ನಿತ್ಯಾನಂದ ಏನು ರೇಪಿಸ್ಟ್ ಅಲ್ಲ, ಆರೋಪಿಯಷ್ಟೇ

ಬೆಂಗಳೂರು, ಜೂ.13: ಬಿಡದಿಯಲ್ಲಿರುವ ನಿತ್ಯಾನಂದ ಧ್ಯಾನಪೀಠದ ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿ ಸಿಕ್ಕ ಮೇಲೂ ಕೆಲ ಸ್ವಾಮೀಜಿಗಳು ಹಿಂದೂ ಧರ್ಮಪ್ರತಿಪಾದಕ, ಸ್ವಾಮಿ ನಿತ್ಯಾನಂದನನ್ನು ಬಂಧಿಸಬೇಡಿ ಎಂದು ಕೂಗು ಎಬ್ಬಿಸಿದ್ದಾರೆ.

ಬಿಡದಿ ಆಶ್ರಮದ ಶೋಧ ಕಾರ್ಯದ ವೇಳೆ ಆಶ್ರಮದಲ್ಲಿ ಕಾಂಡೋಮ್, ಡಿವಿಡಿಗಳು, ಎಂಪಿತ್ರೀ ಸಿಡಿಗಳು, ಗಾಂಜಾ ಮತ್ತು ಮದ್ಯದ ಬಾಟಲಿಗಳು ಸಿಕ್ಕಿದೆ. ಆದರೆ, ನಿತ್ಯಾನಂದ ಪರ ವಾದಿಸುತ್ತಿರುವ ಕೊಳದ ಮಠದ ಶಾಂತವೀರ ಸ್ವಾಮೀಜಿ, 'ನಿತ್ಯಾನಂದ ಏನು ರೇಪಿಸ್ಟ್ ಅಲ್ಲ, ಕೇವಲ ಆರೋಪಿಯಷ್ಟೇ, ಬಿಡದಿ ಧ್ಯಾನಪೀಠ ಪವಿತ್ರವಾದ ಸ್ಥಳ, ನಿತ್ಯಾನಂದ ಅವರಿಗೆ ಜಗತ್ತಿನಾದ್ಯಂತ ಭಕ್ತರಿದ್ದಾರೆ. ಮಧುರೈ ಅಧೀನಂ ಪೀಠಂ ಅಧಿಕಾರ ಅವರ ಕೈಲಿದೆ.

ಅವರಿಗೆ ಸ್ಪರ್ಶ ಚಿಕಿತ್ಸೆ ಗೊತ್ತು, ಸ್ಪರ್ಶ ಮಾತ್ರದಿಂದಲೇ ಅನೇಕ ರೋಗಗಳನ್ನು ಗುಣಪಡಿಸಿದ್ದಾರೆ. ಅನೇಕ ಜನ ಮಾನಸಿಕ ತೊಳಲಾಟಕ್ಕೆ ಪರಿಹಾರ ನೀಡಿದ ಭವರೋಗ ವೈದ್ಯ ಎನಿಸಿದ್ದಾರೆ.

ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸಹಿಸದ ಕೆಲವರು ಈ ರೀತಿ ಅಪಪ್ರಚಾರ ಮಾಡಿ, ಹಿಂದೂಧರ್ಮ ಪ್ರತಿಪಾದಕರನ್ನು ನಾಶ ಮಾಡಲು ಹುನ್ನಾರ ಮಾಡುತ್ತಿದ್ದಾರೆ.

ಆರೋಪ ಬಂದ ತಕ್ಷ, ಅಪರಾಧಿ ಎಂದು ಪರಿಗಣಿಸುವುದು ಎಷ್ಟರಮಟ್ಟಿಗೆ ಸರಿ? ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೂ ಕೋಟ್ಯಾಂತರ ರುಪಾಯಿ ಹಗರಣದಲ್ಲಿ ಭಾಗಿಯಾದ ಆರೋಪಗಳಿದೆ. ಆದರೆ, ಇದರಿಂದ ಅವರ ಗೌರವಕ್ಕೆ ಏನೂ ಧಕ್ಕೆಯಾಗಿಲ್ಲ.

ಆರತಿ ರಾವ್ ಎಲ್ಲಿ? : ನಿತ್ಯಾನಂದ ನಿಂದ ಪ್ರತಿನಿತ್ಯ ಲೈಂಗಿಕ ಕಿರುಕುಳಕ್ಕೆ ಒಳಗಾದೆ ಎಂದು ಆರೋಪಿಸುತ್ತಿರುವ ಮಹಿಳೆ ಆರತಿ ರಾವ್ ಓರ್ವ ಮಾನಸಿಕ ಅಸ್ವಸ್ಥೆ ಇರಬೇಕು. ವರ್ಷಾನುಗಟ್ಟಲೇ ಹಿಂಸೆ ಅನುಭವಿಸಿ ಕೂಡಾ ಸುಮ್ಮನಿದ್ದಕ್ಕೂ ಏಕೆ? ಇಷ್ಟು ದಿನ ಎಲ್ಲಿಗೆ ಹೋಗಿದ್ದರು.

ಜೀವ ಬೆದರಿಕೆ ಇದ್ದರೆ ಪೊಲೀಸರ ರಕ್ಷಣೆ ಏಕೆ ಪಡೆಯಲಿಲ್ಲ. ಕಾನೂನಿನ ಮೊರೆಗೆ ಏಕೆ ಹೋಗಲಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ವಿಷಯ ಗೊತ್ತಿಲ್ಲವೇ? ನಿತ್ಯಾನಂದ ಅವರು ತಪ್ಪು ಎಸೆಗಿದ್ದರೆ ಕೋರ್ಟ್ ಅವರಿಗೆ ಶಿಕ್ಷೆ ವಿಧಿಸುತ್ತದೆ. ನಾವು ಏಕೆ ಇಲ್ಲದ ಸಲ್ಲದ ಆರೋಪ ಹೊರೆಸಬೇಕು ಎಂದು ಶಾಂತವೀರ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಬಿಡದಿ ನಿತ್ಯಾನಂದ ಧ್ಯಾನಪೀಠಂ ನ ಚುಟುವಟಿಕೆ ಮೇಲೆ ಸರ್ಕಾರ ತನಿಖೆ ನಡೆಸುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಸಾರ್ವಜನಿಕರು ಆವೇಶಕ್ಕೆ ಬಿದ್ದು ಘರ್ಷಣೆ, ಆರೋಪ ಪ್ರತ್ಯಾರೋಪದಲ್ಲಿ ತೊಡಗುವುದರಲ್ಲಿ ಅರ್ಥವಿಲ್ಲ. ಬಿಡದಿ ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆದಿದೆ ಎಂಬ ಆರೋಪದ ಮೇಲೆ ಸಮಗ್ರ ತನಿಖೆ ನಡೆದು ಸತ್ಯಾಸತ್ಯತೆ ಹೊರಬೀಳಲಿ. ಅಲ್ಲಿ ತನಕ ನಿತ್ಯಾನಂದ ಕೇವಲ ಆರೋಪಿಯಷ್ಟೇ, ಅಪರಾಧಿಯಲ್ಲ ಎಂದು ಶಾಂತವೀರ ಸ್ವಾಮೀಜಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+