ಕತ್ತೆಭಾರ ಹೊತ್ತ ಸದಾ ತಲೆಗೆ ಮತ್ತೆರಡು ಖಾತೆಗಳು

ಜಿ ಕೆಟಗೆರಿ ನಿವೇಶನ ಲಾಭದ ಆರೋಪ ಹೊತ್ತು ಶನಿವಾರ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಸಿಎಂ ಸದಾನಂದ ಗೌಡ ಅವರು ರಾಜೀನಾಮೆ ಅಂಗೀಕರಿಸಿಲ್ಲ. ಸುರೇಶ್ ಕುಮಾರ್ ಅವರು ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಕಮ್ಮಿಯಾಗಿರುವುದರಿಂದ ಅನಿವಾರ್ಯವಾಗಿ ಸದಾನಂದ ಅವರ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು 21 ಖಾತೆಗಳ ಭಾರವನ್ನು ಹೆಗಲ ಮೇಲಿಂದ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಂಪುಟ ವಿಸ್ತರಣೆಗೆ ಮುಂದಾದರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕದೆ ಗಾಡಿ ಮುಂದಕ್ಕೆ ಹೋಗುತ್ತಿಲ್ಲ. ಮುಖ್ಯಮಂತ್ರಿ ಸದಾನಂದ ಅವರ ಬಳಿ ಈಗಾಗಲೇ ವಿತ್ತ, ಆರೋಗ್ಯ, ಉನ್ನತ ಶಿಕ್ಷಣ, ಪ್ರಸಾರ ಹಾಗೂ ಮಾಹಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಮುಂತಾದ ಪ್ರಮುಖ ಖಾತೆಗಳಿದೆ. ಸಚಿವ ಸಂಪುಟ ಸದಸ್ಯರ ಸಂಖ್ಯೆಗಿಂತ ಸದಾನಂದರು ಹೊತ್ತಿರುವ ಖಾತೆಗಳ ಸಂಖ್ಯೆಯೇ ಅಧಿಕವಾಗುವ ಅಪರೂಪದ ಪ್ರಸಂಗ ಎದುರಾಗಲಿದೆ.
ಈ ಎಲ್ಲಾ ಜಂಜಾಟಗಳಿಂದ ಸದಾ ನಗುತ್ತಲೇ ಇದ್ದ ಸದಾನಂದ ಅವರ ಮುಖದಲ್ಲಿ ಈಗ ನಗು ಕೂಡ ಈ ನಡುವೆ ಮಾಯವಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಮತ್ತೆ ಬಂಡಾಯ ಭುಗಿಲೇಳುವ ಸಾಧ್ಯತೆ ಇರುವ ಕಾರಣ ವರಿಷ್ಠರು ಕೂಡ ಇದುವರೆಗೆ ಹಸಿರು ನಿಶಾನೆ ನೀಡಿಲ್ಲ ಎನ್ನಲಾಗುತ್ತಿದೆ.
ಹಣಕಾಸು, ಕಂದಾಯ, ಗುಪ್ತಚರ, ಆರೋಗ್ಯ, ಗಣಿಗಾರಿಕೆ, ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಮುಜರಾಯಿ, ಮೂಲ ಸೌಕರ್ಯ, ಯುವಜನ ಸೇವೆ ಮತ್ತು ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಹಕಾರ, ಪರಿಸರ, ಮೀನುಗಾರಿಕೆ, ಯೋಜನೆ, ವಾರ್ತಾ ಇಲಾಖೆ, ಬೆಂಗಳೂರು ಅಭಿವೃದ್ಧಿ, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ವಕ್ಫ್ ಮತ್ತು ಹಜ್ ಇಲಾಖೆ ಬಾಕಿ ಉಳಿದ ಎಲ್ಲಾ ಖಾತೆಗಳು ಸದಾನಂದ ಗೌಡರ ಕೈಲಿದೆ. ಇದರ ಜೊತೆಗೆ ಕಾನೂನು ಖಾತೆಯ ಹೊಣೆ ಹೊರಬೇಕಾಗಿದೆ.
ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಜನ ಶಾಸಕರನ್ನು ಒಟ್ಟುಗೂಡಿಸಿ ಮೊದಲ ಹಂತದಲ್ಲಿ 21 ಜನ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಡಿವಿ ಸದಾನಂದ ಗೌಡರು ಸೇರಿಸಿಕೊಂಡಿದ್ದು ಇಲ್ಲಿ ಸ್ಮರಿಸಬಹುದು.












Click it and Unblock the Notifications