• search

ಗಿಲಾನಿ ಔಟ್, ಪಾಕ್ ಪ್ರಧಾನಿಯಾಗಿ ಮುಖ್ತಾರ್?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Syed Yusuf Raza Gilani
  ಇಸ್ಲಾಮಾಬಾದ್, ಜೂ.20: ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೆ ಮುಖದೂಮ್ ಶಹಾಬುದ್ದೀನ್ ಹಾಗೂ ಚೌಧುತಿ ಅಹ್ಮದ್ ಮುಖ್ತಾರ್ ನಡುವೆ ತೀವ್ರ ಪೈಪೋಟಿ ನಡೆದಿದೆ ಎಂದು ನ್ಯೂಸ್ ಇಂಟರ್ ನ್ಯಾಷನಲ್ ವರದಿ ಮಾಡಿದೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ಏ.26ರಿಂದ ಅನ್ವಯವಾಗುವಂತೆ ಯುಸೂಫ್ ರಾಜಾ ಗಿಲಾನಿ ಅವರನ್ನು ಪ್ರಧಾನಿ ಪಟ್ಟದಿಂದ ಅನರ್ಹಗೊಳಿಸಿ ಮಂಗಳವಾರ(ಜೂ.19) ಆದೇಶ ಹೊರಡಿಸಿತ್ತು.

  ಗಿಲಾನಿ ಅನರ್ಹತೆಯಿಂದ ತೀವ್ರ ರಾಜಕೀಯ ಅಸ್ಥಿರತೆಗೆ ಒಳಗಾಗಿರುವ ಪಾಕಿಸ್ತಾನಕ್ಕೆ ಹೊಸ ಸಮರ್ಥ ಪ್ರಧಾನಿ ಬೇಕಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸಂಸದೀಯ ಸಭೆ ನಂತರ ಹಾಲಿ ಜವಳಿ ಖಾತೆ ಸಚಿವ ಶಹಾಬುದ್ದೀನ್ ಹಾಗೂ ನೀರಾವರಿ ಮತ್ತು ಇಂಧನ ಖಾತೆ ಸಚಿವ ಚೌಧುರಿ ಅಹ್ಮದ್ ಮುಖ್ತಾರ್ ಅವರ ಹೆಸರು ಕೇಳಿ ಬಂದಿದೆ. ಈ ಪೈಕಿ ಮುಖ್ತಾರ್ ಅವರು ಈ ಮುಂಚೆ ರಕ್ಷಣಾ ಖಾತೆ ಸಚಿವರಿಗಿದ್ದರು. ಹೀಗಾಗಿ ಮುಖ್ತಾರ್ ಅವರ ಆಯ್ಕೆ ಸಾಧ್ಯತೆ ಹೆಚ್ಚಿದೆ.

  ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ವಿಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ರಾಷ್ಟ್ರಪತಿ ಆಸೀಫ್ ಅಲಿ ಜರ್ದಾರಿ ವಿರುದ್ಧ ಪ್ರಕರಣ ಪುನರ್ ಆರಂಭಿಸಲು ಗಿಲಾನಿ ಈ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.

  ಗಿಲಾನಿ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪವಿದ್ದರೂ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿರುವ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಕ್ರಮದ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ಪ್ರಕಟಿಸಿದೆ.

  ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಗೀಲಾನಿಯವರನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದ (ಎಪ್ರಿಲ್ 26) ದಿನ ದಿಂದಲೇ ಅವರು ಪ್ರಧಾನಿ ಹುದ್ದೆಗೆ ಅನರ್ಹರಾಗಿದ್ದಾರೆ ಎಂದು ತೀರ್ಪು ತಿಳಿಸಿದೆ. ಇದೇ ವೇಳೆ ನೂತನ ಪ್ರಧಾನಿಯನ್ನು ನೇಮಿಸುವಂತೆ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

  ಸುಪ್ರೀಂಕೋರ್ಟ್‌ನ ಈ ಕ್ರಮವನ್ನು ಸ್ವಾಗತಿಸಿರುವ ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ಮೈತ್ರಿ ಕೂಟದ ಜೊತೆಗೆ ಚರ್ಚಿಸಿ ನೂತನ ಪ್ರಧಾನಿಯನ್ನು ನೇಮಿಸುವುದಾಗಿ ತಿಳಿಸಿದೆ. ಪ್ರಧಾನಿ ಗಿಲಾನಿಯವರನ್ನು ಅನರ್ಹಗೊಳಿಸಿ ಸುಪ್ರೀಂ ತೀರ್ಪು ನೀಡಿದ ಬೆನ್ನಲ್ಲೇ, ಪಿಪಿಪಿಯ ಕೇಂದ್ರೀಯ ಕಾರ್ಯಸಮಿತಿಯು ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

  ಗಿಲಾನಿ ರಾಜೀನಾಮೆ ನೀಡಲು ಒಪ್ಪದಿದ್ದರೆ, ಅವರನ್ನು ಕಚೇರಿಯಿಂದ ಹೊರದಬ್ಬಿ ಪ್ರಜಾಪ್ರಭುತ್ವ ಕಾಯ್ದುಕೊಳ್ಳುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ಸುಪ್ರೀಂಕೋರ್ಟ್ ನೀಡಿದೆ. ಗಿಲಾನಿ ಅವರ ಸಂಸತ್ ಸದಸ್ಯತ್ವ ಕೂಡಾ ಅನರ್ಹಗೊಂಡಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Makhdoom Shahabuddin and Chaudhry Ahmed Mukhtar are being considered to replace Syed Yusuf Raza Gilani as the next Prime Minister of Pakistan, The News International reported. Pakistan's Supreme Court on Tuesday(Jun.19) disqualified Prime Minister Yousuf Raza Gilani from office.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more