ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರು. 9498 ಕೋಟಿ ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು

By Mahesh
|
Google Oneindia Kannada News

BBMP Budget 2012-13
ಬೆಂಗಳೂರು, ಜೂ.28: ನಗರಾಭಿವೃದ್ಧಿ, ಆರೋಗ್ಯ, ರಸ್ತೆ ದುರಸ್ತಿ ಮೇಲೆ ಕಾಳಜಿ ವಹಿಸಿ 2012-13ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡಿಸಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 11.40ಕ್ಕೆ ಸರಿಯಾಗಿ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆಎ ಮುನೀಂದ್ರ ಕುಮಾರ್ ಅವರು ಬಜೆಟ್ ಮಂಡಿಸಿದರು.

ಚುನಾವಣಾ ದೃಷ್ಟಿಯಿಂದ ಹೆಚ್ಚು ತೆರಿಗೆ ಇಲ್ಲದ ಜನಪರ ಬಜೆಟ್ ಮಂಡಿಸಲಾಗಿದೆ. ಬಜೆಟ್ ಗಾತ್ರ 9,498 ಕೋಟಿ ರು.ಗೂ ಅಧಿಕ ಗಾತ್ರದ ಬಜೆಟ್ ಅನ್ನು ಉಳಿತಾಯದ ಬಜೆಟ್, ಜನಸ್ನೇಹಿ ಬಜೆಟ್ ಎಂದು ಮೇಯರ್ ವೆಂಕಟೇಶ್ ಮೂರ್ತಿ ಕೊಂಡಾಡಿದ್ದಾರೆ.

ಗೃಹ ಸಚಿವ ಆರ್ ಅಶೋಕ್, ಮೇಯರ್ ಡಿ ವೆಂಕಟೇಶ ಮೂರ್ತಿ, ಆಡಳಿತ ಪಕ್ಷದ ನಾಯಕ ಎನ್ ನಾಗರಾಜ್, ಉಪ ಮೇಯರ್ ಎನ್ ಶ್ರೀನಿವಾಸ್ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಂಡಲ್ ಬಜೆಟ್: ಬಿಜೆಪಿ ಆಡಳಿತ ಮಂಡಿಸಿರುವ ಬಜೆಟ್ ಫುಲ್ ಬಂಡಲ್. ಯಾವುದೇ ಪಾರದರ್ಶಕತೆ ಇಲ್ಲದೆ ಕೇವಲ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಬಜೆಟ್ ಆಗಿದೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೆ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ನಾಯಕ ಎಂಕೆ ಗುಣ ಶೇಖರ್ ಅಭಿಪ್ರಾಯಪಟ್ಟಿದ್ದಾರೆ.ಥಿತರಿದ್ದರು.

ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮುಖ್ಯಾಂಶಗಳು ಇಂತಿದೆ:
* ಜಯನಗರದಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ 6 ಕೋಟಿ ರು ಅನುದಾನ
* ತಳ್ಳುವ ಗಾಡಿ ಖರೀದಿ ಮಾಡುವವರಿಗೆ 5 ಕೋಟಿ.
* 500 ಬಡ ನೌಕರರಿಗೆ ಸ್ವಾವಲಂಬಿಯಾಗಲು 5 ಕೋಟಿ ರು (ಹೊಸ ಯೋಜನೆ)
* ನಿರೋಧಕ ಲಸಿಕೆಗಾಗಿ 5 ಕೋಟಿ ರು ಮೀಸಲು.
* ವಾಜಪೇಯಿ ಆರೋಗ್ಯ ಶ್ರೀ ಕಾರ್ಯಕ್ರಮ ಮುಂದುವರಿಕೆಗೆ 20 ಕೋಟಿ
* ಪ್ರತಿ ವಲಯದಲ್ಲಿ ಡಯಾಲಿಸಿಸ್ ಸೆಂಟರ್ ತೆರೆಯಲು 6 ಕೋಟಿ
* ಹೆರಿಗೆ ಮತ್ತು ರೆಫ್ರಲ್ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಉಚಿತ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೇವೆ
* ಬಿಬಿಎಂಪಿ ಹೊಸದಾಗಿ ಸೇರ್ಪಡೆಗೊಂಡ 110 ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಬೀದಿ ದೀಪ ಅಳವಡಿಕೆಗೆ 25 ಲಕ್ಷ
* ಕೆರೆಗಳ ಒತ್ತುವರಿ ತೆರವು ಮತ್ತು ಅಭಿವೃದ್ಧಿಗೆ 158 ಕೋಟಿ
* ಹೊಸ ವಲಯಗಳ 13 ರಸ್ತೆ ಅಗಲೀಕರಣಕ್ಕೆ 60 ಕೋಟಿ
* ಒಂದು ಸಾವಿರ ಕೋಟಿ ರು.ಗಳ ವಿಶೇಷ ಯೋಜನೆಯಡಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಘನತ್ಯಾಜ್ಯ ಘಟಕ, ಮಾರುಕಟ್ಟೆ ಸ್ವಯಂಚಾಲಿತ ವಾಹನ ನಿಲುಗಡೆ, ಬಸ್ ತಂಗುದಾಣ, ಕ್ರೀಡಾ ಸಂಕೀರ್ಣ ನಿರ್ಮಾಣ,
* ವಾಹನ ದಟ್ಟಣೆ ಗಮನದಲ್ಲಿಟ್ಟುಕೊಂಡು 52.5 ಕಿ.ಮೀ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ 426 ಕೋಟಿ
* ಪಾಲಿಕೆ ವ್ಯಾಪ್ತಿಯಲ್ಲಿ 3.75 ಲಕ್ಷ ಸಸಿ ನೆಡಲು 8 ಕೋಟಿ
* ಬೆಂಗಳೂರು 8 ದಿಕ್ಕುಗಳಲ್ಲಿ ಹೆಬ್ಬಾಗಿಲು ನಿರ್ಮಾಣ
* ಪಾಲಿಕೆಯ ಆಸ್ತಿ ಸರಂಕ್ಷಣೆಗೆ 10 ಕೋಟಿ ರು ಮೀಸಲು.
* ಬೀದಿ ನಾಯಿಗಳ ರಕ್ಷಣೆಗಾಗಿ 1 ಲಕ್ಷ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ.
* ಆಸ್ತಿ ತೆರಿಗೆ ಸಂಗ್ರಹಣೆಗೆ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿ ಕೋಶ.
* ಸಕಾಲ ಯೋಜನೆಯಡಿ ವ್ಯಾಪಾರಿ ಅನುಮತಿ ಪತ್ರ(trade license) ಪಡೆಯಲು 28 ವಿತರಣಾ ಕೇಂದ್ರಗಳ ಸ್ಥಾಪನೆ.
* OFC ಕೇಬಲ್ ಗಳ ಅಳವಡಿಕೆಗೆ ಶಾಶ್ವತ ರಸ್ತೆ ಸಂಖ್ಯೆ ಕಡ್ಡಾಯ.
* ಮಲ್ಲೇಶ್ವರಂನಲ್ಲಿ ನೂತನ ಡಾಟಾ ಸೆಂಟರ್ ನಿರ್ಮಾಣ.
* ಅವಶ್ಯವಿರುವ 10 ಕಡೆ ಬಹುಮಹಡಿ ವಾಹನ ನಿಲ್ದಾಣ ನಿರ್ಮಾಣಕ್ಕೆ 200 ಕೋಟಿ
* ಪ್ರತಿ ವಾರ್ಡಿನ 100 ಮಂದಿ ಬಡವರಿಗೆ ಅಡುಗೆ ಅನಿಲ ಸಂಪರ್ಕ ಹಾಗೂ ಸ್ಟವ್ ಗೆ 10 ಕೋಟಿ(ದಿವಂಗತ ಸಚಿವ ವಿಎಸ್ ಆಚಾರ್ಯ ಅವರ ಸ್ಮರಣೆಯಲ್ಲಿ ಯೋಜನೆ)
* ಮಹಿಳಾ ಸದಸ್ಯರಿರುವ ವಾರ್ಡ್ ಗಳಿಗೆ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಕ್ಕೆ 3.50 ಕೋಟಿ.
* ಆಟೋರಿಕ್ಷಾ ಚಾಲಕರಿಗೆ ಹೊಸ ಡಿಜಿಟಲ್ ಮೀಟರ್ ಅಳವಡಿಸಲು ಸಾರಥಿ ಹೆಸರಿನಲ್ಲಿ ಹಣಕಾಸು ಸಹಾಯ.

English summary
The BBMP budget for the financial year 2012-13 presented on June 28 by Taxation and finance committee chairman KA Muneendra Kumar at the council hall, The size of the budget was around Rs 9,498 crore. Health measures, launching Data centers, intiating Sakala are the main highlights of the Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X