ಮೆಡಿಕಲ್ ಟೆಸ್ಟಿಗೆ ನಿತ್ಯಾನಂದಗೆ ಕೋರ್ಟ್ ಆದೇಶ
ಬೆಂಗಳೂರು,
ಜೂನ್ 20: ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಕಳೆದ ವಾರ ಜಾಮೀನು ಕರುಣಿಸಿದ್ದ ರಾಮನಗರ ಸಿಜೆಎಂ ಮ್ಯಾಜಿಸ್ಟ್ರೇಟ್ ಕೋರ್ಟು ಇಂದು ಆಘಾತ ನೀಡಿದೆ. 'ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ಜತೆಗೆ ತಮ್ಮ ಧ್ವನಿ ಮಾದರಿಯನ್ನೂ ನೀಡಿ. ಎಲ್ಲ ರಿಪೊರ್ಟುಗಳು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕು' ಎಂದು ಬಿಡದಿಯ ಧ್ಯಾನಪೀಠಂ ಆಶ್ರಮದ ನಿತ್ಯಾನಂದಗೆ ಕೋರ್ಟ್ ತಾಕೀತು ಮಾಡಿದೆ. id="toptextpromo">ರಂಜಿತಾ
ರಾಸಲೀಲೆ ಪ್ರಕರಣದ ಸಂಬಂಧ ಸಿಐಡಿ ಪೊಲೀಸರು ಒಂದು ವರ್ಷದ ಹಿಂದೆಯೇ ನಿತ್ಯಾನಂದಗೆ ಸೂಚಿಸಿದ್ದರು. ಸುಮಾರು ಎಂಟು ಬಾರಿ ನೋಟಿಸ್ ನೀಡಿದ್ದರು. ಆದರೆ ನಿತ್ಯಾನಂದ ಯಾವುದಕ್ಕೂ ಜಪ್ಪಯ್ಯ ಎಂದಿರಲಿಲ್ಲ. ಇದೀಗ ಅನಿವಾರ್ಯವಾಗಿ ನಿತ್ಯಾನಂದ ಸ್ವಾಮಿಗಳು ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಳ್ಳಲೇಬೇಕಾಗಿದೆ. id='are-slot-1' class='oiad oi-axt oiadv'> id='top-searched-articles'>ನ್ಯಾಯಾಲಯದ
ಆದೇಶ ತಮ್ಮ ಕೈಸೇರುತ್ತಿದ್ದಂತೆ ನಿತ್ಯಾನಂದರನ್ನು ವಶಕ್ಕೆ ತೆಗೆದುಕೊಂಡು ಒಂದೊಂದೇ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲು ಮತ್ತು ಆತನ ಧ್ವನಿ ಮಾದರಿ ಪಡೆಯಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕಳೆದೊಂದು ವಾರದಲ್ಲಿ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡ ನಿತ್ಯಾನಂದಗೆ ಕೋರ್ಟ್ ಆಜ್ಞೆಯಿಂದ ಒಂದಷ್ಟು ಹಿನ್ನಡೆಯಾಗಿದೆ ಎನ್ನಬಹುದು.











Click it and Unblock the Notifications