ಮಾವು ಕೀಳಲು ಹೋದ ಬಾಲೆ ಹರಿದು ಮುಕ್ಕಿಬಿಟ್ಟರು

ಅಪ್ರಾಪ್ತವಯಸ್ಕ ಬಾಲಕಿಯ ಮೇಲೆ ಕುಡಿದ ಅಮಲಿನಲ್ಲಿ ಇಬ್ಬರು ಅತ್ಯಾಚಾರವೆಸಗಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಅವರ ಪಾಪಕೃತ್ಯ ಕಂಡು ತಾಲೂಕು ಬೆಚ್ಚಿಬಿದ್ದಿದೆ. ಪೋಷಕರು ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರೆಯುತ್ತಿದ್ದಾರೆ.
ಆನೇಕಲ್ ತಾಲೂಕಿನ ಯಡವನಹಳ್ಳಿ ಸಮೀಪದಲ್ಲಿರುವ ಅಬ್ಬಯ್ಯನ ಪಾಳ್ಯದಲ್ಲಿ ಈ ದುರ್ಘಟನೆ ನಡೆದಿದೆ. ಅತ್ಯಾಚಾರಕ್ಕೊಳಗಾಗಿರುವ ಬಾಲಕಿಯನ್ನು ಐದರ ಹರೆಯದ ಸಂಜನಾ ಎನ್ನಲಾಗಿದೆ.
ಅಂಗನವಾಡಿ ಶಾಲೆ ಮುಗಿಸಿ ತನ್ನೂರಿಗೆ ನಡೆದು ಬರುವ ದಾರಿಯ ಪಕ್ಕದಲ್ಲೇ ಮಾವಿನ ತೋಪಿದೆ. ಮಾವಿನ ತೋಪಿನಲ್ಲಿನ ಉದುರಿದ ಮಾವಿನ ಹಣ್ಣನ್ನು ಹೆಕ್ಕಿ ತರಲು ಶಾಲಾ ಸ್ನೇಹಿತರೊಂದಿಗೆ ತೆರಳಿದ್ದಾಳೆ.
ಆದರೆ, ದುರದೃಷ್ಟಕ್ಕೆ ಅಲ್ಲೇ ಕುಡಿದು ಕುಳಿತಿದ್ದ ಮಧು ಮತ್ತು ವಿಜಯ್ ಎಂಬವರು ಬಾಲಕಿಯನ್ನು ಕಂಡು ಕಾಮನೆ ಕೆರಳಿಸಿಕೊಂಡು ಆಕೆಯನ್ನು ಹೊತ್ತೊಯ್ದಿದ್ದಾರೆ. ಮಾವಿನ ತೋಪಿನ ಮರೆಯಲ್ಲಿ ಆಕೆಯನ್ನು ಹೊತ್ತೊಯ್ಯುವುದನ್ನು ಸಂಜನಾಳಾ ಸಹಪಾಠಿಗಳು ನೋಡಿದ್ದಾರೆ.
ಘಟನೆಯ ಬಳಿಕ ಬಾಲಕಿ ಸಂಜನಾ ಅಳುತ್ತಾ ಅಸ್ವಸ್ಥಗೊಂಡು ಮನೆಗೆ ಹಿಂತಿರುಗಿದ್ದಾಳೆ. ನಡೆಯಲು ಆಗದಂತೆ ತಡವರಿಸುತ್ತಿದ್ದ ಮಗಳನ್ನು ಕಂಡ ಪೋಷಕರಿಗೆ ವಿಷಯ ಅರ್ಥವಾದಾಗ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಆಗಿದೆ.
ಕೂಡಲೇ ಬಾಲಕಿಯನ್ನು ಆನೇಕಲ್ ಸರಕಾರಿ ಆಸ್ಪತ್ರೆಗೆ ಕರೆದೊಯ್ದ, ಚಿಕಿತ್ಸೆ ನೀಡಲಾಗಿದೆ. ಬಾಲಕಿ ಸ್ಥಿತಿ ಇನ್ನೂ ಗಂಭೀರವಾಗಿದ್ದ ಕಾರಣ ವಾಣಿ ವಿಲಾಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಅತ್ತಿಬೆಲೆ ಪಿಎಸ್‌ಐ ವಿರೂಪಾಕ್ಷ ಅವರು ಪ್ರಕರಣ ದಾಖಲಿಸಿಕೊಂಡು ಮಧು ಹಾಗೂ ವಿಜಯ್ ಎಂಬ ಇಬ್ಬರು ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಏನು ಮಾಡಿದೆವು ಎಂದು ಗೊತ್ತಿಲ್ಲ ಎಂದು ಆರೋಪಿ ಮಧು ಹೇಳಿಕೆ ನೀಡಿದ್ದಾನೆ. ಖಾಸಗಿ ಬಸ್ ನಲ್ಲಿ ಕಂಡಕ್ಟರ್ ಆಗಿ ಮಧು ಕೆಲ ಕಾಲ ಕೆಲಸ ಮಾಡುತ್ತಿದ್ದ. ಆತನ ಮೇಲೆ ಈಗಾಗಲೇ ಹಲವು ಅಪರಾಧ ಪ್ರಕರಣಗಳು ದಾಖಲಾಗಿದೆ. ಬಾಲಕಿಯನ್ನು ತೋಪಿನೊಳಗೆ ಹೊತ್ತೊಯ್ಯುವಾಗ ತೋಟದ ಕಾವಲುಗಾರರು ಪ್ರಶ್ನಿಸಿದ್ದಾರೆ, ಬಾಲಕಿಯನ್ನು ಬಿಟ್ಟು ಬಿಡುವಂತೆ ಆಗ್ರಹಿಸಿದ್ದಾರೆ. ಆದರೆ, ಈ ಇಬ್ಬರು ದುಷ್ಕರ್ಮಿಗಳು ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ ಎಂದು ಪೊಲೀಸರು ವಿವರಿಸಿದರು.
ಅತ್ಯಾಚಾರಕ್ಕೊಳಗಾದ ಬಾಲಕಿಯ ಪೋಷಕರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಉಳಿಗೆರೆ ಗ್ರಾಮದವರು. ಕೂಲಿ ಕೆಲಸ ಅರಸಿಕೊಂಡು ಬೆಂಗಳೂರಿನ ಆನೇಕಲ್ ತನಕ ಬಂದವರು ಇಲ್ಲೇ ನೆಲೆಸಿದ್ದಾರೆ.












Click it and Unblock the Notifications