ಯಡಿಯೂರಪ್ಪಗೆ 13ರಂದು ಶುಭ ಸುದ್ದಿ ಕಷ್ಟ?

BS Yeddyurappa
ಬೆಂಗಳೂರು, ಜೂ.12: ಗಣಿ ಗುತ್ತಿಗೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಯಡಿಯೂರಪ್ಪ ಅವರ ಭವಿಷ್ಯವನ್ನು ಜೂ.13ರಂದು ನಿರ್ಧರಿಸಲಿದೆ.

ಸಿಬಿಐ ನ್ಯಾಯಾಲಯ ಜಾಮೀನು ನಿರಾಕರಿಸಿದರೆ ಯಡಿಯೂರಪ್ಪ ಅವರನ್ನು ಸಿಬಿಐ ತಕ್ಷಣವೇ ಬಂಧಿಸುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ಕಿಕ್ ಬ್ಯಾಕ್ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಗದಿದ್ದರೆ ಏನೂ ಮಾಡುವುದು ಎಂದು ಯಡಿಯೂರಪ್ಪ ಅವರ ಆಪ್ತರು ಚಿಂತಿತರಾಗಿದ್ದಾರೆ.

ಜಾಮೀನು ಕಷ್ಟ ಏಕೆ?: ಸಿಬಿಐ ಪರ ವಕೀಲ ಅಶೋಕ್ ಬಾನ್ ಅವರು ಮಂಡಿಸಿದ ವಾದದ ಪ್ರಕಾರ ಗಣಿ ಕಂಪನಿಗಳಿಂದ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ ಲಿ ಗೆ ಬರಬೇಕಿರುವ 917ಕ್ಕೂ ಅಧಿಕ ಕೋಟಿ ರು ಮೊತ್ತ ಇನ್ನೂ ಬಾಕಿ ಇದೆ.

ಗಣಿ ಗುತ್ತಿಗೆ ಅವ್ಯವಹಾರ ಎಲ್ಲವೂ ನಕಲಿ ದಾಖಲೆ, ನಕಲಿ ಕಂಪನಿಗಳ ಹೆಸರಿನಲ್ಲಿ ನಡೆದಿರುವುದರಿಂದ ಸರ್ಕಾರಕ್ಕೆ ಸಿಗಬೇಕಾದ ತೆರಿಗೆ, ರಾಜಸ್ವ ಮೊತ್ತ ತಲುಪಿಲ್ಲ. ಡಿನೋಟಿಫಿಕೇಷನ್ ಪ್ರಕರಣದಲ್ಲೂ ದಾಖಲೆಗಳನ್ನು ತಿದ್ದಿ, ನಕಲಿ ಮಾಡಿ ವ್ಯವಹಾರ ಮುಗಿಸಲಾಗಿದೆ.

ಹೀಗಾಗಿ ಸಿಬಿಐ ಹೆಚ್ಚಿನ ತನಿಖೆ ನಡೆಸದಿದ್ದರೆ ಸರ್ಕಾರಕ್ಕೆ ಇನ್ನಷ್ಟು ನಷ್ಟವಾಗುತ್ತದೆ. ಹಾಗೂ ಯಡಿಯೂರಪ್ಪ ಅವರ ಕಾಲದ ಅಕ್ರಮದ ಅಸಲಿ ಮೊತ್ತ ತಿಳಿಯುತ್ತದೆ ಎಂದು ವಾದಿಸಿದರು.

ಆದರೆ, ಸಿಬಿಐ ಪರ ವಕೀಲರ ವಾದವನ್ನು ಯಡಿಯೂರಪ್ಪ ಅವರ ಪರ ವಕೀಲ ಅಶೋಕ್ ಹಾರನಹಳ್ಳಿ ಅಲ್ಲಗೆಳೆದು, ಯಡಿಯೂರಪ್ಪ ಅವರು ಯಾವುದೇ ಅಕ್ರಮ ಎಸೆಗಿಲ್ಲ ಎಂದು ಕೋರ್ಟಿನಲ್ಲಿ ವಾದಿಸಿದರು.

