ಪತ್ರಕರ್ತ, ಪೊಲೀಸರ ಜೊತೆ ಉಡುಪಿ ಪ್ರೆಸ್ ಡೇ

ಉಡುಪಿಯ ಬ್ರಹ್ಮಗಿರಿ ನಾಯರ್ ಕೆರೆ ಐಎಂಎ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಭ್ಯಾಗತರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಜಿಲ್ಲಾ ಪತ್ರಕರ್ತ ಸಂಘದ ಸದಸ್ಯರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ. ಮಧ್ಯಾಹ್ನ 12.30 ರಿಂದ 1.30 ಅವಧಿಯಲ್ಲಿ ಕಟಪಾಡಿ ಪ್ರಕಾಶ ಸುವರ್ಣ ನಿರ್ದೇಶನದ ಭಾಗ್ಯ ತುಳು ಚಲನಚಿತ್ರ ಪ್ರದರ್ಶನವಿರುತ್ತದೆ.
ಕಾರ್ಯಕ್ರಮದ ವಿವರ:
ಉದ್ಘಾಟನೆ: ಆಶಾ ಕೃಷ್ಣಸ್ವಾಮಿ, ವಿಶೇಷ ವರದಿಗಾರರು, ಡೆಕ್ಕನ್ ಹೆರಾಲ್ಡ್, ಬೆಂಗಳೂರು
ಅಭ್ಯಾಗತರು: ಡಾ. ಬೋರಲಿಂಗಯ್ಯ ಎಂ.ಬಿ, ಐಪಿಎಸ್, ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ
ಉಪನ್ಯಾಸ: ಎಸ್ ಕೆ ಶಾಮ ಸುಂದರ, www.kannada.oneindia.com ಸಂಪಾದಕರು
ಅಧ್ಯಕ್ಷತೆ: ಕಿರಣ್ ಮಂಜನಬೈಲು, ಅಧ್ಯಕ್ಷ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ
ಸಂಘದ ಸದಸ್ಯರೆಲ್ಲರೂ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ತಮ್ಮ ಆಗಮನದ ನಿರೀಕ್ಷೆಯಲ್ಲಿ
* ಜಯಕರ ಸುವರ್ಣ, ಕಾರ್ಯದರ್ಶಿ
* ಉಮೇಶ್ ಮಾರ್ಪಳ್ಳಿ, ಕೋಶಾಧಿಕಾರಿ
* ಕಿರಣ್ ಮಂಜನಬೈಲು, ಅಧ್ಯಕ್ಷ
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸರ್ವ ಸದಸ್ಯರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ.












Click it and Unblock the Notifications