಲಿಗೆ ಪ್ರವೇಶ ಪಡೆದಿದ್ದು, ಫೈನಲಿನಲ್ಲಿ ಸ್ಪೇನ್ ವಿರುದ್ಧ ಕಪ್ ಗಾಗಿ ಸೆಣಸಲಿದೆ.

ಜರ್ಮನಿಯ ದಾಳಿ ಹಾಗೂ ಇಟಲಿಯ ಖ್ಯಾತ ಸಿಸಿಲಿಯನ್ ಡಿಫೆನ್ಸ್ ನಡುವಿನ ಹೋರಾಟ ನೋಡಲು ಪ್ರೇಕ್ಷಕರನ್ನು ರಂಜಿಸಿದೆ.

ಬಲೊಟೆಲ್ಲಿ ಮೊದಲು ಹೆಡ್ಡರ್ ಮೂಲಕ ಇಟಲಿಗೆ ಮುನ್ನಡೆಯನ್ನು ಒದಗಿಸಿಕೊಟ್ಟರು. ಇದರ ಬಳಿಕ ಮತ್ತೊಂದು ಗೋಲು ಬಾರಿಸಿ ಜರ್ಮನಿಯನ್ನು ಮನೆಗೆ ಅಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇಟಲಿ ದ್ವಿತೀಯಾರ್ಧದಲ್ಲಿ ಮತ್ತಷ್ಟು ಅವಕಾಶಗಳನ್ನು ಪಡೆದುಕೊಂಡಿತ್ತು. ಆದರೆ ಗೋಲು ಬಾರಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಜರ್ಮನಿ ಫಾರ್ವರ್ಡ್ ಆಟಗಾರರು ಗೋಲು ಬಾರಿಸಲು ಸತತ ಪ್ರಯತ್ನ ಮಾಡಿದ್ದರಿಂದ ಇಟಲಿಗೆ ಹೆಚ್ಚಿನ ಅವಕಾಶ ಸಿಕ್ಕಿತು.

21 ವರ್ಷದ ಬಲೊಟೆಲ್ಲಿ 20ನೇ ನಿಮಿಷದಲ್ಲಿ ಹೆಡ್ಡರ್ ಮೂಲಕ ಇಟಲಿಗೆ ಮುನ್ನಡೆಯನ್ನು ಒದಗಿಸಿಕೊಟ್ಟರು. ಇದರ ಬಳಿಕ 36ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಜರ್ಮನಿಗೆ ಚೇತರಿಸಲಾರದಂತಹ ಹೊಡೆತ ನೀಡಿದರು.

ಜರ್ಸಿ ಬಿಚ್ಚಿ ಸಂಭ್ರಮಿಸಿ, ಹಳದಿ ಕಾರ್ಡ್ ಪಡೆದರು. ಕಸ್ಸಾನೋ, ಪಿರ್ಲೊ ಜೊತೆಯಾಟದಿಂದ ಮರಿಯೋ ಸೂಪರ್ ಆಟ ನೀಡಿದರು.

ಮೆಸಟ್ ಓಜಿಲ್ ಪೆನಾಲ್ಟಿಯಲ್ಲಿ ಬಾರಿಸಿದ ಗೋಲಿನಿಂದ ಜರ್ಮನಿ ತನ್ನ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು. ಜರ್ಮನಿ ಸತತ ಎರಡನೇ ಸಲ ಮಹತ್ವದ ಟೂರ್ನಮೆಂಟ್ ನಿಂದ ಹೊರಬಿದ್ದಿದೆ.

ಈ ಟೂರ್ನಮೆಂಟ್ ನಲ್ಲಿ ಸೋಲನ್ನೇ ಕಾಣದ ಜರ್ಮನಿ ಇಟಲಿಯ ರಕ್ಷಣಾ ವಲಯವನ್ನು ಭೇದಿಸಲಾಗದೆ ಸೋಲುಂಡಿದೆ. ಈ ಸೋಲಿನಿಂದ ಮಹತ್ವದ ಟೂರ್ನಮೆಂಟ್ ನಲ್ಲಿ ಪ್ರಶಸ್ತಿ ಗೆಲ್ಲುವ ಜರ್ಮನಿಯ ಆಸೆಗೆ ಮತ್ತೊಮ್ಮೆ ಇಟಲಿ ತಣ್ಣೀರೆರಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+