ಯಡಿಯೂರಪ್ಪ ಅವರ ಅಕ್ರಮದ ಮೊತ್ತ ತಿಳಿಯದ ಕಾರಣ, ಹೀಗಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಸಿಬಿಐ ವಶಕ್ಕೆ ಯಡಿಯೂರಪ್ಪ ಅವರನ್ನು ವಹಿಸುವ ಸಾಧ್ಯತೆ ಹೆಚ್ಚಾಗಿದೆ.

ಯಡಿಯೂರಪ್ಪ ಅವರ ಡೈರಿಯಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಯಡಿಯೂರಪ್ಪ ಅವರ ಮಕ್ಕಳು ನಡೆಸುವ ಪ್ರೇರಣಾ ಎಜುಕೇಷನ್ ಹಾಗೂ ಸೋಷಿಯಲ್ ಟ್ರಸ್ಟ್ ಗೆ 20 ಕೋಟಿ ರು ನೀಡಲಾಗಿದೆ. ನಂತರ ಹಣವನ್ನು ವಿವೇಕಾನಂದ ಟ್ರಸ್ಟ್ ಗೆ ವರ್ಗಾಯಿಸಲಾಗಿದೆ. ಯಡಿಯೂರಪ್ಪ ಅವರು ಈ ಟ್ರಸ್ಟ್ ನ ಪ್ರಮುಖ ಟ್ರಸ್ಟಿಯಾಗಿರುವುದು ಗಮನಾರ್ಹ ಸಂಗತಿ.

ಭ್ರಷ್ಟಾಚಾರ, ಸಂಚು, ವಂಚನೆ, 1991ರ ಭೂ ಕಾಯಿದೆ ಉಲ್ಲಂಘನೆ ಮುಂತಾದ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅವರ ಮಕ್ಕಳು, ಅಳಿಯಂದಿರುಗಳ ಮೇಲೆ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಸಿಬಿಐ ವಕೀಲ ಅಶೋಕ್ ವಾದಿಸಿದರು.

ಯಡಿಯೂರಪ್ಪ ನಡೆ ನಿಗೂಢ: ಪರಿಷತ್ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಜೊತೆ ಜೊತೆಯಲ್ಲೇ ಸಾಗುತ್ತಿದ್ದರು. ನಾಳಿನ ತೀರ್ಪಿನ ನಂತರ ಯಡಿಯೂರಪ್ಪ ಅವರ ಜೊತೆ ಯಾರು ಇರುತ್ತಾರೆ. ಯಾರು ಅವರ ಸಂಗ ತೊರೆಯುತ್ತಾರೆ ಎಂಬುದು ನಿರ್ಧಾರವಾಗಲಿದೆ.

ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ ಗ್ಯಾರಂಟಿ ಎಂದಿರುವ ಸದಾನಂದ ಗೌಡರಿಗೆ ಕೂಡಾ ಯಡಿಯೂರಪ್ಪ ಬೆಂಬಲಿತ ಶಾಸಕ, ಸಚಿವರ ಉಪದ್ರವಕ್ಕೆ ನಾಳೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಪ್ರವಾಸ, ಹೊಸ ಪಕ್ಷ ಸೇರ್ಪಡೆ, ಬೇರೆ ಪಕ್ಷಕ್ಕೆ ಬೆಂಬಲ ಇತ್ಯಾದಿ ಸುದ್ದಿಗಳು ಸದ್ಯಕ್ಕೆ ನಿದ್ದೆ ಮಾಡುತ್ತಿದೆ.

ಐಪಿಸಿ ಸೆಕ್ಷನ್ 120 (b), 409, 420 ಭ್ರಷ್ಟಾಚಾರ ನಿಯಣತ್ರಣ ಕಾಯಿದೆಯಡಿ ಸೆಕ್ಷನ್ 7, 13 (2), 13(1) (c) (d) ಹಾಗೂ ಕರ್ನಾಟಕ ಭೂ ಕಾಯಿದೆ (ವರ್ಗಾವಣೆ ನಿಯಂತ್ರಣ) ಸೆಕ್ಷನ್ 9ರ ಅಡಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ಯಡಿಯೂರಪ್ಪ ಅವರನ್ನು A1 ಎಂದು ಗುರುತಿಸಿ, ಕೇಸು ದಾಖಲಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+