• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕತ್ವ ಪ್ರಶ್ನೆ: ನಂದೀಶ್ ರೆಡ್ಡಿಗೆ ಸುಪ್ರೀಂ ರಿಲೀಫ್

By Mahesh
|
Nandish Reddy
ನವದೆಹಲಿ, ಜೂ.12: ಕೆಆರ್ ಪುರಂನ ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಅವರ ಶಾಸಕತ್ವ ಅಸಿಂಧುಗೊಳಿಸಿ ಹೈಕೋರ್ಟಿನ ಏಕಸದಸ್ಯ ಪೀಠ ಶುಕ್ರವಾರ(ಜೂ.1) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ(ಜೂ.11) ತಡೆಯಾಜ್ಞೆ ನೀಡಿದೆ.

ನ್ಯಾ. ರಾಧಾಕೃಷ್ಣನ್ ಮತ್ತು ಜಗದೀಶ್ ಸಿಂಗ್ ಖೆಹರ್ ಅವರಿದ್ದ ರಜಾ ಕಾಲದ ಪೀಠ ಈ ಮಹತ್ವದ ಆದೇಶ ನೀಡಿದೆ. ಹೈಕೋರ್ಟ್ ನ್ಯಾ. ಶೈಲೇಂದ್ರ ಕುಮಾರ್ ಅವರು ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ: 2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕವಿತಾ ಮಹೇಶ್ ಸ್ಪರ್ಧಿಸಿದ್ದರು. ಆದರೆ, ಕವಿತಾ ಮಹೇಶ್ ಅವರ ನಾಮಪತ್ರ ತಿರಸ್ಕಾರವಾಗಿತ್ತು.

ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿ ಅಶೋಕ್ ಅವರ ಕ್ರಮವನ್ನು ಪ್ರಶ್ನಿಸಿ ಮುಖ್ಯ ಚುನಾವಣಾಧಿಕಾರಿಗಳಿಗೆ ಕವಿತಾ ಪತ್ರ ಬರೆದಿದ್ದರು. ಆದರೆ, ಚುನಾವಣಾಧಿಕಾರಿಗಳಿಂದ ಉತ್ತರ ಬರಲಿಲ್ಲ. ನಂತರ ಕವಿತಾ ಹೈಕೋರ್ಟ್ ಮೇಟ್ಟಿಲೇರಿದ್ದರು.

ಕವಿತಾ ಅವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟಿನ ಏಕಸದಸ್ಯ ಪೀಠ ಮೇಲ್ಕಂಡ ಆದೇಶವನ್ನು ಹೊರಡಿಸಿತ್ತು.

ಆದರೆ ಚುನಾವಣಾಧಿಕಾರಿಗಳು ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿಯವರ ಪ್ರಭಾವಕ್ಕೊಳಗಾಗಿ ನಾಮಪತ್ರವನ್ನು ಸಕಾರಣವಿಲ್ಲದೆ ತಿರಸ್ಕರಿಸಿರುವುದು ಕಂಡು ಬಂದಿದೆ.

ಅಧಿಕಾರಿಯ ನಿರ್ಲಕ್ಷದಿಂದ ಅಭ್ಯರ್ಥಿಯ ಭವಿಷ್ಯ ಕತ್ತಲೆಯಾಗಿದೆ. ಚುನಾವಣಾಧಿಕಾರಿ ಅಶೋಕ್ ವಿರುದ್ಧ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶ ನೀಡಿತ್ತು.

ಮರು ಚುನಾವಣೆ ಸಾಧ್ಯವೇ: ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಶಾಸಕ ನಂದೀಶ್ ರೆಡ್ಡಿ ಎನ್ ಎಸ್ ಅವರ ಶಾಸಕತ್ವ ಅಸಿಂಧುಗೊಂಡಿರುವುದರಿಂದ ಮುಂದಿನ ಆರು ತಿಂಗಳೊಳಗೆ ಮರು ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶಿಸಿತ್ತು.

ಸರ್ಕಾರದ ಅವಧಿ ಒಂದು ವರ್ಷ ಮಾತ್ರ ಇರುವುದರಿಂದ ಮತ್ತೊಮ್ಮೆ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಇದೆಯೇ? ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬಿಜೆಪಿ ಸುದ್ದಿಗಳುView All

English summary
Supreme Court on Jun.11 stayed High court order of KR Puram BJP MLA Nandish Reddy assembly election as void. Nandish Reddy's election was challenged by Kavitha Mahesh inter alia, on the ground that her nomination wad illegally not accepted by returning officer 2

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more