ನಿತ್ಯಾಶ್ರಮದಲ್ಲಿ ಕಾಂಡೋಮ್ ಹಾಕಿದ್ದು ಕಿಡಿಗೇಡಿಗಳು
ಬಿಡದಿ, ಜೂನ್ 14: ನಿತ್ಯಾನಂದ ಮಹಾಪ್ರಭುವಿನ ಬಿಡದಿ ಆಶ್ರಮದ ಅಕ್ರಮಗಳನ್ನು ಸಮರ್ಥಿಸಿಕೊಂಡು ಮಾತನಾಡಿರುವ ವಿಶ್ವ ಹಿಂದೂ ಪರಿಷತ್ತಿನ ವಯೋವೃದ್ಧ ನಾಯಕ ಅಶೋಕ್ ಸಿಂಘಾಲ್ ಆಶ್ರಮದಲ್ಲಿ ಪೊಲೀಸರ ಕಣ್ಣಿಗೆ ಬಿದ್ದ ಕಾಂಡೋಮ್ ಗಳು ಮತ್ತಿತರ ವಸ್ತುಗಳನ್ನು ನಿತ್ಯಾನಂದ ಸ್ವಾಮಿಯ ಆಣೆಗೂ ಯಾರೋ ಕಿಡಿಗೇಡಿಗಳು ತಂದು ಆಶ್ರಮದಲ್ಲಿ ಹಾಕಿದ್ದಾರೆಯೇ ಹೊರತು ಅಪ್ಪಿತಪ್ಪಿಯೂ ನಿತ್ಯಾನಂದ ಮಹಾಪ್ರಭುಗಳು 'ಅದನ್ನು' ಬಳಸಿಲ್ಲ ಎಂಬ ಧಾಟಿಯಲ್ಲಿ ಸ್ವಾಮಿ ನಿತ್ಯಾನಂದರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

'ವಿಶ್ವ ಹಿಂದೂ ಪರಿಷತ್ ನಿತ್ಯಾನಂದ ಸ್ವಾಮಿ ಹಾಗೂ ಅವರ ಶಿಷ್ಯರ ಜತೆಗಿದೆ. ಧ್ಯಾನಪೀಠಕ್ಕೆ ಬೀಗ ಹಾಕುವ ಸರಕಾರದ ಕ್ರಮ ಸರಿಯಿಲ್ಲ. ಹಿಂದೂ ಸ್ವಾಮಿಗಳಿಗೆ ಅನ್ಯಾಯವಾದರೆ ವಿಹಿಂಪ ಖಂಡಿತ ಸಹಿಸುವುದಿಲ್ಲ. ನಿತ್ಯಾನಂದ ಸ್ವಾಮಿ ಪರ ರಾಷ್ಟ್ರಮಟ್ಟದಲ್ಲಿ ಧ್ವನಿಯೆತ್ತುತ್ತೇವೆ' ಎಂದು ಅವರು ಮಗದೊಮ್ಮೆ ನಿತ್ಯಾನಂದ ಸ್ವಾಮಿಗೆ ಅಂಖಡ ಬೆಂಬಲ ಸೂಚಿಸಿದ್ದಾರೆ.
ವಿಹಿಂಪ ಬೆಂಗಳೂರು ನಗರಾಧ್ಯಕ್ಷ ಟಿ. ವಿಜಯಕುಮಾರ್ ರೆಡ್ಡಿ ಬುಧವಾರ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಶೋಕ್ ಸಿಂಘಾಲ್ ಅವರು ನಿತ್ಯಾನಂದ ಸ್ವಾಮಿಗೆ ಬೆಂಬಲ ಘೋಷಿಸಿದ್ದಾರೆ.
Doctor certificate: ಈ ಮಧ್ಯೆ ಚನ್ನಪಟ್ಟಣ ಪೊಲೀಸ್ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯು ಗುರುವಾರ ಬೆಳಗ್ಗೆ ಸ್ವಾಮಿ ನಿತ್ಯಾನಂದನ ಆರೋಗ್ಯ ತಪಾಸಣೆ ನಡೆಸಿದ್ದು, 'ನಿತ್ಯಾನಂದನಿಗೆ ಎಲ್ಲವೂ ಸರಿಯಾಗಿದೆ' ಎಂದು doctor certificate ನೀಡಿದ್ದಾರೆ. ಪರೀಕ್ಷೆ ಮುಗಿಯುತ್ತಿದ್ದಂತೆ ಸಮಾಧಾನದ ನಿಟ್ಟುಸಿರು ಬಿಟ್ಟ ನಿತ್ಯಾನಂದ, ಬೆಳಗಿನ ಲಘು ಉಪಹಾರ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications